Tuesday, September 01, 2026
Menu

ಜಿಬಿಎ ಚುನಾವಣೆ ಕಾಲಾವಕಾಶ ಡಿಸೆಂಬರ್‌ಗೆ ವಿಸ್ತರಿಸಿದ ಸುಪ್ರೀಂಕೋರ್ಟ್‌

ಜಿಬಿಎ ಚುನಾವಣೆ ನಡೆಸಲು ನೀಡಿದ್ದ ಗಡುವು ವಿಸ್ತರಣೆ ಕೋರಿ ರಾಜ್ಯ ಸರ್ಕಾರ ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ ಡಿಸೆಂಬರ್‌ವರೆಗೆ ಅವಕಾಶ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಈ ಹಿಂದೆ ಆದೇಶಿಸಿತ್ತು. ಎಸ್ಐಆರ್ ಪ್ರಕ್ರಿಯೆ ಹಿನ್ನೆಲೆ ಚುನಾವಣೆಗೆ ಮತ್ತಷ್ಟು ಕಾಲವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸತ್ತು. ಮನವಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಡಿಸೆಂಬರ್ 31, 2026ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿದೆ.

2020ರಲ್ಲಿ ಬೆಂಗಳೂರು ಸ್ಥಳೀಯ ಆಡಳಿತ ಮಂಡಳಿ (ಬಿಬಿಎಂಪಿ) ಆಡಳಿತ ಅವಧಿ ಮುಕ್ತಾಯಗೊಂಡಿದೆ. 2020ರಲ್ಲೇ ಚುನಾವಣೆ ನಡೆದು ಕಾರ್ಪೋರೇಟರ್‌ಗಳ ಆಯ್ಕೆ ನಡೆಯಬೇಕಿತ್ತು. ಕೋವಿಡ್ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕಾಂಗ್ರೆಸ್ ಆಡಳಿತ, ಬಿಬಿಎಂಪಿಯನ್ನು ಜಿಬಿಎ ಎಂದು ರಚಿಸಲಾಗಿದೆ. ಚುನಾವಣೆಯನ್ನು ಮತ್ತೆ ಮಂದೂಡಲಾಗಿದೆ.

Related Posts

Leave a Reply

Your email address will not be published. Required fields are marked *