Tuesday, September 29, 2026
Menu

ಬೈಲಹೊಂಗಲದಲ್ಲಿ ವಿಚ್ಛೇದನ ಕೇಳಿದ ಪತ್ನಿಯ ಕೊಲೆಗೈದ ಪತಿ

ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದಲ್ಲಿ ವಿಚ್ಛೇದನ ಕೇಳಿದ ಪತ್ನಿಯನ್ನು ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಗೊಲ್ಲರ ಓಣಿ ನಿವಾಸಿ ಲಕ್ಷ್ಮಿ ಮಾಡಮಗೇರಿ (31) ಕೊಲೆಯಾದ ಮಹಿಳೆ.

ರಾಜು ಮಾಡಮಗೇರಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪಿ. ಐದು ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಎರಡು ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಲಕ್ಷ್ಮೀ ವಿಚ್ಛೇದನ ನೀಡುವಂತೆ ಕೇಳಿದ್ದಳು.  ಆಕೆ ವಿಚ್ಛೇದನ ಕೇಳಿದ್ದಕ್ಕೆ ರಾಜು ಕೋಪಗೊಂಡಿದ್ದ. ಸಂಚು ಮಾಡಿ ಪತ್ನಿ ಕೆಲಸಕ್ಕೆ ಹೋಗಿ ಬರುವಾಗ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆಗೈದು ಪರಾರಿ ಆಗಿರುವಆತನ ಬಂಧಿಸಲು ಬೈಲಹೊಂಗಲ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವೃದ್ಧೆಗೆ ಟೀ ನೀಡಿ ಚಿನ್ನದ ಸರ ಎಗರಿಸಿದ ಸಹಪ್ರಯಾಣಿಕ

ಬೆಂಗಳೂರಿನ ಸ್ಯಾಟಲೈಟ್‌ ಬಸ್‌ ನಿಲ್ದಾನದಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರಿಗೆ ಸಹಪ್ರಯಾಣಿಕ ಟೀ ಕೊಟ್ಟು ಪುಸಲಾಯಿಸಿ 29 ಗ್ರಾಂ ಚಿನ್ನದ ಸರ ಕದ್ದಿರುವ ಘಟನೆ ನಡೆದಿದೆ.

ಚೆನ್ನಮ್ಮ ಸರ ಕಲೆದುಕೊಂಡವರು, ಆಕೆ ಮೈಸೂರಿನಲ್ಲಿರುವ ಮಗಳ ಮನೆಗೆ ಹೋಗಲೆಂದು ದೊಡ್ಡಬಳ್ಳಾಪುರದ ತಿಮ್ಮನಹಳ್ಳಿಯಿಂದ ಹೊರಟ್ಟಿದ್ದು, ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಂದು ಟಿಕೆಟ್‌ ತೆಗೆದುಕೊಂಡು ಬಸ್‌ ಹತ್ತಿದ್ದಾರೆ.

ಬಸ್‌ನಲ್ಲಿ ಕುಳಿತಿದ್ದ ಚೆನ್ನಮ್ಮ ಅವರ ಪಕ್ಕ 45 ವರ್ಷದ ವ್ಯಕ್ತಿ ಸಹಪ್ರಯಾಣಿಕನ ಸೋಗಿನಲ್ಲಿ ಬಂದು ಕುಳಿತಿದ್ದು, ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಟೀ ತರುವುದಾಗಿ ಹೇಳಿ ಬ್ಯಾಗ್‌ ಅನ್ನು ಆಕೆಯ ಪಕ್ಕದಲ್ಲೇ ಇಟ್ಟು ಹೋಗಿ 2 ಕಪ್‌ಗಳಲ್ಲಿ ಟೀ ತಂದಿದ್ದು, ಚೆನ್ನಮ್ಮರಿಗೆ ಕುಡಿಯಲು ನೀಡಿದ್ದಾನೆ. ಆ ಟೀ ಕುಡಿದಿದ್ದು, ಆತನಿಗೆ ದಾಳಿಂಬೆ ಹಣ್ಣನ್ನು ನೀಡಿದ್ದಾಳೆ.

ಕೆಲವೇ ಹೊತ್ತಲ್ಲಿ ಚೆನ್ನಮ್ಮ ಬಸ್‌ನಲ್ಲಿ ನಿದ್ದೆಗೆ ಜಾರಿದ್ದು, ಬಳಿಕ ಬಸ್‌ನಿಂದ ಕೆಳಗಿಳಿದ ನಂತರ 29 ಗ್ರಾಂ ಚಿನ್ನದ ಸರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಗಾಬರಿಗೊಂಡ ಆಕೆ ಮಗನಿಗೆ ವಿಚಾರ ತಿಳಿಸಿದ್ದು, ಈ ಸಹಪ್ರಯಾಣಿಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮರುದಿನ ಚಿನ್ನದ ಸರ ಕಳ್ಳತನವಾಗಿರುವ ಕುರಿತು ಬ್ಯಾಟರಾಯನಪುರ ಪೋಲಿಸ್‌ ಠಾಣೆಗೆ ತೆರೆಳಿ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *