Menu

ಮಸೀದಿಯಲ್ಲಿ ಆಝಾನ್ ಕೂಗುತ್ತಿರುವಾಗಲೇ ಕುಸಿದು ಮೃತಪಟ್ಟ ಧರ್ಮಗುರು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯಲ್ಲಿ ಆಝಾನ್ ಕೂಗುತ್ತಿರುವಾಗಲೇ ಬಂಟ್ವಾಳದ ಧರ್ಮಗುರು ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ ನೂಜಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಲತೀಫ್ ಮದನಿ (50) ಮೃತಪಟ್ಟವರು. ಸಂಜೆ ನಾಲ್ಕು ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಬಾಂಗ್‌ ಕೂಗುತ್ತಿದ್ದರು. ಅವರಿಗೆ ಹೃದಯಾಘಾತವಾಗಿ ಮೈಕ್ ಮುಂದೆ ಸ್ಥಳದಲ್ಲೇ ಕುಸಿದು ಅಸು ನೀಗಿದ್ದಾರೆ. ಮೃತ

ದೇವೇಗೌಡರಿಗೆ ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ತಪ್ಪಿದ್ದೇಕೆ?

ದೇವೇಗೌಡರ ವಯೋಮಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಲಿಲ್ಲ ಎಂದು ಈಗ ಹೇಳುವ ಹಾಗಿಲ್ಲ. ಈ ಮಾತುಗಳನ್ನು ದಿಲ್ಲಿ ವರಿಷ್ಠರು ಮೊದಲೇ ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜ. ಇದರಿಂದ ಬಿಜೆಪಿಗೆ ಹಳೇ ಮೈಸೂರಿನಲ್ಲಿ ರಾಜಕೀಯವಾಗಿ ಸಂಭವಿಸುವ ಹಾನಿಯಂತೂ

ಸಚಿವ ಸ್ಥಾನ ಕುರಿತು ಹೈಕಮಾಂಡ್ ತೀರ್ಮಾನ ಅಂತಿಮ: ಮಧು ಬಂಗಾರಪ್ಪ

ಸಚಿವ ಸಂಪುಟ ಪುನಾರಚನೆ ಹಾಗೂ ಸಚಿವ ಸ್ಥಾನಗಳ ಹಂಚಿಕೆ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಆ ನಿರ್ಧಾರಕ್ಕೆ ಪಕ್ಷದ ಎಲ್ಲ ನಾಯಕರು ಬದ್ಧರಾಗಿರಬೇಕಾಗುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,

ಮಂಡ್ಯದಲ್ಲಿ ತಂದೆ, ತಾಯಿ, ಮಗನ ಸಾವು

ಮಂಡ್ಯದ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಮೃತಪಟ್ಟಿದ್ದು, ತಂದೆ ನೇಣಿ ಬಿಗಿದುಕೊಂಡಿದ್ದರೆ, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಪ್ರಭಾಕರ್ (ತಂದೆ), ಜ್ಯೋತಿ (ತಾಯಿ) ಮತ್ತು ಸಂತೋಷ್ (ಪುತ್ರ) ಎಂದು ಗುರುತಿಸಲಾಗಿದೆ. ಜ್ಯೋತಿ ಮತ್ತು ಅವರ ಪುತ್ರ

ಅವಲಹಳ್ಳಿಯಲ್ಲಿ ಅಕ್ರಮ ಸ್ಫೋಟಕ ಸಂಗ್ರಹ ಪತ್ತೆ

ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡ ಅಗ್ರಹಾರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 225 ಜಿಲೆಟಿನ್ ಕಡ್ಡಿ ಹಾಗೂ 50 ಡಿಟೋನೇಟರ್‌ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡು ಯಾವ ಕಾರಣಕ್ಕೆ ಸ್ಫೋಟಕ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ

ಉಜ್ವಲ ಸಬ್ಸಿಡಿ ಸಿಲಿಂಡರ್ ಕಡಿತ; ಫಲಾನುಭವಿ ಮೇಲೆ 24,792 ಕೋಟಿ ರೂ. ಹೊರೆ: ಸುರ್ಜೇವಾಲ

ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿನಿತ್ಯ ಜನಸಾಮಾನ್ಯರ ಜೇಬಿನ ಮೇಲೆ ದಾಳಿ ಮಾಡಲಾಗುತ್ತಿದೆ. ನಮ್ಮ ತಾಯಂದಿರು ಹಾಗೂ ಸಹೋದರಿಯರ ಪ್ರತಿ ತಿಂಗಳ ಖರ್ಚಿನ ಮೇಲೆ ದಾಳಿ ಮಾಡಲಾಗುತ್ತಿದೆ.  ಕೇಂದ್ರ ಸರ್ಕಾರ ಉಜ್ವಲ ಯೋಜನೆ ಫಲಾನುಭವಿ ಮಹಿಳೆಯರ ಮೇಲೆ

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅಧಿಕಾರಕ್ಕಿಂತ ಸಂಘಟನೆಗೆ ಆದ್ಯತೆ ನೀಡಿದ್ದ ಎಐಸಿಸಿ ಕಾರ್ಯದರ್ಶಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಭಾವಪೂರ್ಣ ಅಂತಿಮ ವಿದಾಯ ಸಲ್ಲಿಸಲಾಯಿತು. ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಎಐಸಿಸಿ ಪ್ರಧಾನ

ವಿಶಾಖಪಟ್ಟಣದಲ್ಲಿ ಕುದಿಯುತ್ತಿದ್ದ ಉಕ್ಕು ಕಾರ್ಮಿಕರ ಮೇಲೆ ಬಿದ್ದು ಎಂಟು ಮಂದಿ ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ನಲ್ಲಿ ಕ್ರೇನ್ ಮೂಲಕ ಸಾಗಿಸುತ್ತಿದ್ದ ಕುದಿಯುತ್ತಿದ್ದ ಉಕ್ಕು ಕಾರ್ಮಿಕರ ಮೇಲೆ ಬಿದ್ದು ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಕುದಿದು ಕರಗಿದ ಉಕ್ಕು ಕ್ಯಾಸ್ಟಿಂಗ್ ಕಾರ್ಯಾಚರಣೆ ವೇಳೆ ಸೋರಿಕೆಯಾಗಿ

ಬ್ರ್ಯಾಂಡ್‌ ಬೆಂಗಳೂರು ಅಲ್ಲ, ಬ್ರೋಕನ್ ಬೆಂಗಳೂರು: ಆರ್‌ ಅಶೋಕ

‘ಬ್ರ್ಯಾಂಡ್ ಬೆಂಗಳೂರು’ ಅಲ್ಲ, ಇದು ಡಿಕೆಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್‌ಬಂದಿಯ ಬ್ರೋಕನ್ ಬೆಂಗಳೂರು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ

H-1B ವೀಸಾಗೆ 1 ಲಕ್ಷ ಡಾಲರ್‌ ಶುಲ್ಕ ರದ್ದುಗೊಳಿಸಿದ ಅಮೆರಿಕ ಕೋರ್ಟ್‌

ಡೊನಾಲ್ಡ್ ಟ್ರಂಪ್ ಆಡಳಿತ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾಗಳ ಮೇಲೆ ವಿಧಿಸಿದ್ದ 1 ಲಕ್ಷ ಡಾಲರ್‌ ( ರೂ.83 ಲಕ್ಷ) ಶುಲ್ಕವನ್ನು ಅಲ್ಲಿನ ಫೆಡರಲ್ ಕೋರ್ಟ್ ರದ್ದುಗೊಳಿಸಿದೆ. ಬೋಸ್ಟನ್‌ನ ಫೆಡರಲ್ ಜಿಲ್ಲಾ ನ್ಯಾಯಾಧೀಶ ಲಿಯೋ ಸೊರೊಕಿನ್ ಈ ಸಂಬಂಧ ತೀರ್ಪು