Menu

ಹಣಿಗೇರಿ ವನ್ಯಜೀವಿ ವಲಯದಲ್ಲಿ ಬೇಟೆಗಾರರ ಬಂಧನ

ಶಿವಮೊಗ್ಗ ತಾಲೂಕಿನ ಹಣಿಗೇರಿ ವನ್ಯಜೀವಿ ವಲಯದ ಸಿರಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಸಂಚು ರೂಪಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
​ಚೋರಡಿ ವಡೆಯರಕೊಪ್ಪ ಗ್ರಾಮದ ಲೋಕೇಶ್ ಎಸ್‌ಡಿ, ಸಚಿನ್ ಎಂ, ಅರುಣ್ ಕುಮಾರ್ ಹಾಗೂ ಸುಬ್ಬರಾಯ ಬಂಧಿತ ಆರೋಪಿಗಳು.

ರಾತ್ರಿ ಅರಣ್ಯ ತನಿಖಾ ಠಾಣೆಯ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಬೇಟೆಗೆ ಸಜ್ಜಾಗುತ್ತಿದ್ದರು. ಖಚಿತ ಮಾಹಿತಿ ಪಡೆದ ಅರಣ ಸಿಬ್ಬಂದಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 2 ಒಂಟಿ ನಳಿಗೆಯ ನಾಡ ಬಂದೂಕು, ಒಮಿನಿ ವಾಹನ, ಕತ್ತಿ, ಚಾಕು, ಗನ್ ಪೌಡರ್, ಲೋಹದ ಗುಂಡುಗಳು ಹಾಗೂ ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

​ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಉಪ ವಲಯ ಅರಣ್ಯಾಧಿಕಾರಿ ನಿದರ್ಶನ ಚವ್ಹಾಣ ಮತ್ತು ಮಂಜುನಾಥ್ ನಾಯ್ಕ್, ಗಸ್ತು ಅರಣ್ಯ ಪಾಲಕರಾದ ಅರವಿಂದ್ ಜಿ ಮತ್ತು ಬಸವರಾಜ್, ವಾಹನ ಚಾಲಕ ಸಂತೋಷ್ ಹಾಗೂ ದಿನಗೂಲಿ ನೌಕರ ಸಿದ್ದು ಬಡಿಗೇರ್ ಪಾಲ್ಗೊಂಡಿದ್ದರು

ಬೈಕ್ ಸವಾರನ ಮೇಲೆ ದಾಳಿ ನಡೆಸಿ ತೀವ್ರ ಗಾಯ ಮಾಡಿದ ಮಂಗ

​ಶಿವಮೊಗ್ಗ ನಗರದ ಕಾಶಿಪುರ ಗೇಟ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮಂಗ ಏಕಾಏಕಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಕುಮಾರ್ ನಾಯ್ಕ್ ಮಂಗನ ದಾಳಿಗೆ ಗಾಯಗೊಂಡವರು.

​ಗಾಯಾಳು ಕುಮಾರ್ ನಾಯ್ಕ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಶಿಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಮಂಗ ಸಾರ್ವಜನಿಕವಾಗಿ ಓಡಾಡುತ್ತಿದ್ದು, ಸ್ಥಳೀಯರಲ್ಲಿ ಭಯವುಂಟಾಗಿದೆ. ಇದನ್ನು ಕೂಡಲೇ ಸೆರೆಹಿಡಿದು ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *