Menu

ಹುಬ್ಬಳ್ಳಿ-ಧಾರವಾಡ ಪಾಲಿಕೆ ಬಿಜೆಪಿ ಪಾಲು: ಜ್ಯೋತಿ ನೂತನ ಮೇಯರ್ ಆಗಿ ಆಯ್ಕೆ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮಹಾಪೌರರಾಗಿ 19ನೇ ವಾರ್ಡ್ ಸದಸ್ಯೆ ಜ್ಯೋತಿ ಪಾಟೀಲ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್​ ನ ಸುವರ್ಣಾ ಕಲಕುಂಟ್ಲಾ ವಿರುದ್ಧ ಬಿಜೆಪಿಯ ಜ್ಯೋತಿ ಪಾಟೀಲ್ 47 ಮತಗಳನ್ನು ಪಡೆದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರೆ, 49ನೇ ವಾರ್ಡ್ ಸದಸ್ಯೆ ಸಂತೋಷ ಚವ್ಹಾಣ 47 ಮತಗಳೊಂದಿಗೆ ಉಪಮೇಯರ್

ಉಕ್ಕಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭೆ: ತಟದಲ್ಲಿ ಪ್ರವಾಹಭೀತಿ

ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಬೆಳಗಾವಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ಅದರ ಉಪ ನದಿಗಳು ಮತ್ತು ಘಟಪ್ರಭಾ ನದಿಗಳ ನೀರಿನ ಒಳ ಹರಿವಿನಲ್ಲಿ ತೀವ್ರ ಏರಿಕೆಯಾಗಿ ಪ್ರವಾಹದ ಭೀತಿ ಆವರಿಸಿದೆ. ಕೃಷ್ಣಾ ನದಿಯ ಒಳ ಹರಿವು 1 ಲಕ್ಷ ಕ್ಯೂಸೆಕ್

ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಹತ್ಯೆ ಆರೋಪಿ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಶಿಗ್ಗಾಂವಿಯಲ್ಲಿ ಗುತ್ತಿಗೆದಾರನನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಎ-1 ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಮನೆ ಸಂಪೂರ್ಣ ಹಾನಿಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ

Pride of India: 43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13.37 ಗಂಟೆಯಲ್ಲಿ ಈಜಿದ ಪ್ರೈಡ್‌ ಆಫ್‌ ಇಂಡಿಯಾ

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ನೇತೃತ್ವದ ಭಾರತದ 6 ಜನರ ಪ್ರೈಡ್‌ ಆಫ್‌ ಇಂಡಿಯಾ ತಂಡ ಇಂಗ್ಲೆಂಡ್‌ನಲ್ಲಿನ 43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13.37 ಗಂಟೆಯಲ್ಲಿ ಈಜುವ ಮೂಲಕ ದಾಖಲೆ ಮಾಡಿದೆ. ಇಂಗ್ಲೆಂಡ್‌ನ ಸ್ಯಾಮ್‌ಥೈರ್‌ ಹೊಯ್‌ ದಡದಿಂದ

ಧಾರವಾಡದಲ್ಲಿ 3 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ ತಾಯಿ ಅರೆಸ್ಟ್

ಅತಿಯಾಗಿ ಆಡ್ತಾನೆ ಎಂದು ತಾಯಿಯೊಬ್ಬಳು  ಮೂರು ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಕೈ, ಕಾಲು ಕುತ್ತಿಗೆಗೆ ಬರೆ ಹಾಕಿ ಶಿಕ್ಷೆ ವಿಧಿಸಿದ್ದು, ಆಕೆಯನ್ನು  ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ನಿವಾಸಿ 34 ವರ್ಷದ ಅನುಷಾ ಹುಲಿಮಾರ  ಬಮಧಿತ ತಾಯಿ. ಮಗು

Murder: ಕಾಣೆಯಾಗಿದ್ದ ಗದಗದ ಯುವತಿ- ಜಮೀನಿನಲ್ಲಿ ಹೂತು ಹಾಕಿದ್ದ ಪ್ರಿಯಕರ ಅರೆಸ್ಟ್‌

ಆರು ತಿಂಗಳ ಹಿಂದೆ ಕಾಣೆಯಾಗಿದ್ದ ಗದಗದ ಬೆಟಗೇರಿ ಬಡಾವಣೆಯ ಪುಟ್ಟರಾಜನಗರದ ನಿವಾಸಿ ಮಧುಶ್ರೀ ಈರಪ್ಪ ಅಂಗಡಿ (23) ಎಂಬ ಯುವತಿಯನ್ನು ಆಕೆಯ ಪ್ರಿಯಕರನೇ  ಕೊಂದು ಜಮೀನಿನಲ್ಲಿ ಹೂತು ಹಾಕಿರುವುದು ಬಹಿರಂಗಗೊಂಡಿದೆ. ಆರೋಪಿ ನಾರಾಯಣಪುರ ನಿವಾಸಿ ಸತೀಶ ಹಿರೇಮಠ ಪೊಲೀಸ್‌ ಅತಿಥಿಯಾಗಿದ್ದಾನೆ. ಮಧುಶ್ರೀ

Cyber ​​fraud: ಮುಳಗುಂದದಲ್ಲಿ ವೈದ್ಯರಿಂದ ಹಣ ದೋಚಲು ಸೈಬರ್‌ ವಂಚಕರ ಯತ್ನ

ವಂಚಕರ ಗ್ಯಾಂಗ್‌ವೊಂದು ಮುಳಗುಂದ ಪಟ್ಟಣದ ವೈದ್ಯ ಎಸ್.ಸಿ. ಚವಡಿ ಅವರಿಗೆ ವೀಡಿಯೊ ಕರೆ ಮಾಡಿ ನಿರಂತರ 22 ಗಂಟೆ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಬೆಳಕಿಗೆ ಬಂದಿದೆ. ನ್ಯಾಶನಲ್ ಇನವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂ.11ರಂದು ಮಧ್ಯಾಹ್ನ ಚವಡಿ

Rain Death- ಹುಬ್ಬಳ್ಳಿಯಲ್ಲಿ ಭಾರಿ ಮಳೆ: ಚರಂಡಿಗೆ ಬಿದ್ದು ಕೊಚ್ಚಿಹೋದ ವ್ಯಕ್ತಿ

ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ಈ ದುರಂತ ನಡೆದಿದೆ. ಬೀರಬಂದ ಓಣಿಯ ಹುಸೇನ ಕಳಸ ಬೆಳಗಲಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಚರಂಡಿಗೆ ಬಿದ್ದಿದ್ದಾರೆ.

ಬೇಲ್‌ ನಿರಾಕರಿಸಿದ ಸುಪ್ರೀಂ: ಸಿಬಿಐನಿಂದ ವಿನಯ್‌ ಕುಲಕರ್ಣಿ ಅರೆಸ್ಟ್‌ ಸಾಧ್ಯತೆ

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಇನ್ನು ಎರಡು ದಿನಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿನಯ್ ಕುಲಕರ್ಣಿ ಶರಣಾಗುವ ಸಾಧ್ಯತೆ ಇದೆ. ಶುಕ್ರವಾರ

ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ: ಸಿಎಂ ಸಿದ್ದರಾಮಯ್ಯ

ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಲಕ್ಕುಂಡಿಯ ಉದ್ದೇಶಿತ ಬಯಲು ವಸ್ತು ಸಂಗ್ರಹಾಲಯ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಈಗ ಹೆಚ್.ಕೆ.ಪಾಟೀಲ ಆಸಕ್ತಿಯಿಂದಾಗಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನಮ್ಮ ಸರ್ಕಾರದ ಅವಧಿಯಲ್ಲೇ