Saturday, October 03, 2026
Menu

ಮಾಜಿ ಸಿಎಂ ಪುತ್ರರ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ಗೆಲ್ಲಿಸಿದ್ದೇವೆ: ಸಿಎಂ ಡಿಕೆ ಶಿವಕುಮಾರ್‌

ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್. ನನಗೂ ಅಧಿಕಾರ ತಡವಾಗಿ ಸಿಕ್ಕಿತು. ರಾಮನಗರದಲ್ಲಿ ಮಾಜಿ ಮುಖ್ಯಮಂತ್ರಿ ಮಗನ ವಿರುದ್ಧ ಇಕ್ಬಾಲ್ ಹುಸೇನ್ ನಿಲ್ಲಿಸಿ ಗೆಲ್ಲಿಸುವುದು ಸುಲಭದ ಮಾತಲ್ಲ. ಬೊಮ್ಮಾಯಿ ಅವರ ಮಗನ ವಿರುದ್ಧವೂ ಪಠಾಣ್ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಸುಲಭವಾಗಿ ಇರಲಿಲ್ಲ. ಯುಟಿ ಖಾದರ್ ಕಳೆದ ಬಾರಿ ಮಂತ್ರಿ ಆಗಬೇಕಿತ್ತು. ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ಈಗ ಆರೋಗ್ಯ ಇಲಾಖೆ ನೀಡಿದ್ದೇವೆ ಎಂದು  ಸಿಎಂ  ಡಿಕೆ ಶಿವಕುಮಾರ್  ಹೇಳಿದ್ದಾರೆ.

ಲಿವ್ ಇನ್ ರಿಲೇಷನ್‌ಶಿಪ್‌ ಬೇಡ: ಬುದ್ಧಿ ಹೇಳಿದ ತಂದೆ, ತಾಯಿ, ತಂಗಿಯ ಕೊಲೆಗೈದ ಯುವತಿ

ಲಿವ್-ಇನ್ ರಿಲೇಷನ್‌ಶಿಪ್‌ಗೆ  ವಿರೋಧ ವ್ಯಕ್ತಪಡಿಸಿ, ಬುದ್ಧಿ ಹೇಳಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ತಂದೆ, ತಾಯಿ, ತಂಗಿಯನ್ನು ಪ್ರಿಯಕರನೊಂದಿಗೆ ಸೇರಿ ಯುವತಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಕೆಆರ್ ಪುರದ ಸಿಗೇಹಳ್ಳಿಯಲ್ಲಿ ನಡೆದಿದೆ. ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಮಗಳು

ಕಡೂರಿನಲ್ಲಿ ಪೊಲೀಸ್‌ ವಿಚಾರಣೆ ಎದುರಿಸಿದ ಯುವಕ ಆತ್ಮಹತ್ಯೆ

ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಇಪ್ಪತ್ತು ವರ್ಷದ ಯುವಕ ಪ್ರಕರಣವೊಂದರಲ್ಲಿ ಪೊಲೀಸ್‌ ವಿಚಾರಣೆ ಎದುರಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಚಂದನ್  ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಡ್ಲೂರು ಗ್ರಾಮದ ಯುವತಿಯೊಬ್ಬಳು ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೀರೂರು ಪೊಲೀಸರು, ಆಕೆಯ

ಶ್ರೀಮಂತರೊಂದಿಗೆ ಸ್ನೇಹದ ನಾಟಕವಾಡಿ ಹಣ ವಂಚಿಸುತ್ತಿದ್ದ ಮಹಿಳೆ ಅರೆಸ್ಟ್‌

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಪರಿಚಯಿಸಿಕೊಂಡ ಬಳಿಕ ಸ್ನೇಹದ ನಾಟಕವಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಎಂಬಾಕೆಯನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಿರುತೆರೆ ನಟಿ ಎಂದು ಪರಿಚಯ

ಪ್ರತಿಪಕ್ಷ ಮುಕ್ತಗೊಳಿಸುವ ಚಾಳಿ: ಸಾಮೂಹಿಕ ಪ್ರಜಾ ಚಳವಳಿ ಅನಿವಾರ್ಯ

ಚುನಾವಣೆಗಳಲ್ಲಿ ಗೆದ್ದ ಕೂಡಲೇ ಗೆದ್ದ ಪಾರ್ಟಿಯ ಬಾಲವನ್ನು ಹಿಡಿದು ಮುಂದೆ ಸಾಗುವ ಜನಪ್ರತಿನಿಧಿಗಳಿಗೆ ಈ ದೇಶದ ಮತದಾರರು ಖಂಡಿತವಾಗಿಯೂ ಪಾಠ ಕಲಿಸಬೇಕಿದೆ. ತಾವು ಗೆದ್ದು ಬಂದ ಪಾರ್ಟಿಯನ್ನೇ ಮೂಲೆಗೆ ತಳ್ಳಿ ಹಣ ಮತ್ತು ಅಧಿಕಾರದ ಆಮಿಷಗಳಿಗೆ ಜೋತು ಬೀಳುವ ಪ್ರತಿನಿಧಿಗಳ ವಿರುದ್ಧ

ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಿ: ವಿದ್ಯಾರ್ಥಿಗಳಿಗೆ ಸಿಎಂ ಸಲಹೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸ್ಕೌಟ್ ಕಾರ್ಯಕ್ರಮವನ್ನು 3 ವರ್ಷಗಳಿಗೆ ಸೀಮಿತಗೊಳಿಸದೆ ಇದನ್ನು ಹೆಚ್ಚಿನ ಅವಧಿಗೆ ವಿಸ್ತರಿಸಿ ಎಂದು ಸಿಎಂ ಡಿಕೆ ಶಿವಕುಮಾರ್  ಸಲಹೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್

ಮೈಸೂರಿನಲ್ಲಿ ವಿಷ ಸೇವಿಸಿ ಮದುವೆ ನಿಗದಿಯಾಗಿದ್ದ ಮಗಳು,ತಂದೆ, ತಾಯಿ ಸುಸೈಡ್‌

ಮೈಸೂರು ಟಿ.ನರಸೀಪುರದ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ತಂದೆ, ತಾಯಿ ಮತ್ತು ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಣ್ಣ, ಪತ್ನಿ ನಾಗರತ್ನ ಮತ್ತು ಮಗಳು ರಕ್ಷಿತಾಆತ್ಮಹತ್ಯೆ ಮಾಡಿಕೊಂಡವರು. ಕುಟುಂಬ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್​ನೋಟ್​​

ಚಳ್ಳಕೆರೆ ಮತದಾರರ ಗುರುತಿನ ಚೀಟಿಯಲ್ಲಿ ಪಡಿತರ ಚೀಟಿ ಫೋಟೊ: ಸಾರ್ವಜನಿಕರ ಆಕ್ರೋಶ

  ಚಳ್ಳಕೆರೆಯಲ್ಲಿ  ಮತದಾರರ ಗುರುತಿನ ಚೀಟಿಯಲ್ಲಿ ಮತದಾರನ ಭಾವಚಿತ್ರದ ಬದಲು ಪಡಿತರ ಚೀಟಿಯಲ್ಲಿನ ಕುಟುಂಬದ ಫೋಟೊ ಮುದ್ರಿಸಿದ್ದು,  ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಚಳ್ಹಳಕೆರೆ ಳೇ ಟೌನ್ ನಿವಾಸಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಗುರುತಿನ ಚೀಟಿ ಪಡೆಯುವ

ಮುಧೋಳದಲ್ಲಿ ಬಸ್‌ಗೆ ಬೈಕ್‌ ಡಿಕ್ಕಿ: ಯುವಕ ಸಜೀವ ದಹನ

ಮುಧೋಳ ತಾಲೂಕಿನ ಸೊರಗಾಂವ್ ಗ್ರಾಮದ ಬಳಿ ಬಸ್‌ಗೆ ಬೈಕ್ ಡಿಕ್ಕಿಯಾಗಿದ್ದು, ಬೈಕ್‌ಗೆ ಬೆಂಕಿ ತಗುಲಿ ಯುವಕ ಜೀವಂತವಾಗಿ ದಹನಗೊಂಡಿರುವ ಭೀಕರ ಘಟನೆ ನಡೆದಿದೆ. ಮುಧೋಳ ಪಟ್ಟಣದ ಜನತಾ ಪ್ಲಾಟ್ ನಿವಾಸಿ ನವೀನ್ ಹನುಮಂತ ಗೋರ್ಕ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಬಾದಾಮಿಯಿಂದ

ಸದಾಶಿವನಗರ ನಿವಾಸಕ್ಕೆ ಬರಬೇಡಿ, ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ: ಸಿಎಂ

ಇನ್ನು ಮುಂದೆ ಸಾರ್ವಜನಿಕರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡುವುದಾಗಿ ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಇನ್ನು ಮುಂದೆ ಸದಾಶಿವನಗರ ನಿವಾಸದಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ, ಯಾರೂ ಇಲ್ಲಿಗೆ