Friday, September 18, 2026
Menu

ಚಡಚಣದಲ್ಲಿ ಗುಂಡಿನ ಮೊರೆತ: ಆಸ್ತಿ ವಿವಾದದಲ್ಲಿ ಆರು ಜನರ ಗುಂಡಿಕ್ಕಿ ಹತ್ಯೆ

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿಗೆ ಸಂಬಂಧಿಸಿದ ಕುಟುಂಬ ಕಲಹ ವಿಕೋಪಕ್ಕೆ ಹೋಗಿ ಆರು ಜನರನ್ನು ಕೊಚ್ಚಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ, ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಹತ್ಯೆ ಮಾಡಲಾಗಿದೆ. ಜಮಿನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ‌ ನಿರಾಳೆ

ಚಿತ್ರದುರ್ಗದಲ್ಲಿ ಕಾರು ಟೈರ್‌ ಸ್ಫೋಟಗೊಂಡು ಐವರ ಸಾವು

ಚಿತ್ರದುರ್ಗದಲ್ಲಿ ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿ ಈ ದುರಂತ ಸಂಭವಿಸಿದೆ. ಚಳ್ಳಕೆರೆಯ ಛಾಯಾಗ್ರಾಹಕ ರಾಘವೇಂದ್ರ, ರುದ್ರೇಶ್, ಸೋಮ, ಮಲ್ಲಿಕಾರ್ಜುನ, ಪ್ರಮೋದ್‌ ಮೃತಪಟ್ಟವರು.

ಸಿಗಂದೂರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಶಿವಮೊಗ್ಗದ ಸಾಗರದಲ್ಲಿರುವ ಸಿಗಂದೂರು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನದಿ ಸೇತುವೆ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ಉಮೇಶ್ (35) ಮುಳುಗಿ ಮೃತಪಟ್ಟವರು. ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕು ಗಲಗಲಿ ಗ್ರಾಮದ ಉಮೇಶ್ ಕುಟುಂಬಸ್ಥರು

ಎಸ್‌ಡಿಆರ್‌ಎಫ್‌ ಸಿಪಿಐ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್‌ ಸಿಪಿಐ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಪಿಐ ಶ್ರೀಶೈಲ ಚೌಗಲೆ (37) ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿಯ ಚನ್ನಮ್ಮ ನಗರದ ಮನೆಯಲ್ಲಿ ರೂಂ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಚೌಗಲೆ ಪತ್ನಿ ಘಟನೆ ಸಂಬಂಧ ಎಸ್‌ಡಿಆರ್‌ಎಫ್‌ ಸಿಬ್ಬಂದಿಗೆ ಮಾಹಿತಿ

ಮೈಸೂರಿನಲ್ಲಿ ಸಿಡಿಲು ಬಡಿದು ಟೆಕ್ಕಿ ಸಾವು

ಮೈಸೂರಿನ ಯೆಲಿವಾಳ ಬಳಿ ಸಿಡಿಲು ಬಡಿದು ಬೆಂಗಳೂರಿನ 43 ವರ್ಷದ ಟೆಕ್ಕಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮೃತ ಟೆಕ್ಕಿಯನ್ನು ಹೊಸೊಕ್ಲು ರೋಷನ್ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ರೋಷನ್‌ ಕೊಡಗು ಜಿಲ್ಲೆಯವರು, ಐಟಿ ಕಂಪನಿಯ ಉದ್ಯೋಗಿಯಾಗಿದ್ದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮೈಸೂರಿನಲ್ಲಿರುವ

ಹೆಚ್ಚಿನ ಲಾಭ ಆಮಿಷವೊಡ್ಡಿ ದಾವಣಗೆರೆಯಲ್ಲಿ ಜನರಿಗೆ ಕೋಟ್ಯಾಂತರ ರೂ. ವಂಚಿಸಿದಾತ ಅರೆಸ್ಟ್‌

ನಾವಾಬಿಟ್‌ ನಕಲಿ ಆ್ಯಪ್ ಮೂಲಕ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 13,000 ಅಮಾಯಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಸೈಬರ್‌ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. 10,000 ರೂ. ಹೂಡಿಕೆಗೆ ಪ್ರತಿದಿನ 400 ರೂ. ಲಾಭದ ಆಮಿಷ ಒಡ್ಡಿ ಸ್ಥಳೀಯ ಶಾಲಾ ಮುಖ್ಯ ಶಿಕ್ಷಕಿಯನ್ನು ಬಡ

ಪ್ರತ್ಯೇಕ ಧಾರವಾಡ ಪಾಲಿಕೆ ರಚನೆಗೆ ರಾಜ್ಯಪಾಲರು ಅಸ್ತು

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಕೊನೆಗೂ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಂಕಿತ ಹಾಕಿದ್ದಾರೆ.  ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಕೊನೆಯದಾಗಿ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕದೇ ತಮ್ಮ ಬಳಿ

ಧಾರಾಕಾರ ಮಳೆಗೆ ಮೇಲ್ಛಾವಣಿಯ ಕಲ್ಲು ಬಿದ್ದು ಬಾಲಕಿ ಸಾವು

ಬಿರುಗಾಳಿ ಸಹಿತ ಧಾರಾಕಾರ‌‌ ಆಲಿಕಲ್ಲು ಮಳೆ ಸುರಿದ ರಭಸಕ್ಕೆ ಮನೆಯ ಮೇಲ್ಛಾವಣಿ ಮೇಲಿಟ್ಟಿದ್ದ ಕಲ್ಲು ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೀದರ್ ಹುಲಸೂರು ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ನಡೆದಿದೆ. ಮೂರು ವರ್ಷದ ಮಾಹೆರಾ ಪೈಸ್ ಇಸ್ಮಾಯಿಲ್ ಶೇಕ್

ಬೀದರ್‌ ಪಶು ವೈದ್ಯಕೀಯ ವಿವಿಯಲ್ಲಿ ಬಹುಕೋಟಿ ಹಗರಣ: ಆರು ಮಂದಿಯ ಬಂಧನ

2017-18ರ ಅವಧಿಯಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿ ಆರು ಜನರನ್ನು ಬಂಧಿಸಿದ್ದಾರೆ. ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ.

ಮತ್ತೊಬ್ಬನ ಜೊತೆ ಸಂಬಂಧ: ತುರುವೇಕೆರೆಯಲ್ಲಿ ವಿವಾಹಿತೆಯ ಕೊಲೆಗೈದ ಪ್ರಿಯಕರ

ತುರುವೇಕೆರೆ ತಾಲೂಕಿನ ಅಂಚಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯವನ್ನು ನಾಲ್ಕು ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ವಿವಾಹಿತ ಮಹಿಳೆಯ ಪ್ರಿಯಕರ ಆಕೆ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದಾಳೆಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಬಯಲಾಗಿದೆ. ವಿವಾಹಿತೆ