Menu

ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್‌ ಯುವತಿ ಸುಸೈಡ್‌

ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಾಗಾಲ್ಯಾಂಡ್‌ನ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಲಿನ್ಸುಲಾ (22) ಎಂದು ಗುರುತಿಸಲಾಗಿದೆ. ಯುವತಿ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ದಿನದ ಹಿಂದೆ ಕಿವಿಶೆ ಕಿನಿಮಿ ಎಂಬವರ ಜೊತೆ ಅರ್ಧ ಗಂಟೆ ಮಾತನಾಡಿದ್ದಳು ಎಂದು ತಿಳಿದು ಬಂದಿದೆ. ಯುವತಿ ಸಾವಿಗೂ ಮುನ್ನ ರಾಜೇಶ್ ಹಾಗೂ ತೇಜಸ್ ಎಂಬವರ ಹೆಸರನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಲಿನ್ಸುಲಾಳಿಗೆ ರಾಜೇಶ್ ಹಾಗೂ ತೇಜಸ್ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು

ದಾವಣಗೆರೆ ಬಂಡಾಯ ಅಭ್ಯರ್ಥಿಗಳು ನಮ್ಮವರೇ, ಚರ್ಚಿಸಿ ಸರಿ ಮಾಡಲಾಗುವುದು: ಡಿಕೆ ಶಿವಕುಮಾರ್

“ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ದೆಹಲಿಯ ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನಕ್ಕಾಗಿ ದೆಹಲಿಗೆ ಆಗಮಿಸಿದ್ದೇನೆ.

ಪರಿಮಿತ ಅಣ್ವಸ್ತ್ರ: ಅಗ್ರ ದೇಶಗಳು ಸಮನ್ವಯ ಸಾಧಿಸುವುದೇ?

ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹಕ್ಕೆ ಶಾಶ್ವತವಾಗಿ ಲಗಾಮು ವಿಧಿಸಿ ಗೊತ್ತುವಳಿ ಅಂಗೀಕರಿಸುವ ಅಧಿಕಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗಿದೆ. ಆದರೆ ಇಂತಹ ಗೊತ್ತುವಳಿ ಅಂಗೀಕಾರಕ್ಕೆ ಇಂದು ಅಗ್ರ ದೇಶಗಳು ಹೊಂದಿರುವ ವೀಟೋ ಅಧಿಕಾರವೇ ಬಹುದೊಡ್ಡ ತೊಡಕು. ಎಲ್ಲಿಯವರೆಗೂ ಅಗ್ರದೇಶಗಳು ಈ ವಿಚಾರದಲ್ಲಿ ಏಕೀಭವಿಸುವುದಿಲ್ಲವೋ

ನೀರಿನ ವಿಚಾರಕ್ಕೆ ಸಮುದಾಯಗಳ ಮಧ್ಯೆ ಗಲಾಟೆ: ಗದಗಲ್ಲಿ 21 ಮಂದಿಯ ಬಂಧನ

ಗದಗ ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಎಸ್‌ಟಿ ಸಮುದಾಯದ ರೈತನ ಜಮೀನಿನಲ್ಲಿ ಎಸ್‌ಸಿ ವ್ಯಕ್ತಿ ನೀರಿನ ಬಳಕೆ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಎರಡು

ಇರಾನ್‌ ಮೇಲಿನ ದಾಳಿಗಳಿಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೊಣೆ ಎಂದ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್ ವಿರುದ್ಧ ನಡೆದ ಅಮೆರಿಕ-ಇಸ್ರೇಲ್ ದಾಳಿಗಳಿಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೊಣೆ ಎಂದು ಹೇಳುವ ಮೂಲಕ ಇಷ್ಟೆಲ್ಲ ಅನಾಹುತಗಳಿಗೆ ಪೀಟ್‌ ಕಾರಣವೆಂದು ಬೆಟ್ಟು ಮಾಡಿದ್ದಾರೆ. ಅಮೆರಿಕ ಟೆನ್ನೆಸ್ಸೀ ರಾಜ್ಯದ ಮೆಂಫಿಸ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಈ

ಬೆಂಗಳೂರು ನಗರದಲ್ಲಿ ಇ ಖಾತಾ ಮಾಫಿಯಾ, ತೆರಿಗೆ ಪಾವತಿಸಿದರೂ ಮನೆ ಹರಾಜು: ಆರ್‌ ಅಶೋಕ 

ಬೆಂಗಳೂರು ಅಭಿವೃದ್ಧಿ ಮಾಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ʼಬ್ರ್ಯಾಂಡ್‌ ಬೆಂಗಳೂರುʼ ಘೋಷಿಸಿದ್ದರು. ಆದರೆ ಈಗ ಇ-ಖಾತಾ ಹೆಸರಲ್ಲಿ ಪಾಲಿಕೆ ಅಧಿಕಾರಿಗಳು ದಂಧೆ ಮಾಡುತ್ತಿದ್ದಾರೆ. ಇ ಖಾತಾ ಹೆಸರಲ್ಲಿ ಮಾಫಿಯಾ ಸೃಷ್ಟಿಯಾಗಿದೆ. ತೆರಿಗೆ ಪಾವತಿಸಿದರೂ ಮನೆ ಹರಾಜು ಹಾಕಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ ಎಂದು

ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ ನಕಲಿ ಸಹಿ ಬಳಸಿ 16 ಕೋಟಿ ರೂ. ಅಕ್ರಮ

ಬಳ್ಳಾರಿಯ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ರೂ.ಗೂ ಅವ್ಯವಹಾರ ನಡೆದಿದ್ದು, ನಾಲ್ಕು ವರ್ಷಗಳಲ್ಲಿ ಅಧಿಕಾರಿಗಳ ನಕಲಿ ಸಹಿ ಬಳಸಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂದು ಆರೋಪಿಸಿ ಏಳು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆಂತರಿಕ ಆಡಿಟ್ ಮೂಲಕ ಈ ಹಗರಣ

ಮತಾಂತರಗೊಂಡವರಿಗೆ ಎಸ್ಸಿ ಎಸ್ಟಿ ಕಾಯ್ದೆ ರಕ್ಷಣೆಯಿಲ್ಲ: ಸುಪ್ರೀಂ

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು ಮತ್ತು ಕ್ರಿಶ್ಚಿಯನ್ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡರೆ ಆ ವ್ಯಕ್ತಿಗಳು ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕ್ರಿಶ್ಚಿಯನ್ ಧರ್ಮಕ್ಕೆ

ಅರಣ್ಯಭೂಮಿಯನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲ: ಈಶ್ವರ ಖಂಡ್ರೆ

ಮೀಸಲು ಅರಣ್ಯ, ಪರಿಭಾವಿತ ಅರಣ್ಯ, ಸೆಕ್ಷನ್ 4 ಅಧಿಸೂಚನೆಯ ನಂತರ ಯಾವುದೇ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ, ಕಿಶೋರ್ ಕುಮಾರ್ ಪುತ್ತೂರ್

ಅಮೆರಿಕ ಜೊತೆ ಮಾತುಕತೆಗೆ ಇರಾನ್‌ ನಾಯಕ ಮೊಜ್ತಬಾ ಖಮೇನಿ ಅಸ್ತು ?

ಅಮೆರಿಕ ಜೊತೆ ಮಾತುಕತೆ ನಡೆಸಲು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಈ ವರದಿಗೆ ಸಂಬಂಧಿಸಿ ಇರಾನ್‌ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌, ಇರಾನ್