Menu

ಮೊದಲು ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಿ, ಮತ್ತೆ ಶಾಂತಿ ಮಾತುಕತೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್‌

ಇರಾನ್‌- ಅಮೆರಿಕ ಕದನ ವಿರಾಮದ ಮಧ್ಯೆಯೇ ಇಸ್ರೇಲ್‌ ಲೆಬನಾನ್‌ ಮೇಲೆ ತೀವ್ರ ದಾಳಿಗಳನ್ನು ನಡೆಸಿ 300 ಕ್ಕೂ ಹೆಚ್ಚು ಜನ ಮೃತಪಟ್ಟಿರುವುರಿಂದ ಕೆರಳಿರುವ ಇರಾನ್‌, ಲೆಬನಾನ್‌ನಲ್ಲಿ ಕದನ ವಿರಾಮ ಆಗುವವರೆಗೆ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಪಾಕಿಸ್ತಾನಕ್ಕೆ ತಿಳಿಸಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅ ಲೆಬನಾನ್‌ನಲ್ಲಿ ಬಾಂಬ್ ದಾಳಿ ಮುಂದುವರಿದರೆ ಶಾಂತಿ ಒಪ್ಪಂದ ನಡೆಸಲು ಯಾವುದೇ ಯೋಜನೆ ಹೊಂದಿಲ್ಲ ಎಂದು ಇರಾನ್‌ ಹೇಳಿದೆ. ಇರಾನ್, ಅಮೆರಿಕ ಮತ್ತು

ಪಿಯುಸಿ ಎರಡು ವಿಷಯಗಳಲ್ಲಿ ಫೇಲ್‌:‌ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಸುಸೈಡ್

ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗಿ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ನಡೆದಿದೆ. ತನುಶ್ರೀ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ, ಆಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಮೂರು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು.ಆಕೆ ಆತ್ಮಹತ್ಯೆ

ಬಂಗಾಳದಲ್ಲಿ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ.: ಬಿಜೆಪಿ ಘೋಷಣೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 3 ಸಾವಿರ ರೂ., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ

ಆಳುವ ಸರ್ಕಾರಕ್ಕೆ ಅವಕಾಶ ವಂಚಿತರ ಪರ ಕಾಳಜಿಯಿರಬೇಕು: ಪ್ರಿಯಾಂಕ್ ಖರ್ಗೆ

ಆಳುವ ಸರ್ಕಾರಕ್ಕೆ ಸಾಮಾಜಿಕ ಬದ್ದತೆ ಇರಬೇಕು. ಅವಕಾಶವಂಚಿತರಿಗ ಬಗ್ಗೆ ಕಾಳಜಿ ತೋರಿಸಿ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಅದಕ್ಕೆ ಆಳುವವರಿಗೆ ಶ್ರೀಮಂತ ಹೃದಯವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಕೇರಳ ಬಾಲಕಿ ಶ್ರೀನಂದಾ ಮೃತದೇಹ ಪ್ರಪಾತದಲ್ಲಿ ಪತ್ತೆ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. 40 ಜನರ ಪ್ರವಾಸಿ ತಂಡದಲ್ಲಿ ಕುಟುಂಬದೊಂದಿಗೆ ಚಾರಣಕ್ಕೆ ಬಂದಿದ್ದ ಆಕೆ

ಚಳ್ಳಕೆರೆಯಲ್ಲಿ ಶಿಕ್ಷಕನಿಂದ ಅತ್ಯಾಚಾರ, ಬಾಲಕಿಗೆ ಗರ್ಭಪಾತ: ಶಿಕ್ಷಕ, ವೈದ್ಯೆ ವಿರುದ್ಧ ಪೋಕ್ಸೊ ದಾಖಲು

ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲು

ಉಪನ್ಯಾಸಕಿ ಇತರ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸುಭಾಷನಗರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಸುಭಾಷನಗರ ನಿವಾಸಿ ಎಸ್. ಗೌತಮಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೋಷಕರು

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದು, ಬರಹ ಕಡ್ಡಾಯ

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲನಾ ಪರವಾನಗಿ ಹೊಂದಿರಬೇಕಾದರೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದು ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲುವುದಾಗಿ ಸರ್ಕಾರ ಹೇಳಿದೆ. ಯೋಜನೆಯನ್ನು ಮೀರಾ ಭಯಂದರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ

ಹುಲಿಕಲ್‌ ಘಾಟ್‌ ಗುಡ್ಡ ಕುಸಿತ: ಮೂವರು ಕಾರ್ಮಿಕರ ಶವಗಳೂ ಪತ್ತೆ

ಶಿವಮೊಗ್ಗದ ಹುಲಿಕಲ್‌ ಘಾಟ್‌ನಲ್ಲಿ ಗುಡ್ಡ ಕುಸಿದು ಮೃತಪಟ್ಟಿದ್ದವರಲ್ಲಿ ಮತ್ತೊಬ್ಬ ಕಾರ್ಮಿಕನ ಶವ ಪತ್ತೆಯಾಗಿದೆ. ಇಬ್ಬರ ಶವ ಈಗಾಗಲೇ ಪತ್ತೆಯಾಗಿತ್ತು. ಶುಕ್ರವಾರ ಮುಂಜಾನೆ 3 ಗಂಟೆ ಕಾರ್ಮಿಕ ಶಬ್ಬೀರ್ (40) ಮೃತದೇಹ ಸಿಕ್ಕಿದೆ. ಘಾಟ್‌ನ ಹೇರ್ ಪಿನ್ ಕ್ರಾಸ್ ನಲ್ಲಿ ಕಾಂಕ್ರೀಟ್ ವಾಲ್

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲಂಚ ಪಡೆದು ಪರಾರಿ ಯತ್ನ: ಬೆನ್ನಟ್ಟಿ ಹಿಡಿದ ಲೋಕಾಯುಕ್ತ

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಒಂದು ಲಕ್ಷ ರೂ. ಲಂಚ ಪಡೆಯುತ್ತಿದ್ದಂತೆಯೇ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿ, ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿಯಲ್ಲಿ ನಡೆದಿದೆ. ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.