Breaking
ಪೊಲೀಸ್ ಠಾಣೆಯೊಳಗೇ ನೇಣಿಗೆ ಶರಣಾದ ಶಿವಮೊಗ್ಗ ಕಾನ್‌ಸ್ಟೆಬಲ್
ಡೆತ್ ನೋಟ್ ಬರೆದಿಟ್ಟು ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೆಡ್ ಕಾನ್‌ಸ್ಟೇಬಲ್ ಮೊಹಮದ್ ಝಕ್ರಿಯ (55) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಕೆಲವು ದಿನದಿಂದ ಮೊಹಮದ್ ಝಕ್ರಿಯ ರಜೆ ತೆಗೆದುಕೊಂಡಿದ್ದರು. ಈಗ ಮೂರು ದಿನದ ಹಿಂದಷ್ಟೆ ಡ್ಯೂಟಿಗೆ ಬಂದಿದ್ದರು. ಬುಧವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ಠಾಣೆಗೆ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ಹಾಸ್ಟೆಲ್ ಕೊಠಡಿಯಲ್ಲಿಯೇ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ
ವೈದ್ಯಕೀಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್) ಹಾಸ್ಟೆಲ್ ಕೊಠಡಿಯಲ್ಲಿ ನಡೆದಿದೆ. ಮೆಡಿಕಲ್ ಕಾಲೇಜ್ ನಲ್ಲಿ ಎಂಡಿ ರೇಡಿಯಾಲಜಿ ಅಭ್ಯಾಸ ಮಾಡುತ್ತಿದ್ದ ಮಧುಗಿರಿ ಮೂಲದ ಸಂದೀಪ್ ರಾಜ್ (28) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ .
ಕೊಟ್ಟ ಮಾತಿನಂತೆ ನಡೆದಾಗ ಮಾತ್ರ ನಾಯಕರೆನಿಸಿಕೊಳ್ಳುತ್ತೇವೆ: ಡಿಕೆ ಶಿವಕುಮಾರ್
ನಮಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ಪಾಪ, ಬೊಮ್ಮಾಯಿ ಅವರ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಿತು. ಆದರೆ ಇವತ್ತಿನವರೆಗೂ ಆ ಹಣ ಬಿಡುಗಡೆಯಾಗಿಲ್ಲ. ಬೊಮ್ಮಾಯಿ , ನಿರ್ಮಲಾ
ಶಾಸನ ಕರ್ತರ ಆಯ್ಕೆ ಮತದಾರರ ವಿವೇಕದ ಪ್ರತಿಬಿಂಬ
ಎಲ್ಲಿಯವರೆಗೂ ಮತದಾರ ತಾನು ನೀಡುವ ಮತದ ಮೌಲ್ಯದ ಸದಾಶಯಗಳ ಬಗ್ಗೆ ಆಲೋಚಿಸುವುದಿಲ್ಲವೋ ಅಲ್ಲಿಯವರೆಗೂ ಕೆಟ್ಟ ಮತ್ತು ದುಷ್ಟ ಪರಂಪರೆಯುಳ್ಳ ವ್ಯಕ್ತಿಗಳು ಶಾಸನಸಭೆಯನ್ನು ಪ್ರವೇಶಿಸುವುದನ್ನು ತಪ್ಪಿಸಲೂ ಸಾಧ್ಯವಾಗುವುದಿಲ್ಲ! ಶಾಸನಕರ್ತರೇ ದುಶ್ಯಾಸನರಾದರೆ? ಕಾನೂನು ರಚನೆಕಾರರೇ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರೇ? ಇದು ಬೇಲಿಯೇ ಎದ್ದು
ರಷ್ಯಾದ ತೈಲ ಹಡಗು ವಶಕ್ಕೆ ಪಡೆದ ಅಮೆರಿಕ!
ಅಟ್ಲಾಂಟಿಕ್ ಮಹಾಸಾಗರದಲ್ಲಿ ರಷ್ಯಾದ ಧ್ವಜ ಹೊಂದಿದ್ದ ತೈಲ ಹಡಗನ್ನು ಅಮೆರಿಕದ ಸೇನೆ ಸಿನಿಮಯ ಶೈಲಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದೆ. ಉತ್ತರ ಸಮುದ್ರದಲ್ಲಿ ಕಳೆದೆರಡು ವಾರಗಳಿಂದ ಅನುಮಾನಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಹಡಗಿನ ಚಲನವಲನಗಳ ಮೇಲೆ ಕಣ್ಗಾವಲು ಇರಿಸಿದ್ದ ಅಮೆರಿಕ ಗುರುವಾರ ಹಡಗನ್ನು ವಶಕ್ಕೆ
ಬೆಳಗಾವಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ: 3 ಸಾವು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಕನಿಷ್ಠ 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ. ಅಕ್ಷಯ ತೋಪಡೆ (45), ದೀಪಕ್ ಮುನವಳ್ಳಿ (31),
ಅಕ್ಕ-ಪಕ್ಕದ ಮನೆಯವರ ಜಗಳ 6 ವರ್ಷದ ಬಾಲಕಿ ಕೊಲೆಯಲ್ಲಿ ಅಂತ್ಯ
ಕ್ಷುಲಕ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆಯಲ್ಲಿ ತಾಯಿಗೆ ಬುದ್ದಿ ಕಲಿಸಲು ಆಕೆಯ 6 ವರ್ಷದ ಮಗಳನ್ನು ಬರ್ಬರವಾಗಿ ಕೊಂದು ಶವವನ್ನು ಚರಂಡಿಗೆ ಎಸೆದ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್‌ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಮಂಗಳವಾರ ನೆರೆಹೊರೆಯವರ ನಡುವಿನ ದ್ವೇಷಕ್ಕೆ ಪಶ್ಚಿಮ ಬಂಗಾಳ
ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ದರಾಮಯ್ಯ
ಹಾವೇರಿ: ರಾಜಕಾರಣದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದು, ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ. ನನ್ನ ಆಡಳಿತ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು . ಅವರು ಇಂದು ಹಾವೇರಿಯ ಕೊಳ್ಳಿ ಪಾಲಿಟೇಕ್ನಿಕ್ ಆವರಣದ
ಅರಸು ಆಡಳಿತಕ್ಕೆ ಸಿದ್ದರಾಮಯ್ಯ ಹೋಲಿಕೆ ಬೇಡ: ಯಡಿಯೂರಪ್ಪ ಕಿಡಿ
ಬೆಂಗಳೂರು: ದೇವರಾಜ ಅರಸು ಅವರ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡುವುದು ಬೇಡ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಬುಧವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು
ರಾಷ್ಟ್ರೀಯ ನಾಟಕೋತ್ಸವ ಭಿತ್ತಿಪತ್ರ ಬಿಡುಗಡೆಗೊಳಿಸಿದ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್
ಮೈಸೂರು: ಮೈಸೂರು ರಂಗಾಯಣದ ಪ್ರತಿಷ್ಠಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಬಾಬಾ ಸಾಹೇಬ್- ಸಮತೆಡೆಗೆ ನಡಿಗೆ ಆಶಯದಲ್ಲಿ ಜ. 11ರಿಂದ 18ರವರೆಗೆ ನಡೆಸಲಾಗುವುದು. ನಾಟಕ, ಸಂಗೀತ, ಜಾನಪದ, ಕಲೆ, ಚಲನಚಿತ್ರಗಳಲ್ಲಿ ಅಂಬೇಡ್ಕರರ ಸಮಗ್ರ ವ್ಯಕ್ತಿತ್ವ ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್




