Saturday, September 12, 2026
Menu

ಕಾಂಗ್ರೆಸ್‌ ಒಳಜಗಳ, ಕುರ್ಚಿ ಕಾಳಗ ಮತ್ತೊಮ್ಮೆ ಜಗಜ್ಜಾಹೀರು: ಆರ್‌ ಅಶೋಕ

ಇಡಿ ಗೆ  ದೂರು ಕೊಟ್ಟವರು ನಮ್ಮ ಪಕ್ಷದವರೋ ಅಥವಾ ಬೇರೆಯವರೋ ಅಂತ ಹುಡುಕುತ್ತಿದ್ದೇನೆ, ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ಇದಾಗಿದೆ ಎನ್ನುವ ಸಚಿವ @JarkiholiSatish ಅವರ ಹೇಳಿಕೆ @INCKarnataka ಪಕ್ಷದೊಳಗಿನ ಆಂತರಿಕ ಕಚ್ಚಾಟ ಮತ್ತು ಒಳ ಬೇಗುದಿಯನ್ನ ಮತ್ತೊಮ್ಮೆ ಬಟಾಬಯಲು ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ವಿದೇಶಗಳಲ್ಲಿ ಹೂಡಿಕೆ ಮಾಡುವ ಲಂಚಾವತಾರ, ಇನ್ನೊಂದೆಡೆ ಸ್ವಪಕ್ಷದವರನ್ನೇ ತುಳಿದು ಹಾಕಿ ಅಧಿಕಾರ ಹಿಡಿಯಲು ನಿರಂತರ ಕುತಂತ್ರ.  ಕಾಂಗ್ರೆಸ್‌ ಪಕ್ಷದ ನಾಯಕರು ತಮ್ಮದೇ ಸಹೋದ್ಯೋಗಿಗಳು ಮತ್ತು ಸಚಿವರುಗಳ ವಿರುದ್ಧ ಇಡಿಗೆ ದೂರು ಕೊಟ್ಟು ಕಾಲೆಳೆಯುವ ಹಂತಕ್ಕೆ ತಲುಪಿದ್ದಾರೆ ಎಂದರೆ ಇನ್ನು ಈ ಸರ್ಕಾರದಲ್ಲಿ ಆಡಳಿತ ಯಂತ್ರ ಎಷ್ಟು ಪಾತಾಳಕ್ಕೆ ಕುಸಿದುಬಿದ್ದಿದೆ ಎಂಬುದನ್ನ ನೀವೇ ಊಹಿಸಿ ಎಂದು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ @DKShivakumar ಅವರೇ, ರಾಜ್ಯದ ಜನತೆಗೆ ನೀಡಿದ ಅಭಿವೃದ್ಧಿಯ ಆಶ್ವಾಸನೆಗಳು ಗಾಳಿಯಲ್ಲಿ ತೂರಿಹೋಗಿವೆ. ಸಚಿವರ ನಡುವಿನ ಈ ಒಳಜಗಳ, ಕಾಲೆಳೆಯುವ ತಂತ್ರಗಳು ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ ಈಗ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಸ್ವಪಕ್ಷದವರೇ ನಿಮ್ಮ ಸಚಿವರ ಭ್ರಷ್ಟಾಚಾರದ ಜಾತಕವನ್ನು ತನಿಖಾ ಸಂಸ್ಥೆಗಳಿಗೆ ನೀಡುತ್ತಿದ್ದಾರೆ ಎಂದರೆ ನಿಮ್ಮ ಸರ್ಕಾರದ ನೈತಿಕತೆ ಎಲ್ಲಿಗೆ ಬಂತು? ಜನಹಿತವನ್ನು ಮರೆತು ಕೇವಲ ಅಧಿಕಾರಕ್ಕಾಗಿ, ಲೂಟಿಯ ಪೈಪೋಟಿಗಾಗಿ ಕಿತ್ತಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *