ಯಾದಗಿರಿಯ ವಿದ್ಯಾರ್ಥಿ ಧಾರವಾಡದ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸ್ ಕಾನ್ಸೆಬಲ್ ಹುದ್ದೆಯ ತಯಾರಿಗೆ ಬಂದಿದ್ದ 19 ವರ್ಷದ ಮಹೇಶ ರಾಥೋಡ ವಿದ್ಯಾರ್ಥಿ ಜಯನಗರದ ಪಿ ಜಿಯ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಸುಸೈಡ್
ಪತ್ನಿಯು ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸಿದ್ದಕ್ಕೆ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ್ಯಾಮತಿ ತಾಲೂಕಿನ ಹೆಚ್ ಕಡದಕಟ್ಟೆ ಗ್ರಾಮದ ಬಳಿ ನಡೆದಿದೆ.
ಸರ್ವೆ ಇಲಾಖೆಯ ಗುತ್ತಿಗೆ ನೌಕರದ್ದ ಮಣಿಕಂಠ (28) ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂರು ತಿಂಗಳ ಹಿಂದೆ ರಾಣೇಬೆನ್ನೂರಿನ ಮಹಿಳೆಯನ್ನು ಮಣಿಕಂಠ ಮದುವೆಯಾಗಿದ್ದರು. ಮದುವೆಯಾಗಿ ಮೂರು ತಿಂಗಳ ಬಳಿಕ ಪತ್ನಿ ಪ್ರಿಯಕರನ ಜೊತೆ ಸಂಬಂಧ ಬೆಳೆಸಿದ್ದಳು. ಗ್ಗೆ ತಿಳುವಳಿಕೆ ಹೇಳಿದ್ದರೂ ಆಕೆ ಸಂಬಂಧ ಮುಂದುವರಿಸಿದ್ದಳು. ಇದರಿಂದ ನೊಂದು ಡೆತ್‌ನೋಟ್ ಬರೆದಿಟ್ಟು ತುಂಗಾ ನಾಲೆಗೆ ಹಾರಿ ಮಣಿಕಂಠ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ನ್ಯಾಮತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತುಂಗಾ ನಾಲೆಯಲ್ಲಿ ಸಗಟೂರು ಗ್ರಾಮದ ಬಳಿ ಮಣಿಕಂಠ ಮೃತದೇಹ ಪತ್ತೆಯಾಗಿದೆ.
ನನ್ನ ಪತ್ನಿ ಹಾಗೂ ಪ್ರಿಯಕರನಿಂದ ಸಾಕಷ್ಟು ನೊಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಹೊರತು, ಬೇರೆ ಯಾರೂ ಅಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಕುಟುಂಬಸ್ಥರು ಮಣಿಕಂಠ ಅವರ ಪತ್ನಿ ಹಾಗೂ ಪ್ರಿಯಕರನ ವಿರುದ್ಧ ನ್ಯಾಮತಿ ಠಾಣೆಗೆ ದೂರು ನೀಡಿದ್ದಾರೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


