Menu

ಗೀತಾ ಶಿವರಾಜ್‌ ಕುಮಾರ್‌ಗೆ ಸರ್ಜರಿ

ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಕುಟುಂಬದಿಂದ ಅಧಿಕೃತ ಮಾಹಿತಿ ಇನ್ನೂ ಲಭಿಸಿಲ್ಲ. ಶಿವರಾಜ್​ಕುಮಾರ್ ಅವರು ಇತ್ತೀಚೆಗಷ್ಟೇ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರಿಗೆ ನರದ ಸಮಸ್ಯೆಯಿಂದ ಕತ್ತಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಮೊದಲೇ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು.

ಜೈಲಿನಲ್ಲಿ ಜಾಮರ್‌: ವೈದ್ಯರ ಸಂಪರ್ಕ ಸಿಗದೆ ಸಾವು ಬದುಕಿನ ಹೋರಾಟ ನಡೆಸಿದ ಚಿಕ್ಕಮಗಳೂರು ರೋಗಿ

ಮಂಗಳೂರಿನ ಜೈಲಿನಲ್ಲಿ ನೆಟ್ವರ್ಕ್ ಜಾಮರ್ ಅಳವಡಿಸಿರುವುದರಿಂದ ವೈದ್ಯರ ಸಂಪರ್ಕ ಸಾಧ್ಯವಾಗದೆ ಚಿಕ್ಕಮಗಳೂರಿನ ರೋಗಿ ಸಾವು ಬದುಕಿನ ನಡುವೆ ಹೋರಾಡಬೇಕಾಯಿತು. ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದ ಮಂಗಳೂರಿನ ಹೃದಯ ಭಾಗ ಕೊಡಿಯಾಲಬೈಲ್‌ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯ

ದಾವಣಗೆರೆಯಲ್ಲಿ ಕಾರು ಚಲಾಯಿಸುತ್ತಿದ್ದಾಗಲೇ ಮೃತಪಟ್ಟ ಗುತ್ತಿಗೆದಾರ

ದಾವಣಗೆರೆ ನಗರದ ಬಿಐಇಟಿ ರಸ್ತೆಯ ಈಶ್ವರ ಧ್ಯಾನ ಮಂದಿರದ ಬಳಿ ಕಾರು ಚಾಲನೆ ಮಾಡುವಾಗ ಚಾಲಕ ಹೃದಯಸ್ತಂಭನಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಕಾಏಕಿ ಹೃದಯಸ್ತಂಭನಗೊಂಡ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ

ರಾಜ್ಯದಲ್ಲಿ ಹೆಚ್ಚುತ್ತಿದೆ ವೈರಲ್‌ ಜ್ವರ ಪ್ರಕರಣಗಳು

ಬೇಸಿಗೆ ಮಧ್ಯೆ ಮಳೆಯೊಂದಿಗೆ ವಾತಾವರಣ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಒಳಗೊಂಡಂತೆ ರಾಜ್ಯದಲ್ಲಿ ವೈರಲ್‌ ಜ್ವರ ಕೇಸ್‌ಗಳು ಹೆಚ್ಚುತ್ತಿವೆ.  ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ನಿಗಾ ಘಟಕವು ಈ ಸಂಬಂಧ ಮಾಹಿತಿ ಪ್ರಕಟಿಸಿ ಅಂಕಿ ಅಂಶಗಳನ್ನು ನೀಡಿದೆ. ಮಾರ್ಚ್ ಆರಂಭದಲ್ಲಿ ಸಂಪೂರ್ಣ

ಆಯುರ್ವೇದ ಉಳಿಸಿ ಬೆಳೆಸಿಕೊಂಡು ಹೋಗಬೇಕು: ಡಿಕೆ ಶಿವಕುಮಾರ್

ಆಯುರ್ವೇದ ಚಿಕಿತ್ಸಾ ಪದ್ಧತಿ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಇದು ನಮ್ಮ ಮೂಲ. ಆಯುರ್ವೇದ ನಮ್ಮ ಆಸ್ತಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿನಿಲಯದ

ಕಲಬುರಗಿ ಆಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದ ದಾಂಧಲೆ

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಹಾಗೂ ನವಜಾತ ಶಿಶು ಮೃತಪಟ್ಟಿದ್ದಾರೆ. ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸತ್ತಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು, ಲೋ ಬಿಪಿಯಿಂದ ತಾಯಿಯೂ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿರುವ

ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್  ತಿಳಿಸಿದರು. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ

ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆಗೆ ಮಹಿಳೆ ಬಲಿ

ಚಿಕ್ಕಮಗಳೂರಿನಲ್ಲಿ ಮಂಗನಕಾಯಿಲೆ ಬಾಧಿತ ಮಹಿಳೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಎನ್​.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ ನಿವಾಸಿ ಕಮಲಾ (65) ಮೃತ ಮಹಿಳೆ. ಆಕೆ ಮೇಲ್ಪಾಲ್ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಾಧ್ಯಮಗಳಲ್ಲಿ ಗುಲಿಯನ್ ಬ್ಯಾರಿ ಸಿಂಡ್ರೋಮ್ ಗುಲ್ಲು

ಚಿಕ್ಕೋಡಿಯ ಚಂದಪ್ಪ ಅರವತ್ತು ದಾಟಿದ್ದರೂ ಗಟ್ಟಿ ಮುಟ್ಟಾಗಿದ್ದ. ಹೊಲದಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದ. ಒಮ್ಮೆಯೂ ದವಾಖಾನೆ ಮೆಟ್ಟಲು ಹತ್ತಿದವನೇ ಅಲ್ಲ. ಅಂಗಾಲಲ್ಲಿ, ಕಾಲಲ್ಲಿ ಜೋಮು ಹಿಡಿಯಹತ್ತಿತು. ಅಶಕ್ತಿಗೆ ಹೀಗಾಗಿರಬೇಕೆಂದು ನಿರ್ಲಕ್ಷಿಸಿದ. ಬರುಬರುತ್ತ ಕಾಲಲ್ಲಿ ಸೆಳೆತ ಕಾಣಿಸಿತು. ಅಡ್ಡಾಡಲು ಅಡ್ಡಿ ಆಯಿತು. ಸುಸ್ತು

ಟೈಫಾಯ್ಡ್‌ಗೆ ಶೀಘ್ರವೇ ಬರಲಿದೆ ಹೊಸ ಲಸಿಕೆ

ನವದೆಹಲಿ: ಟೈಫಾಯ್ಡ್ ಮತ್ತು ಶಿಗೆಲ್ಲೋಸಿಸ್‌ಗೆ ವಿಶ್ವದ ಮೊದಲ ಸಂಯೋಜನೆಯ ಲಸಿಕೆಯನ್ನು ಅಭಿವೃದ್ಧಿಪಡಿಸಲು ಜೈಡಸ್ ಲೈಫ್ಸೈನ್ಸ್ ಸಜ್ಜಾಗಿದೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಬೆಂಬಲದೊಂದಿಗೆ ಈ ಉಪಕ್ರಮವು ಸ್ಥಳೀಯ ಪ್ರದೇಶಗಳಲ್ಲಿನ ಶಿಶುಗಳು ಮತ್ತು ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಲಸಿಕೆ