Menu

ನಾರಾಯಣಪುರ ಡ್ಯಾಂನಿಂದ ಕೃಷ್ಣೆಗೆ 1.40 ಲಕ್ಷ ಕ್ಯೂಸೆಕ್‌ ನೀರು

ನಾರಾಯಣಪುರ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ಕೃಷಾ ನದಿ ತುಂಬಿ ಹರಿಯುತ್ತಿದೆ. ದೇವದುರ್ಗದ ಹೂವಿನಹಡಗಲಿ ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆಯಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೊಯ್ನಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಒಳಹರಿವು ಇದ್ದು, ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಡ್ಯಾಮ್‌ನಿಂದ ನೀರು ಬಿಡುಗಡೆ ಮಾಡಿರುವುದರಿಂದ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹಡಗಲಿ ಸೇತುವೆಗಳು ಮುಳುಗಡೆಯಾಗುತ್ತಿವೆ. ಕಾಡ್ಲೂರಿನ ಉಪೇಂದ್ರ ಕರಾರ್ಚಿತ ಪ್ರಾಣದೇವರ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ.

ತಮಿಳುನಾಡಿಗೆ ಮಂಗಳವಾರ ಮೂರು ಸಾವಿರ ಕ್ಯೂಸೆಕ್‌ ನೀರು ಬಿಡುತ್ತಿರುವುದಾಗಿ ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ನೂರಡಿ ದಾಟಿದೆ. ಮೂರು ದಿನಗಳಲ್ಲಿ ನೀರಿನ ಮಟ್ಟ ಎಂಟು ಅಡಿ ಏರಿಕೆಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿ ಮೂಲಕ ಈಗಾಗಲೇ ತಮಿಳುನಾಡಿಗೆ ಬಿಡಲಾಗಿತ್ತು.

49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 23.079 ಟಿಎಂಸಿ ಅಡಿ ನೀರು ಸಂಗ್ರಹವಿಎ, ಅದರಲ್ಲಿ 14.700 ನೀರು ಕೃಷಿ ಬಳಕೆಗೆ ಸಿಕ್ಕಿದರೆ, ಉಳಿಕೆ 8.379 ಟಿಎಂಸಿಯಲ್ಲಿ 4,400 ಟಿಎಂಸಿ ದ ಡೆಡ್‌ಸ್ಟೋರೇಜ್. ಉಳಿದ 3.979 ಟಿಎಂಸಿ ಕುಡಿಯುವ ನೀರಿಗೆ ಬಳಸಲು ಸಿಗುತ್ತದೆ.

Related Posts

Leave a Reply

Your email address will not be published. Required fields are marked *