ಹಾಸನದ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ಸೋದರರ ಮಧ್ಯೆ ಜಮೀನು ವಿಚಾರಕ್ಕೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡಿದೆ. ಗ್ರಾಮದ ರಘು (44) ಕೊಲೆಯಾದವರು, ಅಣ್ಣ ದೇವರಾಜ್ ಕೊಲೆ ಮಾಡಿದ ಆರೋಪಿ.
ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ, ತಮ್ಮ ರಘುಗೆ ಅಣ್ಣ ದೇವರಾಜ ಚಾಕುವಿನಿಂದ ಇರಿದದಿದಾನೆ, ಗಂಭೀರ ಗಾಯಗೊಂಡ ರಘುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ರಘು ಮೃತಪಟ್ಟಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ತಮ್ಮ ರಘುಗೆ ಅಣ್ಣ ದೇವರಾಜ್ ಚಾಕುವಿನಿಂದ ಇರಿದಿದ್ದರಿಂದ. ಗಾಯಗೊಂಡಿದ್ದ ರಘು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಘು ಮೃತಪಟ್ಟಿದ್ದಾರೆ.
ಪತ್ನಿಯ ಅನೈತಿಕ ಸಂಬಂಧ: ಬೇಸತ್ತ ಪತಿ ಆತ್ಮಹತ್ಯೆ
ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಪತ್ನಿ ಅನೈತಿಕ ಸಂಬಧ ಹೊಂದಿರುವುದಕ್ಕೆ ನೊಂದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಿಹಳ್ಳಿ ಗ್ರಾಮದ ದೊರೆ (27) ಆತ್ಮಹತ್ಯೆ ಮಾಡಿಕೊಂಡವರು.
ತಿಪಟೂರು) ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು ಎನ್ನಲಾಗಿದೆ.
ದೊರೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವೀಡಿಯೊ ಮಾಡಿಟ್ಟಿದ್ದು, ಪತ್ನಿಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ವಿಚಾರ ಆಕೆಯ ಪೋಷಕರಿಗೆ ತಿಳಿದ್ದರೂ ಮಗಳ ಪರವಾಗಿ ಮಾತನಾಡುತ್ತಿದ್ದರು. ನಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಆದರೂ ಆಕೆ ನನಗೆ ದ್ರೋಹ ಬಗೆದಿದ್ದಾಳೆ. ನನ್ನ ಮೇಲೆ ಮಾಟ-ಮಂತ್ರ ಮಾಡಿಸಿದ್ದಾಳೆ ಎಂದು ಹೇಳಿದ್ದಾರೆ.
ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ಕರ್ನಾಟಕ ಪೊಲೀಸ್‌ಗೆ ಹೇಳ್ತಾ ಇದ್ದೀನಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನನ್ನ ಮಾತು ಕೇಳಿ, ಅವಳ ಫೋನ್ ರೆಕಾರ್ಡಿಂಗ್ ತಗೊಳಿ, ಅವಳನ್ನ ಮಾತ್ರ ಬಿಡ್ಬೇಡಿ. ನನ್ನಂತ ಮುಗ್ಧನಿಗೆ ಮೋಸ ಮಾಡಿದ್ದಾಳೆ. ಈ ವಿಷಯದಲ್ಲಿ ಪೊಲೀಸ್ ಮೇಲೆ ನಂಬಿಕೆ ಇದೆ ಎಂದು ಕಣ್ಣೀರಿಡುತ್ತಾ ಹೇಳಿದ್ದಾರೆ. ವೀಡಿಯೊ ಮಾಡಿದ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


