Saturday, September 26, 2026
Menu

ಗಣೇಶ ವಿಸರ್ಜನೆ: ಬೆಳಗಾವಿಯಲ್ಲಿ ಯುವಕ ಸಾವು

ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ವಿಶ್ವೇಶ್ ನಾಯಕ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ವಿಶ್ವೇಶ್ ಗಣಪತಿ ವಿಸರ್ಜನೆ ಮಾಡಲು ಸ್ನೇಹಿತರೊಂದಿಗೆ ಜೊತೆ ತೆರಳಿದ್ದು, ವಿಸರ್ಜನೆ ಮಾಡಿ ವಾಪಾಸ್ ಬರುವಾಗ ಈ ದುರಂತ ಸಂಬವಿಸಿದೆ. ಸ್ನೇಹಿತರ ಎದುರೇ ಯುವಕ ಕೆರೆಯಲ್ಲಿ ಮುಳುಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.

ಗಣಪತಿ ವಿಸರ್ಜನೆಯಲ್ಲಿ ಡಿಜೆ: ೧೫ ಮಂದಿ ವಿರುದ್ಧ ಎಫ್‌ಐಆರ್‌

ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ಅನುಮತಿ ಇಲ್ಲದೆ ಡಿಜೆ ಬಳಸಿದ ಆರೋಪದಡಿ ೧೫ ಜನರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್ ದಾಖಲಿಸಿದ ಪೊಲೀಸರ ವಿರುದ್ಧ ವಿಹೆಚ್‌ಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಡೆಸಿಬಲ್ ಚೆಕ್ ಮಾಡಿಸುವ ತಾಕತ್ ಅನ್ನು ಪೊಲೀಸರು ಪ್ರದರ್ಶಿಸಬೇಕು. ಅಲ್ಲಿ ಎಫ್‌ಐಆರ್ ದಾಖಲು ಮಾಡ್ತಾರಾ, ಐಪಿಎಲ್ ಆಯೋಜಕರು 124 ಡೆಸಿಬಲ್ ರೀಚ್ ಆಯ್ತು ಅಂತ ತೋರಿಸುತ್ತಾರೆ. ಅವರ ಮೇಲೆ ಕೇಸ್ ದಾಖಲಿಸುತ್ತಾರ ಎಂದು ಪ್ರಶ್ನಿಸಿದ್ದಾರೆ.

Related Posts

Leave a Reply

Your email address will not be published. Required fields are marked *