ಕೇಂದ್ರಕ್ಕೆ ಬೃಹತ್ ಉದ್ಯಮಿಗಳ ಕಾಳಜಿಯೊಂದಿಗೆ ಸಾಮಾನ್ಯ ಗ್ರಾಹಕನ ಮತ್ತು ತೆರಿಗೆದಾರನ ಕ್ಷೇಮವೂ ಮುಖ್ಯವಾಗಲಿ
ಕರಸಮಾಧಾನ ಮತ್ತು ತೆರಿಗೆ ಇಳಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕೇವಲ ದೇಶದ ಬೃಹತ್ ಉದ್ಯಮಿಗಳ ಮೇಲಿನ ಕರಭಾರವನ್ನು ಇಳಿಸುವ ಕಾಳಜಿಯೊಂದೇ ಸಾಲದು. ಇಂದಿನ ಜಾಗತಿಕ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಗ್ರಾಹಕನ ಮತ್ತು ತೆರಿಗೆದಾರನ ಮೈ ಸುಡದಂತೆ ಸೂಕ್ತ ತೆರಿಗೆ ಪರಿಹಾರಗಳನ್ನು ಘೋಷಿಸುವ ಸಾಮಾಜಿಕ ಸಂಕ್ಷೇಮ ಆಲೋಚನೆಯೂ ಅತ್ಯವಶ್ಯಕ. ಪ್ರಪಂಚದಲ್ಲಿಯೇ ಅತಿ ದೊಡ್ಡ ಮೂರನೆ ದೇಶವಾದ ಭಾರತಕ್ಕೆ ಇದು ಪರ್ವಕಾಲ. ಸಂಕಷ್ಟದ ಸಮಯವೂ ಹೌದು. ಒಂದು ಕಡೆ ಯುದ್ಧ. ಮತ್ತೊಂದು ಕಡೆ
ಅಪಪ್ರಚಾರಕ್ಕೆ ನೊಂದು ಹೊಳಲ್ಕೆರೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಚಿತ್ರದುರ್ಗ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಾಧ್ಯಾಪಕರೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ನಡೆಸಿದ್ದಕ್ಕೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನ ಮನೆಯಲ್ಲಿ
ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವುದಿಲ್ಲ: ಸಚಿವ ಸಂತೋಷ್ ಲಾಡ್
ಯಾವ ಒಬ್ಬ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವುದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ನಾನು ಮಾತನಾಡುವೆ. ಒಂದು ವೇಳೆ ಅನ್ಯಾಯವಾದರೆ ನಿಮ್ಮನ್ನು ಕರೆದುಕೊಂಡು ನೇರವಾಗಿ ಸಿಎಂ ಅವರ ಬಳಿಗೆ ಹೋಗುತ್ತೇನೆ ಮತ್ತು ನಿಮ್ಮ ಜೊತೆಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ. ಆದ್ದರಿಂದ ನಿರಾತಂಕವಾಗಿರಿ ಎಂದು
ಧರ್ಮಸ್ಥಳದಲ್ಲಿ ಅಸಹಜ ಸಾವುಗಳು: ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ
ಧರ್ಮಸ್ಥಳದಲ್ಲಿ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ವೀಡಿಯೊ ಪೋಸ್ಟ್ ಮಾಡಿರುವ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಎಂಡಿ ಸಮೀರ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ನ್ಯಾಯಾಲಯ ತಡೆ ನೀಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ
ಭಾರತದಲ್ಲಿ12 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಒರಾಕಲ್
ಅಮೆರಿಕದ ಐಟಿ ಕಂಪನಿ ಒರಾಕಲ್ ಭಾರತದಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ, ಮುಂದಿನ ಒಂದು ತಿಂಗಳ ಒಳಗೆ ಮತ್ತೊಂದು ಸುತ್ತಿನಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಜಾಗತಿಕವಾಗಿ 30,000 ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಒರಾಕಲ್ ಕಂಪನಿಯು
ಬೆಸುಗೆಯ ಹೊಸ ಆರಂಭ ‘ಜೋಡಿ ನಂ.1’ ಇದೇ ಏಪ್ರಿಲ್ 4 ರಿಂದ ಜೀ ಕನ್ನಡ ವಾಹಿನಿಯಲ್ಲಿ
ಜೀ ಕನ್ನಡ ವೀಕೆಂಡ್ ಎಂಟರ್ಟೈನ್ಮೆಂಟ್ ಅನ್ನು ಇನ್ನಷ್ಟು ಬಲಪಡಿಸಲು ಸಜ್ಜಾಗಿದೆ. ಹೊಸ ನಾನ್-ಫಿಕ್ಷನ್ ಶೋ ಜೋಡಿ ನಂ.1 ಏಪ್ರಿಲ್ 4 ರಿಂದ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಜನಪ್ರಿಯ ಹಿರಿತೆರೆ ಮತ್ತು ಕಿರುತೆರೆ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು
ಬಿಜೆಪಿಯ ಅಪಪ್ರಚಾರದ ನಡುವೆಯೂ ಅಭಿವೃದ್ಧಿ ಹಾಗೂ ಗ್ಯಾರಂಟಿಗಳು ದಾವಣಗೆರೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಲಿದೆ: ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಾಗೂ ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿಯವರು ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು
ಮದುವೆ ಮಾಡಿಸಿಲ್ಲವೆಂದು ಹಾಸನದಲ್ಲಿ ತಾಯಿಯ ಕೊಲೆಗೈದ ಮಗ
ನಲ್ವತ್ತು ವರ್ಷ ಆಗಿದ್ದರೂ ಮದುವೆ ಮಾಡಿಸಿಲ್ಲವೆಂದು ಮಗನೊಬ್ಬ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್ (40) ತಾಯಿಯನ್ನು ಕೊಲೆ ಮಾಡಿದ ಮಗ. ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್
ಮತ್ತೊಂದು ಮದುವೆಯಾದ ಪತಿ: ಮಕ್ಕಳ ಕೊಂದು ಸುಸೈಡ್ ಮಾಡಿಕೊಂಡ ಪತ್ನಿ
ಪತಿ ಮತ್ತೊಂದು ಮದುವೆಯಾದ ಕಾರಣಕ್ಕೆ ನೊಂದ ಮಹಿಳೆ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಎಸ್ ಬಾನೋತ್ ಶ್ರಾವಂತಿ (29) ಮತ್ತು ಮಕ್ಕಳಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಎಂದು ಗುರುತಿಸಲಾಗಿದೆ. ದೀರ್ಘಕಾಲದ ಕೌಟುಂಬಿಕ ಕಲಹವೇ ಈ
ಯುದ್ಧ ಶೀಘ್ರ ಕೊನೆ ಎಂದ ಟ್ರಂಪ್, ಇರಾನ್ ವಿರುದ್ಧ ದಾಳಿ ನಿಲ್ಲಿಸಲ್ಲವೆಂದ ಇಸ್ರೇಲ್
ಇರಾನ್ ಜೊತೆಗಿನ ಯುದ್ಧವು ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದು, ಅಮೆರಿಕ ಯುದ್ಧ ನಿಲ್ಲಿಸಿದರೂ ನಾವು ಇರಾನ್ ವಿರುದ್ಧದ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಇರಾನ್




