Tuesday, September 29, 2026
Menu

ಕಲಬುರಗಿಯಲ್ಲಿ ಅನೈತಿಕ ಸಂಬಂಧ ಶಂಕೆ: ಹೆಂಡತಿಯ ಕೊಲೆ

ಕಲಬುರಗಿ ನಗರದ ಶರಣಶಿರಸಗಿ ಬಳಿ ಹೆಂಡತಿಯ ಶೀಲ ಶಂಕಿಸಿ ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ. ರೇಣುಕಾ ಶಿಂಧೆ (38) ಕೊಲೆಯಾದ ಮಹಿಳೆ.

ಕೆಲವು ವರ್ಷಗಳ ಹಿಂದೆ ರೇಣುಕಾ ಶಿಂಧೆ ಸಂಜಯ್‌ ಎಂಬಾತನನ್ನು ಮದುವೆಯಾಗಿ ಶರಣಸಿರಸಗಿ ಬಳಿ ವಾಸವಾಗಿದ್ದರು. ರೇಣುಕಾ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಂಜಯ್‌ ಅನುಮಾನ ಹೊಂದಿದ್ದ. ಈ ಕುರಿತು ಇಬ್ಬರ ನಡುವೆ ಹಲವು ಬಾರಿ ಜಗಳವೂ ನಡೆದಿದೆ ಎನ್ನಲಾಗಿದೆ.

ಸೋಮವಾರ ರಾತ್ರಿಯೂ ಇಬ್ಬರ ನಡುವೆ ಇದೇ ಕಾರಣಕ್ಕೆ ಜಗಳ ನಡೆದಿದ್ದು, ರೇಣುಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಾಸು ವಿಚಾರಕ್ಕೆ ವ್ಯಕ್ತಿಯ ಕೊಲೆ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ರುಂಡ-ಮುಂಡ ಬೇರೆಯಾಗಿದ್ದ ಯುವಕನ ಶವ ಪತ್ತೆ ಪ್ರಕರಣವನ್ನು ಗಾಣಗಾಪುರ ಪೊಲೀಸರು ಭೇದಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಈ ಹತ್ಯೆ ನಡೆದಿದೆ ಎಂಬುದು ಬಯಲಾಗಿದೆ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಹೆದ್ದಾರಿ ಪಕ್ಕದ ಜಮೀನಿನಲ್ಲೇ ಶವ ಕೊಳೆತಿತ್ತು, ಪೊಲೀಸರು ತನಿಕೆ ಕೈಗೊಂಡಾಗ ಗೊಬ್ಬರು ಗ್ರಾಮದ 22 ವರ್ಷದ ಖಲೀಂ ಸಾಬ್ ನಾಪತ್ತೆಯಾಗಿದ್ದ‌ ಎಂಬ ಮಾಹಿತಿ ಸಿಕ್ಕಿತ್ತು.‌ ಕುಟುಂಬಸ್ಥರನ್ನ ಸ್ಥಳಕ್ಕೆ‌ ಕರೆಸಿತೋರಿಸಿದಾಗ ಆತನೇ ಎಂಬುದು ಗೊತ್ತಾಗಿದೆ.

ಖಲೀಂ‌ ಸಾಬ್‌ ಮನೆಯವರು ಕೊಲೆ‌ ಕೇಸ್ ದಾಖಲಿಸಿದ್ದರು.‌ ಪೊಲೀಸ್‌ ತನಿಕೆ ವೇಳೆ ಇದು ಕೊಲೆ ಎನ್ನುವುದು ಬಯಲಾಗಿದೆ. ಹಣದ ವಿಚಾರವಾಗಿ ನಂದಿಕೂರ ತಾಂಡಾದ ಸಂದೀಪ್‌ ಪವಾರ್ ಮತ್ತು ಸಂದೀಪ್‌ ಚವ್ಹಾಣ್ ಕೊಲೆ‌ ಮಾಡಿ ಪರಾರಿ ಆಗಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿ‌ಸಿ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.

ಆರೋಪಿಗಳು ತಮ್ಮೂರಿನಿಂದ ಗಾಣಗಾಪುರಕ್ಕೆ ಹೋಗಿ ವಾಪಸ್ ಬರುವಾಗ ಬೈಕ್ ಪೆಟ್ರೋಲ್ ಖಾಲಿಯಾಗಿದ್ದು ತಳ್ಳಿಕೊಂಡು ಬರುತ್ತಿದ್ದರು. ಆಗ ಖಲೀಂ ಸಾಬ್ ಪೆಟ್ರೋಲ್ ತಂದು ಕೊಡುತ್ತೇನೆ, ನನಗೆ ಹಣ ಕೊಡಬೇಕು ಎಂದಿದ್ದರು. ಅದರಂತೆ ಪೆಟ್ರೋಲ್ ತಂದು ಕೊಟ್ಟಿದ್ದು, ಆರೋಪಿಗಳು 200 ರೂ ನೀಡಿದ್ದಾರೆ. ಆದರೆ ಹೆಚ್ಚು ಹಣ ಬೇಕು ಎಂದು ಕಲೀಂ ಕೇಳಿದ್ದರು. ಖಲೀಂ ಮತ್ತು ಆರೋಪಿಗಳ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಖಲೀಂನ ಕೊಲೆ ಮಾಡಿದ್ದಾರೆ. ಶವವನ್ನು ತೊಗರಿ ಬೆಳೆದ ಜಮೀನನಲ್ಲಿ ಎಸೆದು ಪರಾರಿ ಆಗಿದ್ದಾರೆ. ಖಲೀಂ ಮೊಬೈಲ್ ಬಳಕೆ ಮಾಡದಿರುವುದರಿಂದ ಕೇಸ್ ಪತ್ತೆ ಹಚ್ಚುವುದು ಸವಾಲಾಗಿತ್ತು.

Related Posts

Leave a Reply

Your email address will not be published. Required fields are marked *