ಬೆಳಗಾವಿ
Heart attack death: ಬೆಳಗಾವಿಯಲ್ಲಿ ಯೋಧ ಹೃದಯಾಘಾತಕ್ಕೆ ಬಲಿ
ಬೆಳಗಾವಿ ನಗರದ ಅನಗೋಳದಲ್ಲಿ ಬಜಾರ್‌ನಲ್ಲಿ ಏಕಾಏಕಿ ಎದೆನೋವಿನಿಂದ ಕುಸಿದು ಬಿದ್ದು ಯೋಧ ಮೃತಪಟ್ಟಿದ್ದಾರೆ. ಯೋಧ ಏಕಾಏಕಿ ಕುಸಿದು ಬಿದ್ದು ಅಸು ನೀಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಜೆಯಲ್ಲಿ ಊರಿಗೆ ಬಂದಿದ್ದ ಇಬ್ರಾಹಿಂ ದೇವಲಾಪುರ (37) ಮೃತಪಟ್ಟ ಯೋಧ. ಕುಸಿದು ಬಿದ್ದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವು ಸಂಭವಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಕೆಲವೇ ದಿನಗಳಲ್ಲಿ 8 ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಹಾಸನ, ಬೆಳಗಾವಿ,
ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಮೂವರು ಸಾವು
ಬೆಳಗಾವಿ: ತಾಯಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೂವರು ಮೃತಪಟ್ಟ ದಾರುಣ ಘಟನೆ ನಗರದಲ್ಲಿ ನಡೆದಿದೆ. ಬೆಳಗಾವಿ ನಗರದ ಜೋಷಿಮಾಳ್ ನಿವಾಸಿ ತಾಯಿ ಮಂಗಳಾ (44), ಮಗ ಸಂತೋಷ್ ಕುರಡೇಕರ್, ಸುವರ್ಣ ಮೃತಪಟ್ಟಿದ್ದು, ಸುನಂದಾ
ಶಾಸಕ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ಗುಂಡು ಹಾರಾಟ ಪ್ರಕರಣ ದಾಖಲು!
ಬೆಳಗಾವಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪುತ್ರ ಸಂತೋಷ್ ಜಾರಕಿಹೊಳಿ ವಿರುದ್ಧ ಜಿಲ್ಲೆಯ ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಇತ್ತೀಚೆಗೆ ನಡೆದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಹಾಗೂ
ಆಟೋದಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ
ಮದುವೆಗೆ ಮನೆಯಲ್ಲಿ ಒಪ್ಪಿಗೆ ದೊರೆಯದ ಕಾರಣಕ್ಕೆ ಪ್ರೇಮಿಗಳು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನವಳ್ಳಿ ಪಟ್ಟಣ ನಿವಾಸಿಗಳಾದ ರಾಘವೇಂದ್ರ (28) ಮತ್ತು ರಂಜಿತಾ ಚೋಬರಿ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಸ್ತೆ ಮಧ್ಯೆ ಗುಂಡು ಹಾರಿಸಿ ಹುಟ್ಟು ಹಬ್ಬ: ಕುಡಚಿ ಗ್ರಾ.ಪಂ ಸದಸ್ಯ ಪೊಲೀಸ್ ಅತಿಥಿ
ರಸ್ತೆ ಮಧ್ಯೆದಲ್ಲೇ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿರುವ ಪ್ರಕರಣ ಬೆಳಗಾವಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ. ಕುಡಚಿ ಗ್ರಾಮ ಪಂಚಾಯತಿ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಬಂಧಿತ ವ್ಯಕ್ತಿ. ಎರಡು
ಉಕ್ಕಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭೆ: ತಟದಲ್ಲಿ ಪ್ರವಾಹಭೀತಿ
ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ಅದರ ಉಪ ನದಿಗಳು ಮತ್ತು ಘಟಪ್ರಭಾ ನದಿಗಳ ನೀರಿನ ಒಳ ಹರಿವಿನಲ್ಲಿ ತೀವ್ರ ಏರಿಕೆಯಾಗಿ ಪ್ರವಾಹದ ಭೀತಿ ಆವರಿಸಿದೆ. ಕೃಷ್ಣಾ ನದಿಯ ಒಳ ಹರಿವು 1 ಲಕ್ಷ ಕ್ಯೂಸೆಕ್
ಸರ್ಕಾರದ ವಿರುದ್ಧ ಮತ್ತೆ ಶಾಸಕ ರಾಜು ಕಾಗೆ ಧ್ವನಿ
ತಮ್ಮದೇ ಸರ್ಕಾರದ ಲೋಪ ದೋಷಗಳನ್ನು ಎತ್ತಿ ಹಿಡಿದ ಶಾಸಕ ರಾಜು ಕಾಗೆ, ಸರ್ಕಾರದ ನೀತಿ ಖಂಡಿಸಿ ರಾಜೀಜಿನಾಮೆ ನೀಡಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. ವಸತಿ ಇಲಾಖೆಯಲ್ಲಿ ಲಂಚ ನಡೆಯುತ್ತಿದೆ ಎಂಬ ಶಾಸಕ ಬಿ ಆರ್ ಪಾಟೀಲ್ ಹೇಳಿಕೆಗೆ ಬಹಿರಂಗವಾಗಿ ಶಾಸಕ ಕಾಗೆ
ಲೇಡಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಡವಿಮಠ ಸ್ವಾಮೀಜಿ
ಬೆಳಗಾವಿಯ ಮಠವೊಂದರಲ್ಲಿ ಮಹಿಳೆಯ ಜೊತೆ ಖ್ಯಾತ ಸ್ವಾಮೀಜಿಯೊಬ್ಬರು ಸ್ಥಳೀಯ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾತ್ರಿ ಮಠದಲ್ಲಿ ಅನಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಯುವಕರು ಮಠದ ಮೇಲೆ ದಾಳಿ ಮಾಡಿ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ
Hit and Run: ಬೆಳಗಾವಿಯಲ್ಲಿ ಲಾರಿಯಡಿ ವ್ಯಕ್ತಿ ಸಾವು: ಎರಡೇ ಗಂಟೆಯಲ್ಲಿ ಚಾಲಕನ ಬಂಧಿಸಿದ ಪೊಲೀಸ್
ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗಿದ್ದ ಚಾಲಕನನ್ನು ಎರಡೇ ಗಂಟೆಯಲ್ಲೇ ಚೇಸಿಂಗ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ಟ್ರಕ್ ಹರಿದ ಪರಿಣಾಮ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಉಮೇಶ ದೇಸೂರಕರ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Heart Attack: ಆರ್‌ಸಿಬಿ ವಿಜಯೋತ್ಸವ: ಬೆಳಗಾವಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿ ಸಾವು
18 ವರ್ಷದ ಬಳಿಕ ಆರ್‌ಸಿಬಿ ತಂಡವು ಐಪಿಎಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ರಾಜ್ಯಾದ್ಯಂತ ಅಭಿಮಾನಿಗಳು ನಾನಾ ರೀತಿಗಳಲ್ಲಿ ವಿಜಯೋತ್ಸವ ಆಚರಿಸಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ವಿಜಯೋತ್ಸವ ವೇಳೆ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.