Thursday, October 08, 2026
Menu

ನಾನಾ ಪಾಟೇಕರ್‌ ನಿಧನ! ತಲೆಮಾರುಗಳು ನೆನೆಯುವಂತಹ ನಟ ನಾನಾ ಪಾಟೇಕರ್‌: ಮೋದಿ ಸಂತಾಪ

ಉದಯಕಾಲ ನ್ಯೂಸ್‌, ದೆಹಲಿ: ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳಿದ್ದಾರೆ.ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ ಗುರುವಾರ ಬೆಳಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
‘ಎಕ್ಸ್’ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಪಾಟೇಕರ್ ಅವರ ಬಹುಮುಖಿ ಪ್ರತಿಭೆ, ಸೃಜನಶೀಲತೆ ಮತ್ತು ಅವರು ನಿರ್ವಹಿಸಿದ ಮರೆಯಲಾಗದ ಪಾತ್ರಗಳನ್ನು ಸ್ಮರಿಸಿದರು. ಜೊತೆಗೆ, ನಟನ ಮುಕ್ತ ಹಾಗೂ ನೇರ ನುಡಿಯ ಸ್ವಭಾವವನ್ನೂ ಶ್ಲಾಘಿಸಿದ್ದಾರೆ.

ನಾನಾ ಪಾಟೇಕರ್ ಅವರಲ್ಲಿದ್ದಂತಹ ನಟನ ತೀವ್ರತೆ, ವಿಶಿಷ್ಟ ವ್ಯಕ್ತಿತ್ವ ಮತ್ತು ಪ್ರಭಾವಶಾಲಿ ಉಪಸ್ಥಿತಿಯು ಕೆಲವೇ ಕೆಲವು ನಟರಲ್ಲಿ ಮಾತ್ರ ಕಂಡುಬರುತ್ತದೆ. ಅವರು ತಾವು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಅದ್ಭುತವಾದ ವೈವಿಧ್ಯತೆ ಹಾಗೂ ಸೃಜನಶೀಲತೆಯನ್ನು ತುಂಬಿದರು. ಮುಂದಿನ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ನಮಗೆ ನೀಡಿದರು. ತಮ್ಮ ನಂಬಿಕೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯದ, ಮುಕ್ತ ಹಾಗೂ ನೇರವಾದ ಅಭಿಪ್ರಾಯಗಳಿಗಾಗಿಯೂ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.
ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಪಾಟೇಕರ್ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, ಅವರ ನಿಧನವು ಆಳವಾದ ಶೂನ್ಯವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಎಂದಿದ್ದಾರೆ.
ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ – ನಾನಾ  ನಿಧನಕ್ಕೆ ಗೋವಾ ಸಿಎಂ ಸಂತಾಪ
ಪಣಜಿ: ಬಾಲಿವುಡ್‌ ಹಿರಿಯ ನಟ ನಾನಾ ಪಾಟೇಕರ್ (Nana Patekar) ನಿಧನಕ್ಕೆ ಗೋವಾ (Goa) ಸಿಎಂ ಪ್ರಮೋದ್ ಸಾವಂತ್ (Pramod Sawant) ಸಂತಾಪ ಸೂಚಿಸಿದ್ದಾರೆ. ನಾನೊಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಪಾಟೇಕರ್ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಅವರು ಗೋವಾಗೆ ಬಂದಾಗಲೆಲ್ಲಾ ತಪ್ಪದೇ ನನಗೆ ಕರೆ ಮಾಡುತ್ತಿದ್ದರು. ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಅವರು ಒಬ್ಬರಾಗಿದ್ದರು. ಅಲ್ಲದೇ ಸಮಾಜ ಸೇವಕರಾಗಿದ್ದರು. ಗೋವಾದೊಂದಿಗೆ ಆಳವಾದ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ. ನಾನಾ ಪಾಟೇಕರ್ ಫೌಂಡೇಶನ್’ ಮೂಲಕ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಗೋವಾದಲ್ಲಿ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯದಲ್ಲಿ ತಮ್ಮ ಸಮಾಜ ಸೇವೆಯನ್ನು ವಿಸ್ತರಿಸಲು ಯೋಜಿಸುತ್ತಿದ್ದರು. ಅವರು ನಮ್ಮನ್ನು ಅಗಲಿದ್ದು ದುಃಖಕರ ಸಂಗತಿ ಎಂದು ಅವರು ಹೇಳಿದ್ದಾರೆ.
ಕೇವಲ ಎರಡು ದಿನಗಳ ಹಿಂದಷ್ಟೇ ಪಾಟೇಕರ್ ಅವರು ಯುವ ಕೊಂಕಣಿ ಕಲಾವಿದರೊಂದಿಗೆ ನೃತ್ಯ ಮಾಡುತ್ತಿದ್ದ ವಿಡಿಯೋವನ್ನು ನೋಡಿದ್ದನ್ನು ಅವರು ನೆನಪಿಸಿಕೊಂಡರು. ಇನ್ನೂ, ಈ ದುಃಖದ ಸಮಯದಲ್ಲಿ ನಾನು ಅವರ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ನಟನ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಇಂದು ನಿಧನರಾದ ಬಹುಭಾಷಾ ನಟ ನಾನಾ ಪಾಟೇಕರ್(Nana Patekar) 4 ದಿನದ ಹಿಂದೆ ಗೋವಾದಲ್ಲಿ(Goa) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ನಾ ಪಾಟೇಕರ್ ಅವರು ಅಕ್ಟೋಬರ್ 4ರಂದು ಗೋವಾದ ಡೋನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.‘ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್’ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಬಿಳಿ ಕುರ್ತಾ ಹಾಗೂ ಬಿಳಿ ಶಾಲು (ಗಮ್ಚಾ) ಧರಿಸಿ ವೇದಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ನಾನಾ ಪಾಟೇಕರ್ ಅವರು ಗುರುವಾರ ಹೃದಯ ಸ್ತಂಭನದಿಂದ (Cardiac Arrest) ವಿಧಿವಶರಾಗಿದ್ದಾರೆ. ಅವರ ಹಠಾತ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿ ವಲಯದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.
#NanaPatekar #NarendraModi #PramodSawant #BollywoodNews #UdayakalaNews #RIPNanaPatekar #MarathiCinema #IndianCinem

Related Posts

Leave a Reply

Your email address will not be published. Required fields are marked *