Menu

ಶಾಶ್ವತ ನಿವಾಸ ಪ್ರಮಾಣ ಪತ್ರ ಅಂದರೆ ಅದು ಪೌರತ್ವ ವಿಚಾರ: ಚರ್ಚೆಗೆ ಗ್ರಾಸವಾದ ಎಂಎಲ್ಸಿ ಛಲವಾದಿ ಹೇಳಿಕೆ

ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದು, ಶಾಶ್ವತ ನಿವಾಸ ಪ್ರಮಾಣ ಪತ್ರ ಅಂದರೆ ಅದು ಪೌರತ್ವ ವಿಚಾರ. ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡಲು ರಾಜ್ಯ ಸರ್ಕಾರ ಯಾರು, ಪ್ರಮಾಣ ಪತ್ರ ಕೊಟ್ಟು ನಾವೇ ಕೇಂದ್ರ ಸರ್ಕಾರ ಅಂತ ಭಾವಿಸಸಬೇಕಿಲ್ಲ ಎಂದು ಹೇಳಿದ್ದಾರೆ.

ಪೌರತ್ವ ರಾಷ್ಟ್ರಕ್ಕೆ ಸಂಬಂಧಿಸಿದ್ದು. ಭಾರತದ ಪೌರತ್ವವನ್ನು ಹೊಂದಿದ್ದರೆ ಭಾರತದ ಪಾಸ್‌ಪೋರ್ಟ್ ಪಡೆಯಲು ಮತ್ತು ದೇಶದ ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅರ್ಹತೆ ಇರುತ್ತದೆ. ಶಾಶ್ವತ ನಿವಾಸ ಪತ್ರ ರಾಜ್ಯ ಮಟ್ಟದ ಆಡಳಿತಾತ್ಮಕ ದಾಖಲೆ. ಕರ್ನಾಟಕದಲ್ಲಿ ಸತತ 10 ವರ್ಷ ವಾಸವಿರುವವರಿಗೆ ಸ್ಥಳೀಯವಾಗಿ ಶಿಕ್ಷಣ, ವಿದ್ಯಾರ್ಥಿವೇತನ, ಸರ್ಕಾರಿ ಸವಲತ್ತುಗಳು ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ಇದನ್ನು ನೀಡಲಾಗುತ್ತದೆ. ಹೀಗಾಗಿ ನಾರಾಯಣಸ್ವಾಮಿಯವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಮಾದ್ಯಮದವರೊಂದಿಗೆ ಮಾತನಾಡಿದ ಅವರು. ಬೆಂಗಳೂರು ಅಭಿವೃದ್ಧಿ ಕೇವಲ ಮಾತಲ್ಲಿ ಆಗದು. ಕೆಲಸ ಮಾಡಿ ತೋರಿಸಬೇಕಿದೆ. ಸಿದ್ದರಾಮಯ್ಯ ಅವರಿದ್ದಾಗಲೂ ಅಭಿವೃದ್ಧಿ ಆಗಲಿಲ್ಲ. ಈಗ ಡಿಕೆ ಶಿವಕುಮಾರ್ ಬಂದ ಮೇಲೆ ಮಳೆ ಕೂಡ ಸರಿಯಾಗಿ ಬ ರುತ್ತಿಲ್ಲ, ಬೆಂಗಳೂರಿನಲ್ಲಿ ಉತ್ತಮ ರಸ್ತೆ ಇಲ್ಲ, ಅದನ್ನು ಮಾಡಲಿ ಎಂದು ಸಲಹೆ ನೀಡಿದರು.

ಜಿಬಿಎ ಚುನಾವಣೆ ಮುಂದೂಡಿಕೆ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ಆದೇಶವನ್ನು ಸರ್ಕಾರ ಗೌರವಿಸಬೇಕು. ಚುನಾವಣೆ ಮಾಡಿ ನಾವು ಗೆಲ್ಲಲು ಸಾಧ್ಯವಿಲ್ಲ ಅನ್ನುವುದು ಅವರಿಗೆ ಗೊತ್ತಾಗಿದೆ ಎಂದರು.

ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ – 2026 ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿ, ಈ ಆದೇಶವು ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತದೆ. ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಲಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೂ ಒಂದೇ ಪೌರತ್ವವನ್ನು ಕಲ್ಪಿಸಿದೆ. ಕರ್ನಾಟಕ ಸರ್ಕಾರವು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ಶಾಶ್ವತ ನಿವಾಸಿಗಳು ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಹೊರಟಿದೆ. ಸಂವಿಧಾನದ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ 14ನೇ ವಿಧಿಯ ನೇರ ಉಲ್ಲಂಘನೆ ಎಂದು ತಿಳಿಸಿದ್ದಾರೆ.

ದೇಶದೊಳಗೆ ಅಕ್ರಮವಾಗಿ ನುಸುಳಿರುವ ವಿದೇಶಿ ಪ್ರಜೆಗಳು ಅಥವಾ ಅಕ್ರಮ ವಲಸಿಗರು ಸುಲಭವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ‘ಶಾಶ್ವತ ವಸತಿ ಪ್ರಮಾಣಪತ್ರ’ ಪಡೆಯುವ ಅಪಾಯವಿದೆ. , ಅದನ್ನು ಬಳಸಿ ಅವರು ಸರ್ಕಾರದ ಸವಲತ್ತುಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಶೋಭಾ ಕಳವಳ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *