Menu

ಮತಪಟ್ಟಿ ಮರುಪರಿಶೀಲನೆಗೆ ಚುನಾವಣಾ ಆಯೋಗ ಸೂಚಿಸಿರುವುದು ದೇಶದ ಜನರಿಗೆ ಸಿಕ್ಕ ಜಯ: ಸಿಎಂ ಡಿ.ಕೆ.ಶಿವಕುಮಾರ್‌

ಮತಪಟ್ಟಿ ಮರುಪರಿಶೀಲನೆಗೆ ಚುನಾವಣಾ ಆಯೋಗ ಸೂಚಿಸಿರುವುದು ದೇಶದ ಜನರಿಗೆ ಸಿಕ್ಕ ಜಯ: ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ವಿಶೇಷ ಅಭಿಯಾನದ ಮೂಲಕ ಎಸ್​​​​ಐಆರ್‌ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ (ASDDO) ಮತ್ತಿತರ ಮತದಾರರ ಪಟ್ಟಿ ಮರುಪರಿಶೀಲನೆ ಹಾಗೂ ಮತದಾರರ ಪಟ್ಟಿ ಮರುಪರಿಶೀಲಿಸಿ, ಹೆಸರು ಬಿಟ್ಟು ಹೋದ ಅರ್ಹ ಮತದಾರರ ಹೆಸರನ್ನು ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಚುನಾವಣೆ ಅಧಿಕಾರಿಗಳಿಗೆ ಆದೇಶ ಕೊಟ್ಟಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ರಾಜ್ಯ ಚುನಾವಣಾ ಆಯೋಗದ ಎದುರು ಧರಣಿ ನಡೆಸಿದ ಪರಿಣಾಮವಾಗಿ ಕೇಂದ್ರ ಚುನಾವಣೆ ಆಯೋಗವು ರಾತ್ರೋರಾತ್ರಿ ಹೊರಡಿಸಿರುವ ಈ ಆದೇಶವನ್ನು ಸ್ವಾಗತಿಸುತ್ತೇವೆ ಎಂದರು. ಇದು ನಮ್ಮ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಗೆಲುವು ಮಾತ್ರವಲ್ಲ, ಕರ್ನಾಟಕದ ಮತ್ತು ಇಡೀ ದೇಶದ ಮತದಾರರ ಗೆಲುವು ಎಂದು ಬಣ್ಣಿಸಿದರು.

ಚುನಾವಣಾ ಆಯೋಗದ ಹೊಸ ಮಾರ್ಗಸೂಚಿಗಳು
ಸಾಮೂಹಿಕವಾಗಿ ಹೆಸರು ತೆಗೆದು ಹಾಕಿರುವ ದೂರುಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಆಯೋಗ ಆದೇಶ ನೀಡಿದೆ. ಫಾರ್ಮ್-7ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡಬಾರದು ಎಂದು ತಿಳಿಸಿದ್ದು, ಮೊದಲ ಬಾರಿಗೆ ಮತದಾರರಾಗುವ ಯುವಕರ ಹೆಸರು ಸೇರ್ಪಡೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಲಾಗಿದೆ. ಬಿಎಲ್​ಒ (BLO) ಏನು ಮಾಡಬೇಕು, ಫಾರ್ಮ್-6 ಮತ್ತು ಫಾರ್ಮ್-7 ಹೇಗೆ ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕೆಂದು ಸೂಚಿಸಲಾಗಿದೆ ಎಂದು ಸಿಎಂ ವಿವರಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ
ಸಮಾಜದ ದುರ್ಬಲ ವರ್ಗಗಳ ಮತಗಳನ್ನು ತೆಗೆದು ಹಾಕಲು ಬಿಜೆಪಿಯವರು ಅರ್ಜಿ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ ಅವರು, ದಲಿತ ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆಸುವುದೇ ಅವರ ಉದ್ದೇಶ ಎಂದು ಆರೋಪಿಸಿದರು. ಬಿಜೆಪಿಯವರು ಮತಗಳನ್ನು ತೆಗೆದು ಹಾಕುವ ಕ್ರಿಮಿನಲ್ ಕೆಲಸಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತವನ್ನು ಹಾಗೂ ಸಂವಿಧಾನಾತ್ಮಕ ಸಂಸ್ಥೆಯನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

#DKShivakumar #ElectionCommission #VoterList #KarnatakaCM #Congress #BJP #VoterRights #UdayakalaNews #KarnatakaPolitics

Related Posts

Leave a Reply

Your email address will not be published. Required fields are marked *