Menu

ಕೌಟುಂಬಿಕ ಕಲಹ: ರಾಜಿ ಮಾಡಿಸಲು ಬಂದಿದ್ದ ಮಾವ, ಪತ್ನಿಯ ಕೊಲೆ 

ಹೆಂಡತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿತ್ಯ ಜಗಳವಾಡುತ್ತಿದ್ದ ಪತಿಯೊಬ್ಬ, ರಾಜಿ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನು ಕೂಡ  ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಳ್ಳಾರಿ ನಗರದ ಗುಗ್ಗರಹಟ್ಟಿಯಲ್ಲಿ ನಡೆದಿದೆ. ನಾಗಲಕ್ಷ್ಮೀ (24) ಹಾಗೂ  ತಂದೆ ಶ್ರೀನಿವಾಸ (48) ಎಂದು  ಕೊಲೆಯಾದವರು.  ತೇಜಾ  ಹಾಗೂ ಆತನ ತಂದೆ ಗುರುಶಂಕರ್  ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರೂ ದೋಬಿ ಕೆಲಸ ಮಾಡಿಕೊಂಡಿರುವವರು  ಎಂದು ತಿಳಿದುಬಂದಿದೆ. ತೇಜಾ ತನ್ನ

ವಾರಕ್ಕೊಂದು ಬೈಕ್‌ ಕಳವು: ನಕಲಿ ಆರ್‌ಸಿ ಜೊತೆ ರೈತರಿಗೆ ಮಾರಾಟ

ಬಳ್ಳಾರಿಯ ಸಿರಗುಪ್ಪ ತಾಲೂಕು ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ಆಟೋ ಚಾಲಕ ಸಿದ್ದಾರೆಡ್ಡಿ ಬಂಧಿತ ಆರೋಪಿ. ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿದ್ದ

ಎರಡು ಕೋಟಿ ವಿಮೆ ಹಣಕ್ಕಾಗಿ ಪ್ರಿಯಕರನ ಜೊತೆ ಸೇರಿ ಗಂಡನಿಗೆ ವಿಷವಿಕ್ಕಿ ಕೊಲೆ

ಎರಡು ಕೋಟಿ ರೂ. ವಿಮೆ ಹಣ ಪಡೆಯುವುದಕ್ಕಾಗಿ ಚಿಕ್ಕೋಡಿಯಲ್ಲಿ ಮಾಜಿ ಸೈನಿಕನನ್ನು ಪತ್ನಿಯೇ ಕೊಂದಿರುವ ಘಟನೆಯೊಂದು ಬಹಿರಂಗಗೊಂಡಿದೆ. ಗಂಡನಿಗೆ ವಿಷದ ಇಂಜೆಕ್ಷನ್‌ ಚುಚ್ಚಿ ಕೊಲೆ ಮಾಡಿರುವ ಆರೋಪ ಗಂಡ ಇದ್ದಾಗಲೂ ಕೊಲೆಗಡುಕಿ ಪತ್ನಿ ಪ್ರಿಯಕರನ ಜೊತೆ ಓಡಾಡಿಕೊಂಡಿದ್ದಳು, ಪ್ರಿಯಕರನ ಜೊತೆ ಸೇರಿ

ಪಂಕ್ಚರ್‌ ಆಗಿ ನಿಂತಿದ್ದ ಟ್ಯಾಂಕರ್‌ಗೆ ಲಾರಿ ಡಿಕ್ಕಿ: ಚಾಲಕ ಸಜೀವ ದಹನ

ಪಂಕ್ಚರ್‌ ಆಗಿ ನಿಂತಿದ್ದ ಟ್ಯಾಂಕರ್‌ಗೆ  ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ತಕ್ಷಣ ಹೊತ್ತಿ ಉರಿದಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಗಡಿಭಾಗ ಆಂಧ್ರದ ಅನಂತಪುರ ಜಿಲ್ಲೆಯ ಡಿ. ಹಿರೇಹಾಳ ಬಳಿ ನಡೆದಿದೆ. ಪಂಕ್ಚರ್ ಆಗಿದ್ದ ಸಿಮೆಂಟ್ ಟ್ಯಾಂಕರ್‌

ಬಳ್ಳಾರಿ ಪಿಜಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು: ಕೊಲೆಯೆಂದು ಪೋಷಕರ ಆರೋಪ

ಬಳ್ಳಾರಿಯ ಅಶೋಕ್ ನಗರದ ಚೌದ್ರಿ ರೆಸಿಡೆನ್ಸ್ ಪಿಜಿ ಕೊಠಡಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಶ್ವಾಸ್ (24) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೃತನ ತಲೆಗೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ

ಸಿರಗುಪ್ಪದಲ್ಲಿ ಬೈಕ್‌ ರಸ್ತೆ ಗುಂಡಿಗೆ ಬಿದ್ದು ನರ್ಸ್‌ ಬಲಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್ ಬಳಿ ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ನರ್ಸ್‌ ಬಲಿಯಾಗಿದ್ದು, ಆಕೆಯ ಪತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದ ದಂಪತಿ ಬೈಕ್ ಸಮೇತ ರಸ್ತೆ ಗುಂಡಿಗೆ ಬಿದ್ದಿದ್ದು, ಪತ್ನಿ

ಟ್ರ್ಯಾಕ್ಟರ್‌ನಲ್ಲಿ ಹುಲಿಗೆಮ್ಮ ದರ್ಶನಕ್ಕೆ ಹೋಗುತ್ತಿದ್ದಾಗ ಟ್ಯಾಂಕರ್‌ ಡಿಕ್ಕಿ: ಏಳು ಮಂದಿ ಸಾವು

ದೇವಿಯ ವಾರವೆಂದು ಮುನಿರಾಬಾದ್‌ನ ಹುಲಿಗೆಮ್ಮತಾಯಿ ದರ್ಶನಕ್ಕೆ ಹೊರಟವರು ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ  ಘಟನೆ  ಕೊಪ್ಪಳ-ವಿಜಯನಗರ ಜಿಲ್ಲೆಯ ಗಡಿಭಾಗದ ಮುನಿರಾಬಾದ್ ಸೇತುವೆ ಬಳಿ ಶುಕ್ರವಾರ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾನಳ್ಳಿಯಿಂದ

ಇಡೀ ಕುಟುಂಬಕ್ಕೆ ವಾರಕ್ಕೆ500 ರೂ.ಸಂಬಳ: ಹೊಸಪೇಟೆಯಲ್ಲಿ ಒಡಿಶಾದ 37 ಮಂದಿ ಜೀತಮುಕ್ತ

ಹೊಸಪೇಟೆ ತಾಲೂಕಿನ ನಂದಿಬಂಡಿಯಲ್ಲಿ ಒಡಿಶಾದ 37 ಮಂದಿ ಜೀತಕ್ಕಿದ್ದ ಮಾಹಿತಿ ಪಡೆದ ಅಧಿಕಾರಿಗಳು ಜೀತದಿಂದ ಮುಕ್ತಿ ನೀಡಿದ್ದಾರೆ.  ಶ್ರೀನಿವಾಸ್, ಮಹಾದೇವ ರಾವ್ ಮತ್ತು ವೆಂಕಟ ಪ್ರಸಾದ್ ಎಂಬವರು ಈ ಕಾರ್ಮಿಕರನ್ನು ಶೆಡ್‌ನಲ್ಲಿ ಕೂಡಿ ಹಾಕಿ ಬಲವಂತವಾಗಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡಿಸುತ್ತಿದ್ದರು.

ಅಂಜನಾದ್ರಿ ಹನುಮಗೆ ತಾಮ್ರ ಲೇಪಿತ 2.50 ಕೋಟಿ ರೂ.ಗಳ ಆಭರಣ, 28 ಗ್ರಾಂ ಮಾತ್ರ ಚಿನ್ನ: ಉದ್ಯಮಿಗೆ ಜಿಲ್ಲಾಡಳಿತ ನೋಟಿಸ್‌

ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ರೂ. ಮೌಲ್ಯದ್ದು ಎನ್ನಲಾದ ಆಭರಣದಲ್ಲಿ 28 ಗ್ರಾಂ ಮಾತ್ರ ಚಿನ್ನವಿದ್ದು, ತಾಮ್ರದ ಲೇಪನ ಮಾಡಲಾಗಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ಆಭರಣಗಳ ಖಚಿತತೆ

ಪಡಿತರ ಅಕ್ಕಿ ಅಕ್ರಮ ಸಾಗಣೆ: ಮೂರು ಲಕ್ಷ ರೂ. ವಸೂಲಿ ಮಾಡಿದ ಎಸ್ಪಿ ಗನ್ ಮ್ಯಾನ್ ಅರೆಸ್ಟ್‌

ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಮತ್ತು ಸಹಚರರು ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಶರಭಯ್ಯ ಎಂಬವರಿಂದ ಮೂರು ಲಕ್ಷ ರೂ. ವಸೂಲಿ ಮಾಡಿದ ಆರೋಪದಡಿ