ಜಿಲ್ಲಾ ಸುದ್ದಿ
ವಿಚ್ಛೇದಿತೆಯೊಂದಿಗೆ ಪ್ರೇಮವಿವಾಹ: ಅರತಕ್ಷತೆ ರಾತ್ರಿಯೇ ಯುವಕನ ಕೊಲೆ
ಬಳ್ಳಾರಿಯ ಬಟ್ಟಿ ಏರಿಯಾದಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಆರತಕ್ಷತೆ ದಿನವೇ ರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವುದಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಭೀ ರಸೂಲ್ ಹತ್ಯೆಯಾದ ಯುವಕ. ನಭೀ ರಸೂಲ್ ಯುವತಿಯೊಬ್ಬರನ್ನು ಪ್ರೀತಿಸಿ ಇತ್ತೀಚೆಗೆ ವಿವಾಹವಾಗಿದ್ದರು. ಗುರುವಾರ ಸಂಜೆ ಯುವಕನ ಮನೆಯಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಯುವತಿಗೆ ಈ ಹಿಂದೆ ಮದುವೆಯಾಗಿದ್ದು, ವಿಚ್ಛೇದನ
ನಕಲಿ ಚಿನ್ನ ನೀಡಿ 85 ಲಕ್ಷ ರೂ. ವಂಚಿಸಿದ್ದ ಮೂವರ ಬಂಧನ
ಹಳೆ ಮನೆಯ ಪಾಯ ತೋಡುವಾಗ ‘ಚಿನ್ನದ ನಿಧಿ’ ಸಿಕ್ಕಿದೆ ಎಂದು ನಂಬಿಸಿ ಮಹಾರಾಷ್ಟ್ರದ ಉದ್ಯಮಿಯೊಬ್ಬರಿಗೆ 85 ಲಕ್ಷ ರೂಪಾಯಿ ವಂಚಿಸಿದ್ದ ಮೂವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಸಚಿನ್ ಗೋಂಧಳಿ ಅಲಿಯಾಸ್ ಸ್ಯಾಂಡಿ (21), ನ್ಯಾಮತಿ ತಾಲೂಕಿನ
ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಯುವಕ
ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಯುವತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಕ್ಯಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ
ಅಕ್ರಮ ದಂಧೆಕೋರರ ಜೊತೆಗೆ ಪೊಲೀಸ್ ಪಾರ್ಟ್‌ನರ್‌ಶಿಪ್: ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ ಜಿಲ್ಲೆಯಲ್ಲಿ ಡಗ್ಸ್ ಪೆಡ್ಲರಗಳು, ಒಸಿ ಆಡಿಸುವವರು, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟನ್‌ಶಿಪ್ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಡಿ ಪಾರಾದವರು, ಗೂಂಡಾ
ಹಣದಾಸೆಗೆ ಸೆನೆಗಲ್‌ನಲ್ಲಿ ವೇಶ್ಯಾವಾಟಿಕೆಗೆ ಮಗಳ ಮಾರಿದ ಚಿಕ್ಕಮಗಳೂರು ದಂಪತಿ
ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತೆ ನಂದಿತಾ ವೀಡಿಯೊ ಮೂಲಕ ಸಹಾಯ ಯಾಚಿಸಿದ ನಂತರ ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಆಕೆಯ ಪೋಷಕರ ವಿರುದ್ಧ ಕಠಿಣ
ಸಿಂಧನೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಒಂದುವರೆ ವರ್ಷದ ಮಗು ಬಲಿ
ರಾಯಚೂರಿನ ಸಿಂಧನೂರು ತಾಲೂಕಿನ ಕೆ.ಹಂಚಿಕಾಳ ಕ್ಯಾಂಪ್ ಪ್ರದೇಶದಲ್ಲಿ ಆರೇಳು ಬೀದಿನಾಯಿಗಳು ಮನೆ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ ದಾಳಿ ಮಾಡಿವೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದೆ. ಅನಂ ನಾಯಿಗಳ ದಾಳಿಗೆ ಬಲಿಯಾದ
ಧಾರವಾಡದಲ್ಲಿ ಅನಸ್ತೇಶಿಯಾ ತಜ್ಞನ ಕೊಲೆಗೈದ ನೇತ್ರ ವೈದ್ಯೆ ಪತ್ನಿ
ಧಾರವಾಡದ ಅಪಾರ್ಟ್‌ಮೆಂಟ್‌ನಲ್ಲಿ ಚಿರಾಯು ಆಸ್ಪತ್ರೆಯ ಅನಸ್ತೇಷಿಯಾ ತಜ್ಞ ಡಾ. ಕಿರಣ್ ಅವರನ್ನು ಕೊಲೆ ಮಾಡಲಾಗಿದ್ದು, ನೇತ್ರ ವೈದ್ಯೆಯಾಗಿರುವ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10 ವರ್ಷದ ಮಗನ ಮೇಲೂ ಹಲ್ಲೆ ನಡೆದಿದ್ದು, ಆತನ ಸ್ಥತಿ ಗಂಭೀರವಾಗಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ
ಕೃಷಿ, ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ ನಾಯಕ ಹೆಚ್. ಹನುಮಂತಪ್ಪ: ಸಿಎಂ
ನಮ್ಮ ಹಿರಿಯ ನಾಯಕರಾದ ಹನುಮಂತಪ್ಪ ಅವರ ದೇಹ ನಮ್ಮ ಜೊತೆ ಇಲ್ಲದಿರಬಹುದು, ಆದರೆ ಅವರ ಕೆಲಸಗಳು, ಆಚಾರ ವಿಚಾರಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಚಿತ್ರದುರ್ಗದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹೆಚ್. ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ
ಬಿಡದಿ ರೈತರ ಒಪ್ಪಿಗೆಯಿದ್ದರೆ ಭೂಮಿ ತೆಗೆದುಕೊಳ್ಳಿ: ನಿಖಿಲ್ ಕುಮಾರಸ್ವಾಮಿ
ರೈತರ ಭಾವನೆಗಳ ವಿರುದ್ದ ಸರಕಾರ ಹೋಗುತ್ತಿದೆ, ಬಿಡದಿಯಲ್ಲಿ 9 ರೆವೆನ್ಯೂ ಗ್ರಾಮಗಳಿದ್ದು, 26 ಹಳ್ಳಿಗಳು ಬರುತ್ತವೆ. ಶೇ. 80 ರೈತರಿಂದ ಒಪ್ಪಿಗೆ ಪಡೆದಿದ್ದೇವೆಂದು ಸರಕಾರ ಹೇಳುತ್ತಿದೆ. ಆದರೆ ಇಲ್ಲಿನ ಶೇ. 90 ರಿಂದ 95 ಜನ ರೈತರು ಸರಕಾರಕ್ಕೆ ಭೂಮಿ ನೀಡಿಲ್ಲ.
ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಸಂಘಟನೆಗಳ ಪ್ರತಿಭಟನೆ
ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನೀರನ್ನು ಜಿಲ್ಲೆಯ ಎಲ್ಲಾ ನಾಲೆಗಳಿಗೂ ಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಸಂಘ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ




