Menu

ದೇವದುರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ಕುಸಿದು ಸಾವು

ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೩೭ ವರ್ಷದ ಪೊಲೀಸ್ ಕಾನ್ಸ್‌ಸ್ಟೇಬಲ್ ರೇಣುಕಾ ರಾಜ್ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ.

ಅವರು ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದು, ಕರ್ತವ್ಯದಲ್ಲಿದ್ದಾಗ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ಅವರನ್ನು ಪೊಲೀಸರು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆರೋಗ್ಯ ಕೇಂದ್ರದ ಕುರ್ಚಿಯಲ್ಲಿ ಕುಳಿದಿದ್ದ ರೇಣುಕಾ ರಾಜ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಆಸ್ಪತ್ರೆ ಚೇರ್ ಮೇಲೆ ಕುಳಿತಿದ್ದ ರೇಣುಕಾ ರಾಜ್‌ ಅವರಿಗೆ ಎದೆನೋವು ಹೆಚ್ಚಾಗಿ 30 ಸೆಕೆಂಡ್‌ನಲ್ಲಿ ಪ್ರಾಣಹೋಗಿದೆ. ರೇಣುಕಾ ರಾಜ್ ಬಾಗಲಕೋಟೆಯ ಇಳಕಲ್ ತಾಲೂಕಿನ ಆಮದಿಹಾಳ ಗ್ರಾಮದವರು. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು.

Related Posts

Leave a Reply

Your email address will not be published. Required fields are marked *