Menu

ಶಾಸಕ ಬಿ.ಆರ್. ಪಾಟೀಲ್ ಸಮಸ್ಯೆಗಳಿದ್ದರೆ ಸಿಎಂ ಜೊತೆ ಚರ್ಚಿಸಲಿ: ಸಚಿವ ಪ್ರಿಯಾಂಕ್‌ ಖರ್ಗೆ

ಶಾಸಕರಾದ ಬಿ.ಆರ್. ಪಾಟೀಲ್ ಅವರು ಹಿರಿಯರು.‌ ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ‌ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿ.ಆರ್.‌ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ

ಚಿತ್ತಾಪುರದಲ್ಲಿ ಹೆರಿಗೆ ವೇಳೆ ತಾಯಿ ಮಗು ಸಾವು: ನರ್ಸ್‌ ಎಡವಟ್ಟು ಆರೋಪ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿವೃತ್ತ ನರ್ಸ್ ಎಡವಟ್ಟಿನಿಂದ ತಾಯಿ ಮಗು ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಇಂಗಳಗಿ ಗ್ರಾಮದ ನಿವಾಸಿ ಶ್ರೀದೇವಿ ಪ್ರಭಾನೂರ್ (28) ಹಾಗೂ ನವಜಾತ ಶಿಶು ಮೃತಪಟ್ಟಿದೆ. ಮೃತ ಶ್ರೀದೇವಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

ರಾಂಪೂರದಲ್ಲಿ ಕತ್ತೆಗಳ ರೇಸ್ ಸಂಭ್ರಮ

ಬಾಗಲಕೋಟೆ ಜಿಲ್ಲೆಯ ರಾಂಪೂರನಲ್ಲಿ ಗ್ರಾಮದ ಲಕ್ಕವ್ವದೇವಿಗೆ ಉಡಿ ತುಂಬುವ ನಿಮಿತ್ತ ನಡೆದ ಕತ್ತೆಗಳ ರೇಸ್‌ ಜನಮನ ಸೆಳೆಯಿತು. ಕತ್ತೆಗಳ ರೇಸ್ ನೋಡುವುದಕ್ಕೆ ರಸ್ತೆ ಅಕ್ಕಪಕ್ಕ ಮುಗಿಬಿದ್ದ ಜನ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಲಕ್ಕವ್ವ ದೇವಿ ದೇವಸ್ಥಾನದಿಂದ ಬನಹಟ್ಟಿ ಪೋಲಿಸ್‌

ಯಾದಗಿರಿಯಲ್ಲಿ ಆಸ್ತಿ ಕಲಹ: ಗ್ರಾಮಾಭಿವೃದ್ಧಿ ಕಚೇರಿ ಎದುರೇ ತಮ್ಮನ ಹತ್ಯೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳೂರ ಗ್ರಾಮದಲ್ಲಿ ಜಂಟಿ ಆಸ್ತಿ ಬೇರ್ಪಡಿಸುವ ವಿಚಾರಕ್ಕಾಗಿ ನಡೆದ ಕಲಹದಲ್ಲಿ ಒಡಹುಟ್ಟಿದ ತಮ್ಮನನ್ನೇ ಅಣ್ಣನನ್ನು ಕೊಂದಿದ್ದಾನೆ. ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮಾಭಿವೃದ್ದಿ ಕಚೇರಿ ಎದುರೇ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಶಿವಪ್ಪ (44) ಹತ್ಯೆಯಾದ

Murder: ಮಹಿಳೆಯ ಕೊಲೆಗೆ ಅಕ್ರಮ ಸಂಬಂಧ ಕಾರಣ: ಕಲಬುರಗಿ ಪೊಲೀಸ್‌ಗೆ ಸತ್ಯ ತೋರಿಸಿದ ಸಲಾಕೆ

ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಲಾಪುರ್ ಗ್ರಾಮದ ಬಳಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಯ ಗುರುತಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಪೊಲೀಸರು ಕೊಲೆಗಾರ ಯಾರು, ಏಕೆ ಕೊಲೆ ಮಾಡಿದ್ದಾನೆಂದು ಪತ್ತೆ ಹಚ್ಚುವಲ್ಲಿ

ಆರ್‌ಸಿಬಿ ವಿಜಯೋತ್ಸವ ದುರಂತ: ಲೋಪವಾಗಿದ್ದರೆ ತನಿಖೆಯಲ್ಲಿ  ಹೊರಬರಲಿದೆ ಎಂದ ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ದುರಂತ ಕುರಿತು ತನಿಖೆ ನಡೆಯುತ್ತಿದೆ, ಲೋಪದೋಷವಾಗಿದ್ದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿಯ ಐವಾನ್ ಇ ಶಾಹಿ‌ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಯುವಕರ ಸಾವು ಯಾವುದೇ ಸರ್ಕಾರಕ್ಕೆ ಹೆಮ್ಮೆಯ

Lokayukta: ಕಲಬುರಗಿಯಲ್ಲಿ ಲೋಕಾಯುಕ್ತ ಪೊಲೀಸರಿಂದ ಜೆಸ್ಕಾಂ ಇಂಜಿನಿಯರ್ ಅರೆಸ್ಟ್‌

ಕಲಬುರಗಿಯಲ್ಲಿ ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಖರ ಬಹುರೂಪಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗಂಗಾ ಕಲ್ಯಾಣ ಸ್ಕೀಂ ಬಿಲ್ ಮಂಜೂರಾತಿ ಹಾಗೂ ಟಿಸಿ ಕೊಡಲು ಎರಡು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಜೆಸ್ಕಾಂ ಇಂಜಿನಿಯರ್ ಶೇಖರ

ಕಿತ್ತೂರಿನಲ್ಲಿ ಹೆದ್ದಾರಿ ಸ್ವಚ್ಛಗೊಳಿಸುತ್ತಿದ್ದಾಗ ಟ್ಯಾಂಕರ್‌ ಹರಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್​ನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿ ಮೂಲದ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಕೆಲಸ ಮಾಡುತ್ತಿದ್ದಾಗ ಈ ದುರಂತ

ಕಲಬುರಗಿ ಡಿಸಿಗೆ ಅವಹೇಳನ: ಎಂಎಲ್‌ಸಿ ಎನ್. ರವಿಕುಮಾರ್ ಬಂಧನ ಸಾಧ್ಯತೆ

ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಮೇ 24 ರಂದು ಬಿಜೆಪಿಯ ʻಕಲಬುರಗಿ ಚಲೋʼ ರ‍್ಯಾಲಿ ವೇಳೆ  ಮಾತನಾಡುವಾಗ ರವಿಕುಮಾರ್‌, ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಲಬುರಗಿಯ ಸ್ಟೇಷನ್

ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿ ಹಾಳು ಮಾಡಿದ ಬಿಜೆಪಿ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಈ ಹಿಂದೆ ಅಪಾರ ಗಣಿ ಹಣದಿಂದ ಇಡೀ ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದಾರೋ ಅದೇ ಬಿಜೆಪಿ  ನಾಯಕರು ಕಲಬುರಗಿ ರಿಪಬ್ಲಿಕ್ ಆಗಿದೆ ಎಂದರೆ ಜನ ನಂಬುತ್ತಾರೆಯೇ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ