ಜಿಲ್ಲಾ ಸುದ್ದಿ
ಆಟವಾಡುತ್ತ ಕಾರು ಡಿಕ್ಕಿಯೊಳಗೆ ಹೋದ ಮಗು ಉಸಿರುಗಟ್ಟಿ ಸಾವು
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ ಸಿಲುಕಿ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ಮಗು ಬಸವಪ್ರಭು ಕೊಟ್ಟುರೇಶ್ವರ ಅವರ ಮಗ. ಮಗು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಆಡುತ್ತಾ ಕಾರಿನ ಡಿಕ್ಕಿಯೊಳಗೆ ಸೇರಿಕೊಂಡಿದ್ದಾನೆ. ಡಿಕ್ಕಿ ಲಾಕ್ ಆಗಿ ಉಸಿರುಗಟ್ಟಿ ಅಸು ನೀಗಿದೆ. ಸ್ವಲ್ಪ ಹೊತ್ತಿನ ನಂತರ ಕುಟುಂಬಸ್ಥರು ಮಗುವಿಗಾಗಿ ಹುಡುಕಾಟ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಮಗು ಸಿಲುಕಿರುವುದು
“ಎಐ ಸಹಾನುಭೂತಿ, ಸಂದರ್ಭೋಚಿತ ನಿರ್ಧಾರ, ಅಂತಃಪ್ರಜ್ಞೆ, ಸೃಜನಶೀಲತೆ ನಕಲು ಮಾಡಲು ಸಾಧ್ಯವಿಲ್ಲ”
ಪುನರಾವರ್ತಿತ ಮತ್ತು ದತ್ತಾಂಶ ಆಧಾರಿತ ಕೆಲಸಗಳನ್ನು ಮಾಡುವಲ್ಲಿ ಎಐ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ಆದರೆ ಇದಕ್ಕೆ ಮಾನವ ಸಹಜವಾದ ಸಹಾನುಭೂತಿ,ಸಂದರ್ಭೋಚಿತ ನಿರ್ಧಾರ ಸಾಮರ್ಥ್ಯ, ಆಳವಾದ ಅಂತಃಪ್ರಜ್ಞೆ ಮತ್ತು ಸೃಜನಶೀಲತೆಯನ್ನು ನಕಲು ಮಾಡಲು ಸಾಧ್ಯವಿಲ್ಲ, ಇವು ಕೇವಲ ಸುಸಂಸ್ಕೃತ ಮಾನವನ ಮನಸ್ಸಿನಿಂದ ಮಾತ್ರ
ಸಾಲ ವಾಪಸ್ ಬರದೆ ಸಂಕಷ್ಟ, ನ್ಯಾಯ ಕೇಳಿದ್ರೆ ಪೊಲೀಸರಿಂದ ಬೆದರಿಕೆ: ಡಿವೈಎಸ್‌ಪಿ, ಪಿಎಸ್‌ಐ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ
ಕೊಟ್ಟ ಸಾಲದ ಹಣ ವಾಪಸ್ ಬಾರದೆ ಸಂಕಷ್ಟ ಒಂದೆಡೆಯಾದರೆ, ಅತ್ತ ನ್ಯಾಯ ಕೇಳಲು ಹೋದಾಗ ಪೊಲೀಸರಿಂದಲೇ ಬೆದರಿಕೆ ಎದುರಿಸಿ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ನಲ್ಲಿ ಡಿವೈಎಸ್‌ಪಿ ಹಾಗೂ ಪಿಎಸ್‌ಐ ಹೆಸರನ್ನುಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.
ತಮ್ಮ ಅಪಘಾತಕ್ಕೆ ಬಲಿಯಾದ ಸುದ್ದಿ ತಿಳಿದು ಅಕ್ಕ ಹೃದಯಾಘಾತದಿಂದ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ಸೋದರಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬರುತ್ತಿದ್ದಾಗ ಬೈಕ್ ಅಪಘಾತದಲ್ಲಿ ಸಹೋದರ ಮೃತಪಟ್ಟ ಸುದ್ದಿ ಕೇಳಿದ ಅಕ್ಕ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಗದಗದ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ
ಯಾರೇ ಸಿಎಂ ಅದರೂ ರಾಜ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ: ವಿಜಯೇಂದ್ರ
ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಾರೆ. ಆದರೆ ಯಾರೇ ಸಿಎಂ ಆದರೂ ರಾಜ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ
ಸಕಲೇಶಪುರದ ಯುವಕ ಶಿವಮೊಗ್ಗದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ
ಹಾಸನ ಜಿಲ್ಲೆಯ ಸಕಲೇಶಪುರದ ಯುವಕನೊಬ್ಬ ಶಿವಮೊಗ್ಗ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಕೇತ್ (19) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಸಂಕೇತ್ ಐಟಿಐ ವ್ಯಾಸಂಗವನ್ನು ಮುಗಿಸಿ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಇದ್ದ. ತಂದೆ ಕೆಲಸಕ್ಕೆ
ವೈದ್ಯ ದಂಪತಿ ಮನೆಯಲ್ಲಿ ಚಿನ್ನ, ಹಣ ಕಳವು: ಕೇರ್‌ಟೇಕರ್ ಸೇರಿ ಇಬ್ಬರ ಬಂಧನ
ಬೆಳಗಾವಿ ನಗರದ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರ್ ಟೇಕರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಬಂಧಿತ ಆರೋಪಿಗಳು. ಪೊಲೀಸರು
ಚಡಚಣದಲ್ಲಿ ಗುಂಡಿಕ್ಕಿ ಆರು ಮಂದಿಯ ಹತ್ಯೆ ಪ್ರಕರಣದ 11 ಆರೋಪಿಗಳು ಸೆರೆ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದ ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ನಡೆದ ಆರು ಮಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಉತ್ತರ ವಲಯದ ಐಜಿಪಿ ಸಂದೀಪ್‌ಪಾಟಿಲ್ ಈ ವಿಷಯ
ಮಾಜಿ ಸಚಿವ ವೆಂಕಟರಮಣ್ಣಪ್ಪ ತಳಸಮುದಾಯದವರ ಬಗ್ಗೆ ಕಾಳಜಿ ಹೊಂದಿದ್ದ ನಾಯಕ: ಸಿಎಂ ಸಿದ್ದರಾಮಯ್ಯ
ಅಹಿಂದ ವರ್ಗದ ಧ್ವನಿಯಾಗಿದ್ದ ಹೆಚ್. ವೆಂಕಟರಮಣ್ಣಪ್ಪ ಅವರು ಸಮಾಜದ ತಳಸಮುದಾಯದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮಾಜಿ ಶಾಸಕರಾದ ದಿವಂಗತ ಹೆಚ್. ವೆಂಕಟರಮಣಪ್ಪ ಅವರ ಅಂತಿಮ ದರ್ಶನ
ಬ್ರಿಮ್ಸ್‌ನಲ್ಲಿ ಮಹಿಳಾ ಶವಗಳ ಬೆತ್ತಲೆ ಪೋಟೊ ಕ್ಲಿಕ್ಕಿಸುತ್ತಿದ್ದ ಅಟೆಂಡರ್ ಅರೆಸ್ಟ್
ಬೀದರ್‌ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್‌ಮಾರ್ಟ್‌ಮ್ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಅಟೆಂಡರ್ ಒಬ್ಬನನ್ನು ಬಂಧಿಸಲಾಗಿದೆ. ಆರೋಪಿ ಮುನೀರ್ ಅಹ್ಮದ್ ಬಂಧಿತ, ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ




