Saturday, September 12, 2026
Menu

ನಕಲಿ ವೈದ್ಯರು ಸಿಕ್ಕರೆ ಡಿಎಚ್‌ ಒ ಮೇಲೂ ಕಠಿಣ ಕ್ರಮ: ಸಚಿವ ಖಾದರ್

ನಕಲಿ ವೈದ್ಯರ ಹಾವಳಿಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ,  ನಕಲಿ ವೈದ್ಯರ ಬಗ್ಗೆ ಮಾಹಿತಿ ಕೊಟ್ಟದೆ ಕಾನೂನು ಕ್ರಮ ಆಗುತ್ತದೆ. ಜಿಲ್ಲೆಯಲ್ಲಿ ನಕಲಿ ವೈದ್ಯರು ಸಿಕ್ಕರೆ ಡಿಎಚ್ ಒ ಮೇಲೂ ಕ್ರಮ ಆಗುತ್ತದೆ ಎಂದು ಆರೋಗ್ಯ ಸಚಿವ ಯುಟಿ ಖಾದ‌ರ್ ಹೇಳಿದ್ದಾರೆ.

ಡಿಎಚ್ ಒ ಗಮನಕ್ಕೆ ಇಲ್ಲದೇ ಏನೂ ಆಗುವುದಿಲ್ಲ. ಹೀಗಾಗಿ ನೇರವಾಗಿ ಡಿಎಚ್‌ಒ ಮೇಲೆ ಉಗ್ರ ಕ್ರಮ ಜರುಗಿಸಲಾಗುವುದು ಹಾಗೂ ಆಯಾ ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕುರಿತಂತೆ ಮಾಹಿತಿ ಕೊಟ್ಟರೆ ಅವರ ಹೆಸರು ಗೌಪ್ಯವಾಗಿಡಲಾಗುವುದು ಮತ್ತು ಅಂತವರಿಗೆ ಬಹುಮಾನ ಕೊಡಲಾಗುವುದು ಎಂದು  ಎಚ್ಚರಿಕೆ ನೀಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ  ಜಿಲ್ಲೆಯ ಮೂರು ಪಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ.  ತಾಲೂಕು ಮತ್ತು ಜಿಲ್ಲಾ  ಆಸ್ಪತೆಯಲ್ಲಿ ಎಲ್ಲಾ ಕಡೆ ವೈದ್ಯರು ಇದ್ದಾರೆ,  ಲಾಬ್ ಟೆಕ್ನಿಷಿಯನ್ ಕೂಡ ಇದ್ದಾರೆ.  ಧಾರವಾಡ ಜಿಲ್ಲಾ ಆಸ್ಪತೆಗೆ ಒಳ್ಳೆಯ  ಪ್ರತಿಕ್ರಿಯೆ ಬರುತ್ತಿದೆ, ಆದರೆ ಅಲ್ಲಿ ಬೆಡ್‌ ಕಡಿಮೆ ಇದೆ,  ಸಾವಿರ ಬೆಡ್ ಮಾಡುವ ಯೋಜನೆ ಇದೆಎಂದು ತಿಳಿಸಿದ್ದಾರೆ.

ಕಲಬೆರಕ ಆಹಾರಕ್ಕೆ ಸಂಬಂದಿಸಿದಂತೆ ಮೇಲಿಂದ ಕೆಳ ಹಂತದವರೆಗೂ  ತಪಾಸಣೆ ನಡೆಸಿದ್ದೇವೆ, ಹೋಟೆಲ್ ನವರು ಜನರಿಗೆ ಮೋಸ ಮಾಡದಂತೆ ನೋಡಿಕೊಳ್ಳುತ್ತಿದ್ದೇವೆ  ಎಂದು ಸಚಿವರು ತಿಳಿಸಿದರು.

ಸಿನಿಮಾ ಶೂಟಿಂಗ್ ವೇಳೆ ಎಲ್ಲರೂ ಫೋಟೋ ತೋರಿಸುತ್ತಾರೆ, ಆದರೆ ತಂಬಾಕು ತಿಂದು ಐಸಿಯು ನಲ್ಲಿ ಒಬ್ಬನೇ ಮಲಗಬೇಕಾಗುತ್ತದೆ ಎಂಬುದು ಸಮಾಜದ ಪ್ರತಿಯೊಬ್ಬರಿಗೂ ಮನವರಿಕೆ ಮಾಡುವ  ಪ್ರಚಾರ ಕಾರ್ಯ ಆಗಬೇಕಾಗಿದೆ ಎಂದು ಖಾದರ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *