Menu

ಚಳ್ಳಕೆರೆ ಮತದಾರರ ಗುರುತಿನ ಚೀಟಿಯಲ್ಲಿ ಪಡಿತರ ಚೀಟಿ ಫೋಟೊ: ಸಾರ್ವಜನಿಕರ ಆಕ್ರೋಶ

 

ಚಳ್ಳಕೆರೆಯಲ್ಲಿ  ಮತದಾರರ ಗುರುತಿನ ಚೀಟಿಯಲ್ಲಿ ಮತದಾರನ ಭಾವಚಿತ್ರದ ಬದಲು ಪಡಿತರ ಚೀಟಿಯಲ್ಲಿನ ಕುಟುಂಬದ ಫೋಟೊ ಮುದ್ರಿಸಿದ್ದು,  ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಚಳ್ಹಳಕೆರೆ ಳೇ ಟೌನ್ ನಿವಾಸಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಗುರುತಿನ ಚೀಟಿ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅವರಿಗೆ ವಿತರಿಸಲಾದ EPIC ಕಾರ್ಡ್‌ನಲ್ಲಿ ಅವರ ವೈಯಕ್ತಿಕ ಭಾವಚಿತ್ರದ ಬದಲಿಗೆ ಪಡಿತರ ಚೀಟಿಯಲ್ಲಿದ್ದ ಕುಟುಂಬದ ಚಿತ್ರ ಮುದ್ರಣಗೊಂಡಿದೆ, ಈ ಗುರುತಿನ ಚೀಟಿ ತಾಲೂಕು ಕಚೇರಿಯ ಪುಟ್ಬಾತ್  ಬಳಿ ಸಾರ್ವಜನಿಕರೊಬ್ಬರಿಗೆ ಸಿಕ್ಕಿದೆ.

ಮತದಾರರ ಗುರುತಿನ ಚೀಟಿ  ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸಲು ಮಾತ್ರವಲ್ಲದೆ, ಸರ್ಕಾರಿ ಸೇವೆಗಳು, ಗುರುತಿನ ದೃಢೀಕರಣ ಹಾಗೂ ಅಧಿಕೃತ ದಾಖಲೆಗಳ ಪರಿಶೀಲನೆ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಇಂಥ ಪ್ರಮುಖ ದಾಖಲೆಯಲ್ಲಿ  ಈ ರೀತಿಯ ಎಡವಟ್ಟುಗಳು  ಚುನಾವಣಾ ಇಲಾಖೆಯ ಮಾಹಿತಿ ಪರಿಶೀಲನೆ ಮತ್ತು ದಾಖಲೆ ನಿರ್ವಹಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಯಲಿಗೆಳೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.  ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅರ್ಜಿ ಸಲ್ಲಿಕೆ, ದಾಖಲೆ ಪರಿಶೀಲನೆ, ಡಿಜಿಟಲ್ ಡೇಟಾ ಅಪ್‌ಲೋಡ್ ಮತ್ತು ಕಾರ್ಡ್ ಮುದ್ರಣ ಹಂತಗಳಲ್ಲಿ ಸೂಕ್ತ ಮೇಲ್ವಿಚಾರಣೆ ನಡೆದಿದ್ದರೆ ಇಂತಹ ತಪ್ಪು ಸಂಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯ ದೋಷಗಳು ಇತರ ಮತದಾರರ ದಾಖಲೆಗಳಲ್ಲಿಯೂ ಸಂಭವಿಸಿವೆಯೇ ಎಂಬುದನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.  ಈ ತಪ್ಪಿಗೆ ಕಾರಣರಾದವರನ್ನು ಗುರುತಿಸಿ ಚುನಾವಣಾ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಕಟ್ಟುನಿಟ್ಟಿನ ಗುಣಮಟ್ಟ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇದು ಗಂಭೀರ ನಿರ್ಲಕ್ಷ್ಯದ ಉದಾಹರಣೆ,  ಚುನಾವಣಾ ಇಲಾಖೆ ಮಾಹಿತಿ ಸಂಗ್ರಹ ಮತ್ತು ದಾಖಲೆ ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ  ಪಾರದರ್ಶಕ ತನಿಖೆ ನಡೆಸಬೇಕು ಎಂದು ಕೆ ಆರ್ ಎಸ್ ಪಕ್ಷದ ಮುಖಂಡ ಮಹೇಶ್ ಸಿ ನಗರಂಗೆರೆ  ಹೇಳಿದ್ದಾರೆ.

ಡಿಜಿಟಲ್ ಯುಗದಲ್ಲಿಯೂ ಇಂತಹ ಪ್ರಮಾದಗಳು  ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ. ಮತದಾರರ ಮಾಹಿತಿ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ತಾಂತ್ರಿಕ ನಿಖರತೆ ಅಗತ್ಯ. ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ರಾಜ್ಯದಾದ್ಯಂತ ದಾಖಲೆಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ  ಕೆ.ಮುರುಳಿ ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *