Thursday, September 17, 2026
Menu

ಹೈಕಮಾಂಡ್ ಅನುಮತಿ ಕೊಟ್ಟಾಗ ಸಚಿವ ಸಂಪುಟ ವಿಸ್ತರಣೆ ಮಾಡ್ತಾರೆ: ಸಚಿವ ಯತೀಂದ್ರ

ಸಚಿವ ಸಂಪುಟ ವಿಸ್ತರಣೆಗೆ ನಮ್ಮ ಹೈಕಮಾಂಡ್ ಅನುಮತಿ ಕೊಟ್ಟಾಗ ನಮ್ಮ ನಾಯಕರು ಹೋಗಿ ತೀರ್ಮಾನ ಮಾಡುತ್ತಾರೆ‌ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು, ಅವರು ಯಾವಾಗ ಹೇಳ್ತಾರೋ ಆಗ ನಮ್ಮ ನಾಯಕರು ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು. ಇಡೀ ರಾಜ್ಯದಲ್ಲಿ ಮಳೆ ಕೊರತೆ ಆಗಿದೆ. ಸಿಎಂ ಅವರು ರಾಜ್ಯದಲ್ಲಿ ಸಂಚಾರ ನಡೆಸಿ ಬರ

ನಾಲ್ಕು ತಿಂಗಳ ಹಿಂದೆ ಮದುವೆ: ಶಿರಾದಲ್ಲಿ ಪತ್ನಿಯ ಸುಸೈಡ್‌ ನೋಡಿ ಪತಿಯೂ ಆತ್ಮಹತ್ಯೆ

ತುಮಕೂರು ಶಿರಾ ತಾಲೂಕಿನ ಹನುಮನಹಳ್ಳಿಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಪತಿಯೂ ಸಾವಿಗೆ ಶರಣಾದ ಘಟನೆ ನಡೆದಿದೆ. ಶರಣ್ಯ (20), ಗಿರೀಶ್ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶರಣ್ಯ ಆತ್ಮಹತ್ಯೆ

ಬೆಳಗಾವಿಯಲ್ಲಿ ಮಗು ಜೊತೆ ತಾಯಿ ಆತ್ಮಹತ್ಯೆ: ಗಂಡನ ಮನೆಯವರ ಕಿರುಕುಳ ಆರೋಪ

ಬೆಳಗಾವಿಯ ಪೀರನವಾಡಿಯಲ್ಲಿ ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತ ತಾಯಿ ತನ್ನ ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯ ನಿವಾಸಿ ಪ್ರೇಮಾ ನಾಗೇಶ ತಳವಾರ (28) ತನ್ನ ಮೂರು ವರ್ಷದ

ಚಿತ್ರದುರ್ಗದ ಮಾಜಿ ಸಂಸದ ಎಚ್. ಹನುಮಂತಪ್ಪ ನಿಧನ

ಚಿತ್ರದುರ್ಗದ ಮಾಜಿ ಸಂಸದರು, ಹಿರಿಯ ಕಾಂಗ್ರೆಸ್ ಮುಖಂಡರು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಪರಿಶಿಷ್ಟ ಸಮುದಾಯದ ನಾಯಕ ಎಚ್. ಹನುಮಂತಪ್ಪ ಭಾನುವಾರ ನಿಧನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ  ಕಾರಣ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದಾಗ ಆರೋಗ್ಯ ಬಿಗಡಾಯಿಸಿದ್ದು,

ಕೂಡ್ಲಿಗಿಯಲ್ಲಿ ಸೊಪ್ಪು ತೆಗೆಯುವಾಗ ಜೋಡಿ ನಾಗರಹಾವು ಕಚ್ಚಿ ಮಹಿಳೆ ಸಾವು

ಜಾನುವಾರುಗಳ ಮೇವಿಗಾಗಿ ಮೆಕ್ಕೆಜೋಳ ಸೊಪ್ಪು ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ವಿಜಯನಗರದ ಕೂಡ್ಲಿಗಿಯ ಚೌಡಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಓಬಮ್ಮ (53) ಮೃತಪಟ್ಟ ಮಹಿಳೆ. ಸಿಟ್ಟಿಗೆದ್ದ ಸ್ಥಳೀಯರು ಮಹಿಳೆಗೆ ಕಚ್ಚಿ ಸಾಯಿಸಿದ ಜೋಡಿ ನಾಗರಹಾವುಗಳನ್ನು ಹೊಡೆದು

ಬಾಗೇಪಲ್ಲಿಯಲ್ಲಿ ಅಕ್ರಮ ವಾಸವಿರುವ ಪಾಕ್‌ ಮಹಿಳೆ, ಮಗ ಅರೆಸ್ಟ್‌

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ವಾಸವಿರುವ ಪಾಕಿಸ್ತಾನದ ಮಹಿಳೆ ಫರ್ಹಾನಾಜ್ ಮತ್ತು ಮಗ ಮೊಹಮ್ಮದ್ ಫರ್ದೀನ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ

ಮಂಗಳೂರಿನಲ್ಲಿ ಎಂಟು ಬಾಂಗ್ಲಾದೇಶಿಗಳ ಬಂಧನ

ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಮಂಗಳೂರಿನ ಮುಕ್ಕಾ ಪ್ರದೇಶದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು  ಪತ್ತೆ ಹಚ್ಚಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ  ತಿಳಿಸಿದ್ದಾರೆ.

ಅ.11 ವಿಜೃಂಭಣೆಯ ದಸರಾ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ: ಸಿಎಂ ಡಿಕೆ ಶಿವಕುಮಾರ್‌

ನಾಡಹಬ್ಬ ದಸರಾ ಹಬ್ಬವನ್ನು ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಸಂಸ್ಕೃತಿ ಪರಂಪರೆಗಳಿಗೆ ಅನುಗುಣವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾಡಹಬ್ಬ ದಸರಾ- 2026 ಆಚರಣೆ

ಕಳ್ಳನೋಟು ದಂಧೆ: ತುಮಕೂರಿನಲ್ಲಿ ಆರು ಆರೋಪಿಗಳ ಬಂಧನ

ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸರು ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ ಖೋಟಾ ನೋಟಿನ ಜಾಲವನ್ನು ಭೇದಿಸಿ, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆ

ಕುಡಿಯುವ ನೀರು: ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ.

ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ  ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ