Breaking
ಪೊಲೀಸ್ ಆಯುಕ್ತರ ಹೆಸರಲ್ಲಿ ಫೇಸ್‌ಬುಕ್ ಖಾತೆ: ವಂಚನೆಗೆ ಯತ್ನ
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರು ಬಳಸಿಕೊಂಡು ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಜನರನ್ನು ವಂಚಿಸಲು ಪ್ರಯತ್ನ ನಡೆಸಿರುವ ಘಟನೆ ಬಹಿರಂಗಗೊಂಡಿದೆ. ಸೀಮಂತ್ ಕುಮಾರ್ ಸಿಂಗ್ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಖಾತೆ ರಚಿಸಿ ಗಣ್ಯರೊಂದಿಗೆ ತೆಗೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಜನರ ವಿಶ್ವಾಸ ಗಳಿಸಲು ವಂಚಕರು ಮುಂದಾಗಿದ್ದಾರೆ. ಪೊಲೀಸ್ ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆಂದು ನಂಬಿದ ಕೆಲವರು ಆ ಖಾತೆಗೆ ಪ್ರತಿಕ್ರಿಯೆ ನೀಡಿದ್ದು, ಬಳಿಕ ಖಾಸಗಿ ಸಂದೇಶಗಳ
ಆರ್ಥಿಕ ನಿರ್ಬಂಧ ತೆರವು ಮನಸ್ಸಿದ್ದರೆ ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಸಿದ್ಧವೆಂದ ಇರಾನ್
ಅಮೆರಿಕವು ಆರ್ಥಿಕ ನಿರ್ಬಂಧ ತೆರವು ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದ್ದರೆ, ಪರಮಾಣು ಒಪ್ಪಂದ ಅಂತಿಮಗೊಳಿಸುವ ನಿಟ್ಟಿನಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಇರಾನ್ ತಿಳಿಸಿದೆ. ಇರಾನ್‌ನ ಉಪ ವಿದೇಶಾಂಗ ಸಚಿವ ಮಜಿದ್ ತಖ್ತ್ ರವಾಂಚಿ ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಇಂದಿನಿಂದ ಲಗೇಜ್ ದರ ಏರಿಕೆ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರ ವೆಚ್ಚಗಳಲ್ಲಿ ತೀವ್ರ ಹೆಚ್ಚಳವಾಗಿರುವ ಹಿನ್ನೆಲೆ ನಿಗಮವು ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಿದೆ. ಈ ಹಿಂದೆ ಶೇ.15 ಬಸ್ ಪ್ರಯಾಣ
ಟಿವಿ ನೋಡೋದು ಕಮ್ಮಿ ಮಾಡು ಅಂದಿದ್ದಕ್ಕೆ ಚಿಕ್ಕಮಗಳೂರಿನಲ್ಲಿ ಬಾಲಕಿ ಸುಸೈಡ್
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಸರಿಕಟ್ಟೆ ಸಮೀಪದ ಹೊನ್ನಗುಂಡಿ ಗ್ರಾಮದಲ್ಲಿ ಟಿವಿ ನೋಡೋದನ್ನು ಕಮ್ಮಿ ಮಾಡು ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೇಲ್ನಿಂದ ನೇಣು ಬಿಗಿದುಕೊಂಡು ಸುಪ್ರಿತಾ ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗುರುತಿಸಲಾಗಿದೆ. ಬಾಲಕಿ
ಕೊಳ್ಳೇಗಾಲದಲ್ಲಿ ಹುಲಿ ಮೃತದೇಹ ಪತ್ತೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗುಂಡಾಲ್ ಅಣೆಕಟ್ಟು ಸಮೀಪ ಹುಲಿಯ ಮೃತದದೇಹ ಪತ್ತೆಯಾಗಿದೆ. ಮಲೆ ಮಹದೇಶ್ವರ ಸಂರಕ್ಷಿತ ಅರಣ್ಯದಲ್ಲಿ ಇತ್ತೀಚೆಗೆ ಒಟ್ಟು ಐದು ಹುಲಿಗಳು ಮೃತಪಟ್ಟಿದ್ದವು. ಈಗ ಹುಲಿಯ ಸಾವಿನ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ
ಕೇದಾರನಾಥ ದರ್ಶನ ಏಪ್ರಿಲ್ 22 ರಿಂದ
ಉತ್ತರಾಖಂಡ್‌ನ ಹನ್ನೆರಡು ಜ್ಯೋತಿರ್ ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಧಾಮ ಯಾತ್ರಿಗಳ ದರ್ಶನಕ್ಕೆ ಏಪ್ರಿಲ್ 22ರಂದು ತೆರೆಯಲಿದೆ. ಅಂದು ಬೆಲಗ್ಗೆ ವೃಷಭ ಲಗ್ನದಲ್ಲಿ ಎಂಟು ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಟಿ ಗಂಗಾಧರ ಲಿಂಗ್ ಅವರನ್ನು ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಗಿದ್ದು,
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ: ಆರ್ ಅಶೋಕ ಕಿಡಿ
ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ತಾವು ಕೈಗೊಳ್ಳಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಸರ್ಕಾರ ಔಷಧಿ ಪೂರೈಕೆಯಲ್ಲಿ ವಿಫಲವಾಗಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್
ಬೆಂಗಳೂರಿನ ವಿದ್ಯಾರ್ಥಿ ಅಮೆರಿಕದಲ್ಲಿ ಶವವಾಗಿ ಪತ್ತೆ: ತುರ್ತು ವೀಸಾಗೆ ಪೋಷಕರ ಅರ್ಜಿ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳ ಹಿಂದೆ ಬೆಂಗಳೂರಿನ ವಿದ್ಯಾರ್ಥಿ ಸಾಕೇತ್ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ಶವ ಸಿಕ್ಕಿರುವ ಹಿನ್ನೆಲೆ ಪೋಷಕರು ಆ ದೇಶಕ್ಕೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಮದ್ರಾಸ್
ಹೂಡಿಕೆಯಲ್ಲಿ ಲಾಭದ ಆಮಿಷ: ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚನೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಟೆಕ್ಕಿ. ವಿಐಪಿ ರುದ್ರಾ ಷೇರ್ಸ್ ಎಂದು ವಾಟ್ಸಾಪ್
ಬಿಕ್ಲು ಶಿವ ಕೊಲೆ ಕೇಸ್: ಬೈರತಿ ಬಸವರಾಜ್‌ಗೆ ಪೊಲೀಸ್ ಕಸ್ಟಡಿ
ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಏಳು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ಫೆಬ್ರವರಿ 21ರವರೆಗೆ ಬಸವರಾಜ್ ಪೊಲೀಸ್ ಕಸ್ಟಡಿಯಲ್ಲಿರಲಿದ್ದು, ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಯಲಿದೆ. ಬೈರತಿ




