Friday, September 18, 2026
Menu

ಕೊರಳಿಗೆ ಸುತ್ತಿಕೊಂಡ ಜೋಕಾಲಿಗೆ ಶಿವಮೊಗ್ಗದಲ್ಲಿ ಬಾಲಕಿ ಬಲಿ

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುತ್ತಿದ್ದಾಗ ಕುಣಿಗೆ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮೂರು ದಿನಗಳ ಹಿಂದೆ ಈ ದುರಂತ ಸಂಭವಿಸಿದು, ತಡವಾಗಿ ಬಹಿರಂಗಗೊಂಡಿದೆ. ಒಂಬತ್ತು ವರ್ಷದ ಪ್ರಣಮ್ಯ ಮೃತಪಟ್ಟ ಬಾಲಕಿ. ಬೇಸಿಗೆ ರಜೆಯ ಕಾರಣ ವಿದ್ಯಾನಗರದಿಂದ ಲಕ್ಕಿನಕೊಪ್ಪದ ಚಿಕ್ಕಮ್ಮನ ಮನೆಗೆ ಬಂದಿದ್ದಳು, ಮನೆಯಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಆಡುತ್ತಿದ್ದಳು, ಬಾಗಿಲು ಹಾಕಿ ಜೋಕಾಲಿ ಆಡುತ್ತಿದ್ದಾಗ ಈ ಗಟನೆ ನಡೆದಿದೆ. ಜೋಕಾಲಿಯೇ ನೇಣಿನಂತೆ ಕತ್ತನ್ನು ಸುತ್ತಿಕೊಂಡು ಬಾಲಕಿ ಮೃತಪಟ್ಟಿದ್ದಾಳೆ. ತುಂಗಾನಗರ ಪೊಲೀಸ್

ಹುಬ್ಬಳ್ಳಿಯಲ್ಲಿ ಮೊಬೈಲ್ ಕೊಡದ್ದಕ್ಕೆ ನೊಂದ ಬಾಲಕ ಆತ್ಮಹತ್ಯೆ

ಹುಬ್ಬಳ್ಳಿ ನಗರದ ಉದಯನಗರದಲ್ಲಿ ಮೊಬೈಲ್‌ ಕೊಡಲಿಲ್ಲವೆಂಬ ಕಾರಣಕ್ಕೆ ಬಾಲಕನೊಬ್ಬ ತಾಯಿಯ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಪ್ರೀ ಫೈರ್ ಗೇಮ್‌ನ ಚಟದಲ್ಲಿದ್ದ. ಇದನ್ನು ನೋಡಿದ ಪೋಷಕರು ಬುದ್ಧಿ ಹೇಳಿದ್ದರು. ಅದೇ ರೀತಿ ಗುರುವಾರ ರಾತ್ರಿ ಬಾಲಕನ ತಾಯಿ ಮಗನಿಗೆ

ಭಾಲ್ಕಿಯಲ್ಲಿ ಸಿಡಿಲಿಗೆ ಯುವಕರಿಬ್ಬರು ಬಲಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ನಾವದಗಿ ಗ್ರಾಮದ ರೇವಣಸಿದ್ದ (28) ಮತ್ತು ಜೇವರ್ಗಿಯ ಯಲ್ಲಾಲಿಂಗ (28) ಸಿಡಿಲಿಗೆ ಬಲಿಯಾವರು. ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಮಳೆ ಶುರುವಾಗಿದೆ.

ಕೋಲಾರದಲ್ಲಿ ಸ್ನೇಹಿತರ ಜೊತೆ ಈಜಲೆಂದು ಹೋದ ಬಾಲಕ ನೀರುಪಾಲು

ಕೋಲಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್​ ಆದ ಖುಷಿಯಲ್ಲಿದ್ದ ಬಾಲಕ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದಾನೆ. ಕಿರಣ್(15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ರಘುಪತಿ ಎಂಬವರ ಪುತ್ರನಾದ ಕಿರಣ್

ಮಗನ ಸಾಧನೆಯ ಸಂಭ್ರಮಕ್ಕೆ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಅಪಘಾತಕ್ಕೆ ಬಲಿ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ಮಗ ಚಿನ್ನದ ಪದಕ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲೆಂದು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಬಂದ ತಂದೆ ಆಳಂದದಲ್ಲಿ ಆಟೊ ಉರುಳಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ. ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು

ಬಸವಕಲ್ಯಾಣ ಜಾತ್ರೆಯಲ್ಲಿ ರಥದ ಚಕ್ರ ಹರಿದು ವ್ಯಕ್ತಿಯ ಕಾಲು ಕಟ್‌

ಬೀದರ್ ಬಸವಕಲ್ಯಾಣದಲ್ಲಿ ನಡೆದ ಬಸವೇಶ್ವರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ ಆಗಿದ್ದು, ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ನಗರದ ತೇರು ಎಳೆಯುವ ಮೈದಾನದಲ್ಲಿ ಈ ದುರಂತ ನಡೆದಿದೆ. ಬಸವೇಶ್ವರ ಜಾತ್ರಾ ರಥದಡಿ ಸಿಲುಕಿ ಧನರಾಜ್ ಎಂಬವರ

ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ತಾಯಿಯ ಮೃತದೇಹ ಪತ್ತೆಯಾಗಿದ್ದು, ಮಗನ ಮೃತದೇಹಕ್ಕಾಗಿ ಶೋಧ ಮುಂದುವರಿಸಲಾಗಿದೆ.27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್

ರಾಯಚೂರಿನಲ್ಲಿ ಸಿಡಿಲಿಗೆ ಮಹಿಳೆ, ತೆಂಗಿನ ಮರ ಬಲಿ

ರಾಯಚೂರು ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆ ಸಾರ್ವಜನಿಕರನ್ನು ಕಂಗೆಡಿಸಿದೆ. ಮಳೆಯ ಅಬ್ಬರದ ನಡುವೆ ಸಿಡಿಲಿನ ಹೊಡೆತಕ್ಕೆ ಲಿಂಗಸೂಗೂರು ತಾಲೂಕಿನಲ್ಲಿ ರೈತ ಮಹಿಳೆ ಬಲಿಯಾಗಿದ್ದಾರೆ. ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿಯ ಬಸವನ ಬಗಡಿ ದೊಡ್ಡಿಯಲ್ಲಿ ಈ ದುರಂತ ಸಂಭವಿಸಿದೆ. ಮಳೆ ಬರುತ್ತಿದ್ದ

ಪ್ರೀತಿಸಿ ಮದುವೆಯಾಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡಳು

ಮನೆಯವರು ಬೇಡವೆಂದರೂ ಕಾಡಿಸಿ ಪೀಡಿಸಿ ಇಷ್ಟಪಟ್ಟವನನ್ನೇ ಮದ್ವೆಯಾಗಿದ್ದ ಮಹಿಳೆ, ಈಗ ಗಂಡನನ್ನು ಬಿಟ್ಟು ಆತನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಬನ್ನಂಗಾಡಿಯಲ್ಲಿ ನಡೆದಿದೆ. ಮದುವೆಯಾಗಿ ಎರಡು ವರ್ಷದ ಬಳಿಕ ತಂಗಿ ತಂಗಿ ಎಂದೇ ಕರೆಯುತ್ತಿದ್ದ ಗಂಡನ ಸ್ನೇಹಿತನ

ನೈಟಿ ಧರಿಸುತ್ತಾಳೆಂದು ಖಾನಾಪುರದಲ್ಲಿ ಪತ್ನಿಗೆ ಬೆಂಕಿ ಹಚ್ಚಿದ ಪತಿ

ನೈಟಿ ಧರಿಸುತ್ತಾಳೆ ಎಂಬ ಕಾರಣಕ್ಕೆ ಗಂಡನೊಬ್ಬ ಹೆಂಡತಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ನಂದಗಡದಲ್ಲಿ ನಡೆದಿದೆ. ಕೃಷ್ಣಾಜಿ ಪಾಟೀಲ್ ಪತ್ನಿಗೆ ಬೆಂಕಿ ಹಚ್ಚಿದ್ದು, ಪತ್ನಿ ಮಂಜುಳಾ ಪಾಟೀಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 80% ಸುಟ್ಟ