Thursday, September 24, 2026
Menu

ಗಣೇಶ ವಿಸರ್ಜನೆ: ಕೆರೆಯಲ್ಲಿ ಮುಳುಗಿ ಯುವಕ ಸಾವು

ಶಿವಮೊಗ್ಗದ ಭದ್ರಾವತಿ ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ   ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ  ನಡೆದಿದೆ. ದೇವರಹಳ್ಳಿ ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ೨೦ ವರ್ಷದ ರಾಕೇಶ್‌ ಮೃತಪಟ್ಟಿರುವ ಯುವಕ. ಈತ ಭದ್ರಾವತಿಯಲ್ಲಿ ಪದವಿ ಓದುತ್ತಿದ್ದ. ಭಾನುವಾರ ಸಂಜೆ ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ. ಮೆರವಣಿಗೆ ರಾತ್ರಿ ದೇವರಹಳ್ಳಿ ಕೆರೆ ಬಳಿ ತಲುಪಿತ್ತು. ಗಣೇಶ ವಿಸರ್ಜನೆ ವೇಳೆ ಆಯತಪ್ಪಿ ರಾಕೇಶ್ ನೀರಿನಲ್ಲಿ

ಕಸ್ತೂರಿರಂಗನ್ ವರದಿ ಸಂಪೂರ್ಣ ರದ್ದಾಗಬೇಕು: ಆರಗ, ಕಿಮ್ಮನೆ ಒತ್ತಾಯ

ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಮಲೆನಾಡಿನ ಜನರ ಬದುಕು ಮತ್ತು ಅಭಿವೃದ್ಧಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ತೀರ್ಥಹಳ್ಳಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ಯೋಜನೆಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ.

ಸಹಕಾರ ಪದ್ಧತಿಯಿಂದ ರೈತರ ಪ್ರಗತಿ: ಸಿಎಂ ಅಭಿಮತ

ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ.‌ ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು. ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ

ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು ವ್ಯಕ್ತಿ ಸಾವು

ಶಿವಮೊಗ್ಗದಲ್ಲಿ ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  ನಗರದ ಜೇನು ಕುಮಾರ್ ಮೃತಪಟ್ಟವರು. ಸೆಪ್ಟಂಬರ್‌ ಎಂಟರಂದು ಜೇನು ಕುಮಾರ್ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಅಡಿಕೆ ಹೊರತೆಗೆದು ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ

ಅಡ್ಡಾದಿಡ್ಡಿ ಆಟೊ ಚಾಲನೆ: ಶಿವಮೊಗ್ಗದಲ್ಲಿ ಚಾಲಕನ ಬಂಧನ

ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹಾಗೂ ಅಪಾಯಕಾರಿಯಾಗಿ ಆಟೊ ಚಲಾಯಿಸುತ್ತಿದ್ದ ಚಾಲಕನನನ್ನು ಬಂಧಿಸಿರುವ ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ NH-69 ಆಯನೂರು ಗೇಟ್ ಸರ್ಕಲ್ ಸಮೀಪ ಆಟೊವನ್ನು ಚಾಲಕ

ಓದು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಚೆನ್ನಾಗಿ ಓದು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ನೊಂದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಸೃಷ್ಟಿ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ, ನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಪೋಷಕರು ಚೆನ್ನಾಗಿ

ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಮಹಿಳೆ: ಹೆಣ್ಣು ಮಕ್ಕಳಿಬ್ಬರು ನಾಪತ್ತೆ

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹಕ್ಕೆ ನೊಂದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದು, ಮಹಿಳೆ ಮತ್ತು ಮಗನನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ, ಆದರೆ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಚಿತ್ರದುರ್ಗದ ಮಹಿಳೆ ನದಿಗೆ ಹಾರಿದ್ದು, ಮಹಿಳೆ ಹಾಗೂ ಆಕೆಯ 11 ತಿಂಗಳ

ಹಣಿಗೇರಿ ವನ್ಯಜೀವಿ ವಲಯದಲ್ಲಿ ಬೇಟೆಗಾರರ ಬಂಧನ

ಶಿವಮೊಗ್ಗ ತಾಲೂಕಿನ ಹಣಿಗೇರಿ ವನ್ಯಜೀವಿ ವಲಯದ ಸಿರಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಸಂಚು ರೂಪಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ​ಚೋರಡಿ ವಡೆಯರಕೊಪ್ಪ ಗ್ರಾಮದ ಲೋಕೇಶ್ ಎಸ್‌ಡಿ, ಸಚಿನ್ ಎಂ, ಅರುಣ್ ಕುಮಾರ್ ಹಾಗೂ ಸುಬ್ಬರಾಯ ಬಂಧಿತ ಆರೋಪಿಗಳು.

ಹೆಗ್ಗೋಡಿನಲ್ಲಿ ಕಣಜ ಹುಳು ಕಡಿದು ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪ ಕಣಜ ಹುಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಎರಡನೇ ತರಗತಿ ಓದುತ್ತಿದ್ದ ನಿಶ್ಚಿತ್‌ ಮೃತಪಟ್ಟ ಬಾಲಕ. ಅತ್ತಿಸರದಲ್ಲಿ ಈ ದುರಂತ ನಡೆದಿದ್ದು, ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಣಜ ಹುಳುವಿನ ಗೂಡು

ಶಿವಮೊಗ್ಗ ಕೋರ್ಟ್‌ಗೆ ಮತ್ತೆ ಬಾಂಬ್‌ ಬೆದರಿಕೆ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಈ ಮೇಲ್ ಮೂಲಕ  ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಗುರುವಾರ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ವ್ಯಕ್ತಿಯಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ ಬಾಂಬ್ ಇರಿಸಲಾಗಿದೆ ಎಂಬ