ಉಡುಪಿ
ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿದ್ದ ಯುವಕರಿಬ್ಬರ ಬಂಧನ
ಪ್ರಕರಣವೊಂದರ ಆರೋಪಿಗೆ ಜಾಮೀನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿರುವ ಆರೋಪದಡಿ ಉಡುಪಿ ಪೊಲೀಸರು ಯುವಕರಿಬ್ಬರನ್ನು ಬಂಧಿಸಿದ್ದಾರೆ. ಬಂಟ್ವಾಳದ ಉಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿ ನೋಮಾನ್ ಎಂಬಾತನಿಗೆ ನ್ಯಾಯಾಲಯದಲ್ಲಿ ಜಾಮೀನು ನೀಡುವ ವೇಳೆ ಫಾರೂಕ್, ಪ್ರಶಾಂತ್ ಎಂಬವರ ಆಧಾರ್ ಕಾರ್ಡ್‌ಗೆ
ಕ್ಷುಲ್ಲಕ ಜಗಳ: ಬ್ರಹ್ಮಾವರದಲ್ಲಿ ತಂದೆ,ತಾಯಿಯ ಹತ್ಯೆಗೈದ ಮಗ
ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಮಗನೊಬ್ಬ ತಂದೆ–ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉಡುಪಿಯ ಬ್ರಹ್ಮಾವರದ ಗಾಂಧಿನಗರದಲ್ಲಿ ನಡೆದಿದೆ. ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಹತ್ಯೆಗೀಡಾದವರು. ಮಗ ಶಾಹಿದ್ ಅಲಿ (31) ಕೊಲೆ ಆರೋಪಿಯಾಗಿದ್ದು,
ಕುಂದಾಪುರದಲ್ಲಿ ಗುಂಡಿಕ್ಕಿ ವ್ಯಕ್ತಿಯ ಹತ್ಯೆ
ಕುಂದಾಪುರದ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬರಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದವರು. ಐವನ್ ರಿಚರ್ಡ್ ಕೆಲವು ವ್ಯವಹಾರ ನಡೆಸುತ್ತಿದ್ದರು. ಮೊದಲ ಪತ್ನಿಯನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎಂದು
ರಾಹುಲ್ ಗಾಂಧಿ ವಂಶ ಧ್ವಂಸ ಬೆದರಿಕೆ: ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ಕಾಂಗ್ರೆಸ್ ವಿರುದ್ಧ
20 ಅಡಿ ಆಳದ ಬಾವಿಯಲ್ಲಿ ಅನ್ನ ನೀರಿಲ್ಲದೆ ಮೂರು ದಿನ: ಒಟಿಪಿಯಿಂದ ಬದುಕಿದ ಜೀವ
ಆಕಸ್ಮಿಕವಾಗಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ 60 ವರ್ಷದ ವ್ಯಕ್ತಿಯೊಬ್ಬರು ಮೂರು ದಿನ ಅನ್ನ ನೀರು ಇಲ್ಲದೆ ಪವಾಡ ಸದೃಶವಾಗಿ ಸುರಕ್ಷಿತವಾಗಿ ಹೊರ ಬಂದಿರುವ ಘಟನೆ ಉಡುಪಿಯ ಕೊಡವೂರಿನಲ್ಲಿ ನಡೆದಿದೆ. ಇದಕ್ಕೆ ಕಾರಣ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಮೊಬೈಲ್‌ಗೆ ಬಂದಿರುವ
ನೌಕಾಪಡೆ ಮಾಹಿತಿ ಪಾಕ್‌ಗೆ ರವಾನೆ: ಉಡುಪಿಯಲ್ಲಿ ಮತ್ತೊಬ್ಬ ಅರೆಸ್ಟ್
ಭಾರತೀಯ ನೌಕಾ ಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬನನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆಗಳ ಗೌಪ್ಯ ಮಾಹಿತಿಯನ್ನು
ಮುಂಬೈ ಉದ್ಯಮಿಗೆ ನಾಲ್ಕು ಕೋಟಿ ವಂಚಿಸಿದ ಉಡುಪಿ ದಂಪತಿ
ಉಡುಪಿ ಮೂಲದ ದಂಪತಿ ಮುಂಬೈ ಉದ್ಯಮಿಗೆ ನಾಲ್ಕು ಕೋಟಿ ರೂಪಾಯಿಗೂ ಹೆಚ್ಚಿನ ವಂಚನೆ ಆರೋಪ ಕೇಳಿಬಂದಿದೆ. ಉಡುಪಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿ, ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದ ಪ್ರಕರಣವನ್ನು ಮಂಗಳೂರು ಪೊಲೀಸ್ ಆಯುಕ್ತರು ಮರು ತನಿಖೆಗೆ ಆದೇಶಿಸಿದ್ದಾರೆ. ಹರಾಜಿಗೆ ಬಂದ ಫ್ಲ್ಯಾಟ್,
ಉಡುಪಿಯ ಯುವಕ ಅಬುಧಾಬಿಯಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 49 ಕೋಟಿ ರೂ.
ಉಡುಪಿಯ ಯುವಕನೊಬ್ಬ ಸ್ನೇಹಿತನೊಂದಿಗೆ ಸೇರಿ ಖರೀದಿಸಿದ ಅಬುಧಾಬಿಯ ಲಕ್ಕಿ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಲಭಿಸಿದೆ. ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದು, 20 ಮಿಲಿಯನ್ ದಿರಮ್ ಬಹುಮಾನ ಸಿಕ್ಕಿದೆ. ಅಬುಧಾಬಿಯಲ್ಲಿ ಬಿಗ್ ಟಿಕೆಟ್
ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಡಿಕ್ಕಿ: 9 ಮಂದಿಗೆ ಗಾಯ
ಟಿಪ್ಪರ್ ಲಾರಿ, ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ವಿದ್ಯಾರ್ಥಿಗಳು ಸೇರಿದಂತೆ 9 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉಡುಪಿಯ ತಲ್ಲೂರು ನೇರಳಕಟ್ಟೆಯ ಶೇಟ್ಟರಕಟ್ಟೆ ತಿರುವಿನ ಹಾಜರಿ ಬಳಿ ನಡೆದಿದೆ. ನೇರಳಕಟ್ಟೆಯಿಂದ ತಲ್ಲೂರು ಕಡೆಗೆ ಬರುತ್ತಿದ್ದ ಕೇರಳ
ಉದ್ಯಮಿ, ಶಿಕ್ಷಣ ತಜ್ಞ ನಿಟ್ಟೆ ಡಾ. ಎನ್. ವಿನಯ ಹೆಗ್ಡೆ ನಿಧನ
ಅವಿಭಜಿತ ದಕ್ಷಿಣ ಕನ್ನಡದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ವಿನಯ ಹೆಗ್ಡೆ (86) ಅವರು ಗುರುವಾರ ಬೆಳಗಿನ ಜಾವ ನಿಧನರಾದರು. ಶಿಕ್ಷಣ ತಜ್ಞ, ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಅವರು, ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.




