ಜಿಲ್ಲಾ ಸುದ್ದಿ
ಸಾರಿಗೆ ಇಲಾಖೆ ಸುಭದ್ರ, ಬಸ್ ದರ ಹೆಚ್ಚಳವಿಲ್ಲ: ರಾಮಲಿಂಗಾರೆಡ್ಡಿ
ಸಾರಿಗೆ ಇಲಾಖೆಯಲ್ಲಿ ಡಿಸೇಲ್ ಕೊರತೆ ಇಲ್ಲ. ನಾವು ಬಸ್ ದರ ಹೆಚ್ಚಳ ಮಾಡಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಬಸ್ ಕೂಡಾ ಖರೀದಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ 7 ಸಾವಿರದಷ್ಟು ಬಸ್ಗಳನ್ನು ಖರೀದಿಸಿದ್ದೇವೆ. ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ಯಾರಂಟಿಯಿಂದ ತೊಂದರೆಯಾಗಿದ್ದು, ನಿಜ. ಹೆಚ್ಚಿನ ಬಸ್ ಓಡಿಸಿ ಸರಿಪಡಿಸಲಾಗುವುದು ಎಂದು ಹೇಳಿದರು. ಬಿಜೆಪಿಗರು ಸಾರಿಗೆ ಇಲಾಖೆ
ಮೋದಿ ಸರ್ಕಾರ ಸಾಲ ಮಾಡಿಲ್ಲವೇ: ಡಿಕೆ ಶಿವಕುಮಾರ್
ನಾವು ಸಾಲ ಮಾಡಿದ್ದೀವಿ ಅಂದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಪಡೆದಿಲ್ಲವೇ? ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗಿಲ್ಲ. ಈಗ ನಾವು ಜನರಿಗೆ ಹಣ ಕೊಟ್ಟಿರುವುದಕ್ಕೆ ಅವರ ಮೇಲೆ ಹೊರೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಕೂಡ ನಮ್ಮ ರೀತಿ
ಬಳ್ಳಾರಿಯ ನವ ವಿವಾಹಿತ ಜೋಡಿ ಅಪಘಾತಕ್ಕೆ ಬಲಿ
ಮದುವೆಯಾಗಿ ಒಂದು ತಿಂಗಳಷ್ಟೇ ಆಗಿದ್ದ ಬಳ್ಳಾರಿಯ ನವಜೋಡಿಯೊಂದು ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಬಳ್ಳಾರಿ ತಾಲೂಕಿನ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಮತ್ತು ಬೆಂಗಳೂರಿನ ಪವನ್ (29) ಕಳೆದ ತಿಂಗಳು ಮದುವೆಯಾಗಿದ್ದರು.
ಕುಕ್‌ನ ಕೊಲೆಗೈದು ಶವ ಕಾರಲ್ಲಿಟ್ಟುಕೊಂಡು ಸುತ್ತಾಡಿದ ಕೆಫೆ ಮಾಲೀಕ ಅರೆಸ್ಟ್
ಶಿವಮೊಗ್ಗದ ಸಾಗರ ಪಟ್ಟಣದ ಕೆಫೆಯೊಂದರ ಮಾಲೀಕ ಇಮ್ರಾನ್ ಎಂಬಾತ ಕುಕ್ ಟಿಂಕೂ ಶರ್ಮಾ ಎಂಬ ಯುವಕನನ್ನು ಸ್ನೂಕರ್ ಸ್ಟಿಕ್‌ನಿಂದ ಕೊಲೆ ಮಾಡಿ ಶವವನ್ನುಕಾರಿನಲ್ಲಿ ಇಟ್ಟುಕೊಂಡು ಇಡೀ ದಿನ ಊರು ಸುತ್ತಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹಣಕಾಸಿನ ಸಣ್ಣ ವಿವಾದದಿಂದ ಆರಂಭವಾದ
ದಾರಿಗಾಗಿ ಜಗಳ: ಮಹಿಳೆಯ ಬಟ್ಟೆ ಕಳಚಿ ಹಲ್ಲೆಗೆ ಯತ್ನ
ಹಾಸನದ ಬೇಲೂರು ತಾಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ
ಬಿಜೆಪಿ, ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಇಲ್ಲವೇ: ಡಿಕೆ ಶಿವಕುಮಾರ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿವಶಂಕರಪ್ಪ ಅವರು ಹಾಗೂ ಅವರ ಮಗ ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ಇದು ಎಲ್ಲಾ ಪಕ್ಷಗಳಲ್ಲಿ ಇದೆ. ಯಡಿಯೂರಪ್ಪ, ಅವರ ಇಬ್ಬರು ಮಕ್ಕಳು ರಾಜಕೀಯದಲ್ಲಿ ಇಲ್ಲವೇ, ಜನತಾ ದಳದಲ್ಲಿ ಒಂದೇ ಕುಟುಂಬದ ಐದಾರು ಜನ ಇಲ್ಲವೇ
ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ: ಗದಗ ಯುವಕನ ಕೊಲೆಗೈದ ಆರೋಪಿಗಳು ಅರೆಸ್ಟ್
ಗದಗದ ಚಂದ್ರು ಕುರಿ ಎಂಬ ಯುವಕನ ಮೃತದೇಹ ಪತ್ತೆ ಪ್ರಕರಣದ ತನಿಕೆ ನಡೆಸಿರುವ ಪೊಲೀಸರು ಇದೊಂದು ಕೊಲೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ವಿವಾಹಿತ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಆತನ ಕೊಲೆಗೆ ಕಾರಣ ಎಂಬ ವಿಚಾರವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೊಲೆ ಆರೋಪಿಗಳಾದ
ಅಭಿವೃದ್ಧಿ ಮಾಡದೆ ರಾಜ್ಯವನ್ನು ಲೂಟಿಗೈದ ಬಿಜೆಪಿಯ ಸತ್ಯವನ್ನು ಜನ ಅರಿತಿದ್ದಾರೆ: ಸಿಎಂ ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ
ಅಪಪ್ರಚಾರಕ್ಕೆ ನೊಂದು ಹೊಳಲ್ಕೆರೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಚಿತ್ರದುರ್ಗ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಾಧ್ಯಾಪಕರೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ನಡೆಸಿದ್ದಕ್ಕೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನ ಮನೆಯಲ್ಲಿ
ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವುದಿಲ್ಲ: ಸಚಿವ ಸಂತೋಷ್ ಲಾಡ್
ಯಾವ ಒಬ್ಬ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವುದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ನಾನು ಮಾತನಾಡುವೆ. ಒಂದು ವೇಳೆ ಅನ್ಯಾಯವಾದರೆ ನಿಮ್ಮನ್ನು ಕರೆದುಕೊಂಡು ನೇರವಾಗಿ ಸಿಎಂ ಅವರ ಬಳಿಗೆ ಹೋಗುತ್ತೇನೆ ಮತ್ತು ನಿಮ್ಮ ಜೊತೆಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ. ಆದ್ದರಿಂದ ನಿರಾತಂಕವಾಗಿರಿ ಎಂದು




