ವಿಜಯನಗರ
ಕೊಪ್ಪಳದಲ್ಲಿ ರಸ್ತೆ ಅಪಘಾತ: ಯುವಕರಿಬ್ಬರ ಸಾವು
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದ ಬಳಿ ಟಾಟಾ ಏಸ್ ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಡಿ ಹರ್ಲಾಪುರ ನಿವಾಸಿಗಳಾದ ಹುಲ್ಲೇಶ್ ವಾಲಿಕಾರ, ಮಾರುತಿ ಮೃತಪಟ್ಟವರು. ಈ ಯುವಕರು ಮುಕುಂದ್ ಸ್ಟೀಲ್ ಕಂಪನಿಯ ಉದ್ಯೋಗಿಗಳಾಗಿದ್ದರು. ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಮುಂದವರಿದಿದೆ. ಕೊಡಗಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ
ಕೊಪ್ಪಳದಲ್ಲಿ ಕೋತಿ ತಳ್ಳಿದ್ದಕ್ಕೆ ಬಿದ್ದು ಮೃತಪಟ್ಟ ಮಹಿಳೆ
ಕೊಪ್ಪಳದ ಬಿಟಿ ಪಾಟೀಲ್ ನಗರದಲ್ಲಿ ಕೋತಿಯೊಂದು ತಳ್ಳಿದ ರಭಸಕ್ಕೆ ಕುಸಿದುಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಜಮುನಿಸಾ ಬೇಗಂ (91) ಮೃತಪಟ್ಟವರು. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದಾಗ ಬಂದ ಕೋತಿ ಅವರನ್ನು ತಳ್ಳಿದೆ, ಪರಿಣಾಮ ನಜಮುನಿಸಾ ಬೇಗಂ ಅವರ ತಲೆಗೆ ಪೆಟ್ಟು
ಕೂಡ್ಲಿಗಿಯಲ್ಲಿ ಪ್ರಜಾಸೇವಾ ಆಂದೋಲನ: ಕೌಂಟರ್‌ಗಳಿಗೆ ತೆರಳಿ ಖುದ್ದು ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ
ರಾಜ್ಯ ಮಟ್ಟದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೂಡ್ಲಿಗಿಯಲ್ಲಿ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದರ ಜೊತೆಗೆ ವಿವಿಧ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಾರ್ವಜನಿಕರು
ಸಿಎಂ ಡಿಕೆ ಶಿವಕುಮಾರ್ ಆಗಮನಕ್ಕೂ ಮುನ್ನವೇ ಕೂಡ್ಲಿಗಿಯಲ್ಲಿ ಜನಸಾಗರ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಗಮನಕ್ಕೂ ಮುನ್ನವೇ ಕೂಡ್ಲಿಗಿ ಪಟ್ಟಣದಲ್ಲಿ ಆಯೋಜಿಸಿರುವ ‘ಪ್ರಜಾಸೇವಾ’ ಆಂದೋಲನ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ಜನಸಾಗರವೇ ಕಂಡುಬಂತು. ತಾಲೂಕಿನ ವಿವಿಧ ಗ್ರಾಮಗಳಿಂದ ಬೆಳಗ್ಗಿನಿಂದಲೇ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು
ಪ್ರವಾಸಕ್ಕೆ ಬಂದಿದ್ದ ತಾಯಿ ಮಗಳು ಹಂಪಿಯಲ್ಲಿ ನದಿಪಾಲು
ವಿಜಯನಗರದ ಹೊಸಕೋಟೆ ತಾಲೂಕಿನಲ್ಲಿರುವ ಹಂಪಿ ಪ್ರವಾಸಕ್ಕೆ ಬಂದಿದ್ದ ತಾಯಿ ಮತ್ತು ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಆಂಧ್ರ ಪ್ರದ್ರೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದಿಂದ ಸಂಬಂಧಿಕರೊಂದಿಗೆ ಬಂದಿದ್ದ ಯಾಸ್ಮೀನ್(13) ಹಾಗೂ ತಾಯಿ ಶಾಹೀನ್(38) ಹಂಪಿ ಬಳಿಯ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾದವರು. ಅಡುಗೆ
ಮೀನು ಹಿಡಿಯಲು ನದಿಗಿಳಿದ ಮೂವರು ಯುವಕರು ನಾಪತ್ತೆ
ಮೀನು ಹಿಡಿಯಲೆಂದು ತುಂಗಭದ್ರಾ ನದಿಗೆ ಇಳಿದಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ. ರಾಜ (22), ಯಮನಪ್ಪ (20) ಹಾಗೂ ಅಜ್ಜಪ್ಪ (26) ನಾಪತ್ತೆಯಾಗಿರುವ ಯುವಕರು ಎಂದು ಗುರುತಿಸಲಾಗಿದೆ. ಇವರು
ಹಂಪಿಯಲ್ಲಿ ಹೋಂ ಸ್ಟೇ: 54 ಅಧಿಕಾರಿಗಳ ವಿರುದ್ಧ ಲೋಕಾಯಕ್ತ ದೂರು ದಾಖಲು
ಹಂಪಿ ಸಂರಕ್ಷಿತ ಪ್ರದೇಶಗಳ್ಲಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಿರುವ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಹಂಪಿ ವಿಶ್ವಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದ್ದು, ಅಲ್ಲಿ ನಿಯಮಗಳ ಉಲ್ಲಂಘನೆ ವಿಚಾರವನ್ನು ನ್ಯಾಯಮೂರ್ತಿ
ಬಾಲಕಿ ಜೊತೆಗಿನ ಸಂಬಂಧ: ಮದುವೆಯಾಗಿ 20 ದಿನಕ್ಕೆ ಹೆಂಡತಿಯ ಕೊಲೆ
ಮದುವೆಯಾಗಿ ಇಪ್ಪತ್ತು ದಿನಗಳಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿಯಲ್ಲಿ ನಡೆದಿದೆ. ಹೊಲದಿಂದ ಕರಿಬೇವು ಕಿತ್ತು ತರಲೆಂದು ಬೈಕ್‌ನಲ್ಲಿ ಕರೆದೊಯ್ದ ಪತಿ, ತನ್ನ ಸ್ನೇಹಿತನ ಜತೆ ಸೇರಿ ಆಕೆಯ ಕತ್ತು ಹಿಸುಕಿ
ಕೂಡ್ಲಿಗಿಯಲ್ಲಿ ಸೊಪ್ಪು ತೆಗೆಯುವಾಗ ಜೋಡಿ ನಾಗರಹಾವು ಕಚ್ಚಿ ಮಹಿಳೆ ಸಾವು
ಜಾನುವಾರುಗಳ ಮೇವಿಗಾಗಿ ಮೆಕ್ಕೆಜೋಳ ಸೊಪ್ಪು ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ವಿಜಯನಗರದ ಕೂಡ್ಲಿಗಿಯ ಚೌಡಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಓಬಮ್ಮ (53) ಮೃತಪಟ್ಟ ಮಹಿಳೆ. ಸಿಟ್ಟಿಗೆದ್ದ ಸ್ಥಳೀಯರು ಮಹಿಳೆಗೆ ಕಚ್ಚಿ ಸಾಯಿಸಿದ ಜೋಡಿ ನಾಗರಹಾವುಗಳನ್ನು ಹೊಡೆದು
ಉಗಾಂಡಾದಲ್ಲಿ ವಿಜಯನಗರದ ಮಹಿಳೆ ಆತ್ಮಹತ್ಯೆ: ಮೃತದೇಹ ತರಿಸಲು ನೆರವಾದ ಸಿರಿಗೆರೆ ಶ್ರೀ
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಮಹಿಳೆ ಉಗಾಂಡಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಂದು ಎಚ್. ಅಜ್ಜೋಳ (22) ಆತ್ಮಹತ್ಯೆ ಮಾಡಿಕೊಂಡವರು. ಬಿಂದು ಮತ್ತು ಚಂದ್ರಶೇಖರ್ ಪ್ರೀತಿಸಿ 2025ರ ಜೂನ್ 7 ರಂದು ಮದುವೆಯಾಗಿದ್ದರು. ಬಳಿಕ ಉಗಾಂಡದ ಖಾಸಗಿ




