Friday, September 18, 2026
Menu

ಕೊಪ್ಪಳದಲ್ಲಿ ವೈಭವದ ಹುಲಿಗೆಮ್ಮ ದೇವಿ ರಥೋತ್ಸವ

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹುಲಿಗೆಮ್ಮ ದೇವಿ ರಥೋತ್ಸವವವು ಮೇ 11ರಂದು ಸಡಗರ, ಸಂಭ್ರಮದಿಂದ ನೆರವೇರಿತು. ಕೊಪ್ಪಳ ತಾಲೂಕಿನ ಸುಕ್ಷೇತ್ರ ಹುಲಿಗಿ ಗ್ರಾಮದಲ್ಲಿ ಗೋಧೂಳಿ ಸಮಯ ಸಂಜೆ ಸರಿಯಾಗಿ 5.30ಕ್ಕೆ ಆರಂಭಗೊಂಡ ರಥೋತ್ಸವದ ಚಾಲನಾ ಸಮಾರಂಭಕ್ಕೆ ಕೊಪ್ಪಳ ಸೇರಿದಂತೆ ಗಡಿ ಜಿಲ್ಲೆ ವಿಜಯನಗರ, ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ಧ ಲಕ್ಷಾಂತರ ಭಕ್ತರು ಸಾಕ್ಷಿಯಾಗಿ ಜಯಘೋಷ ಮೊಳಗಿಸಿದರು. ಜಗನ್ಮಾತೆ ಹುಲಿಗೆಮ್ಮ‌ದೇವಿ ಮೂರ್ತಿಯೊಂದಿಗೆ ಸಾಗಿದ ತೇರು ಪಾದಗಟ್ಟೆ ತಲುಪಿ

ಅಮ್ಲಾಪುರ ಮದರಸಾದಲ್ಲಿ ಹೊರ ರಾಜ್ಯದ ಮಕ್ಕಳಿಗೆ ಹಿಂಸೆ

ತುಮಕೂರು ನಗರ ಹೊರವಲಯದ ಅಮ್ಲಾಪುರದ ಮದರಸಾದಲ್ಲಿ ವ್ಯಾಸಂಗಕ್ಕೆ ಬಂದಿದ್ದ ಹೊರ ರಾಜ್ಯದ ೨೪ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ದೈಹಿಕ ಹಿಂಸೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ರೈಲ್ವೆ ಮಕ್ಕಳ ಸಹಾಯವಾಣಿ ಮೇಲ್ವೀಚಾರಕ ನಾಗಭೂಷಣ್ ಗ್ರಾಮಾಂತರ ಠಾಣೆಗೆ ಮೇ ೧೦ರಂದು ನೀಡಿದ

ಸಂಪುಟ ಬದಲಾವಣೆ: ಹೈಕಮಾಂಡ್ ಉತ್ತರ ನೀಡಬೇಕಿದೆ ಎಂದ ಶಾಸಕ ಕೋನರಡ್ಡಿ

ಮೇ 15 ರ ನಂತರ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಹೈಕಮಾಂಡ್ ಹೇಳಬೇಕಿದೆ. ಕೇರಳ ಮತ್ತು ತಮಿಳುನಾಡಿನ ಸ್ಥಿತಿಗತಿ ನೋಡಿ ಹೈಕಮಾಂಡ್ ಸಿಎಂ ಅವರನ್ನು ಕರೆಯಬೇಕು. ಕರೆದು ಅವರ ಜೊತೆ ಹೈಕಮಾಂಡ್ ಮಾತಾಡಬೇಕು ಎಂದು ನವಲಗುಂದ ಶಾಸಕ ಎಚ್.ಕೋನರೆಡ್ಡಿ ಹೇಳಿದರು ಸಿಎಂ 

ಶೃಂಗೇರಿ ಮರು ಮತ ಎಣಿಕೆ ರದ್ದುಗೊಳಿಸಿದ ಸುಪ್ರೀಂ: ಕಾಂಗ್ರೆಸ್‌ನ ರಾಜೇಗೌಡ ಶಾಸಕರಾಗಿ ಮುಂದುವರಿಕೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ. ಹೈಕೋರ್ಟ್ ಸೂಚನೆಯಂತೆ ಇತ್ತೀಚೆಗೆ ನಡೆದಿದ್ದ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿದ್ದರು. ಈಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.

ನಾಗಮಂಗಲ ಕೆರೆಯಲ್ಲಿ ಈಜಲು ಹೋಗಿ ಯುವಕರಿಬ್ಬರ ಸಾವು

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಯರಗನಹಳ್ಳಿ ಬಳಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಕಾಶ್ ಗೌಡ (24) ಮತ್ತು ಯಶಸ್ (23) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಯರಗನಹಳ್ಳಿ ಕೆರೆಯಲ್ಲಿ ಈಜಲು ಹೋದಾಗ ಈ ದುರಂತ

ಪ್ರೀತಿಸಿದವನ ಮದುವೆಯಾಗಲು ಕುಟುಂಬ ವಿರೋಧ: ಕುಂದಗೋಳದಲ್ಲಿ ಯುವತಿ ಆತ್ಮಹತ್ಯೆ

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರೀತಿಸಿದವನ ಮದುವೆಯಾಗಲು ಕುಟುಂಬಸ್ಥರು ವಿರೋಧಿಸಿದ್ದಕ್ಕೆ ನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶ್ವೇತಾ ಕೊಟೆನ್ನವರ್ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಹಲವು ವರ್ಷಗಳಿಂದ ಹುಬ್ಬಳ್ಳಿ ತಾಲೂಕಿನ ಕೆರೆಸೂರ ಗ್ರಾಮದ ನಾಗರಾಜ್

ಅಂಜನಾದ್ರಿ ಹನುಮಗೆ ತಾಮ್ರ ಲೇಪಿತ 2.50 ಕೋಟಿ ರೂ.ಗಳ ಆಭರಣ, 28 ಗ್ರಾಂ ಮಾತ್ರ ಚಿನ್ನ: ಉದ್ಯಮಿಗೆ ಜಿಲ್ಲಾಡಳಿತ ನೋಟಿಸ್‌

ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ರೂ. ಮೌಲ್ಯದ್ದು ಎನ್ನಲಾದ ಆಭರಣದಲ್ಲಿ 28 ಗ್ರಾಂ ಮಾತ್ರ ಚಿನ್ನವಿದ್ದು, ತಾಮ್ರದ ಲೇಪನ ಮಾಡಲಾಗಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ಆಭರಣಗಳ ಖಚಿತತೆ

ಯುವತಿ ವಿಚಾರಕ್ಕೆ ಕಿರುಕುಳ: ಆಡಿಯೊ ರೆಕಾರ್ಡ್‌ ಮಾಡಿಟ್ಟು ಹಾಸನ ಯುವಕ ಸುಸೈಡ್‌

ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಬಳಿ ನಡೆದಿದೆ. ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕ. ಗ್ರಾಮದ ಶಂಕರ, ದರ್ಶನ್,

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಪಲ್ಟಿಯಾಗಿ ತಂದೆ, ಮಗ ಸಾವು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಂಡ್ಯ ಕೋಣನಹಳ್ಳಿ ಬಳಿಯ ಸೇತುವೆಯ ಮೇಲೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರಣ್(40) ಮತ್ತು ಮಗ

ಬೀದರ್‌ನಲ್ಲಿ ಮನೆಯೊಳಗೆ ತೊಟ್ಟಿಲಲ್ಲಿದ್ದ ಮಗುವನ್ನು ಕಚ್ಚಿ ಸಾಯಿಸಿದ ಬೀದಿ ನಾಯಿ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದಾಬಲಗುಂಡಿ ಗ್ರಾಮದಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿದ್ದರಿಂದ ನಾಲ್ಕು ತಿಂಗಳ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಮನೆಯೊಳಗೆ ಮಗು ಮಲಗಿದ್ದ ವೇಳೆ ಪೋಷಕರು ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದಾಗ ಬೀದಿ ನಾಯಿ ನುಗ್ಗಿ ತೊಟ್ಟಿಲಿನಲ್ಲಿ ಮಲಗಿದ್ದ