ಜಿಲ್ಲಾ ಸುದ್ದಿ
ಪತ್ನಿ ಮೇಲೆ ಅನುಮಾನ: ಮನೆಯೊಳಗೆ ಜಿಲೆಟಿನ್ ಸ್ಫೋಟಿಸಿದ ವ್ಯಕ್ತಿ, ಮಗಳು ಸಾವು
ಪತ್ನಿಯ ಮೇಲೆ ಅನುಮಾನವುಂಟಾಗಿದ್ದಕ್ಕೆ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟಿಸಿದ ವ್ಯಕ್ತಿ ಮತ್ತು ಆತನ ಮಗಳು ಮೃತಪಟ್ಟಿದ್ದಾರೆ. ಆಳಂದ ತಾಲೂಕಿನ ಮಟಕಿ ತಾಂಡದಲ್ಲಿ ನಡೆದ ಈ ದುರಂತದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ ಮಾಡಿದ ವ್ಯಕ್ತಿಯ ಪತ್ನಿ ಹಾಗೂ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಶಿವಲಾಲ್ ಬಳಿರಾಮ್ ರಾಠೋಡ್ (50) ಹಾಗೂ ಮೀರಾ (15) ಮೃತಪಟ್ಟವರು. ಶಿವಲಾಲ್ ಹೆಂಡತಿ ಮೇಲೆ ಅನುಮಾನ ಅನುಮಾನ ಪಡುತ್ತಿದ್ದ. ತಾನು ಕೆಲಸ ಮಾಡುತ್ತಿದ್ದ ಕಲ್ಲು ಕ್ವಾರಿಯಿಂದ ಜಿಲೆಟಿನ್ ಕಡ್ಡಿ
ಶಿವಗಂಗೆ ಶಾಂತಲಾ ಡ್ರಾಪ್‌ನಲ್ಲಿ ಮೃತದೇಹ: ನಾಪತ್ತೆಯಾಗಿರುವ ಟೆಕ್ಕಿಯದಾ?
ಶಿವಗಂಗೆ ಬೆಟ್ಟದಲ್ಲಿ ಟೆಕ್ಕಿ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದು ದಿನಗಳಾಗಿದ್ದು, ಬೆಟ್ಟದ ಶಾಂತಲಾ ಡ್ರಾಪ್ ಕಂದಕದಲ್ಲಿ ಮೃತದೇಹವೊಂದು ಇರುವುದನ್ನು ಡ್ರೋನ್ ಕ್ಯಾಮೆರಾ ಪತ್ತೆ ಹಚ್ಚಿದೆ, ಈ ಮೃತದೇಹ ಅದ್ವೈತ್ ಅವರುದು ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಬೆಳಗ್ಗೆ ಟ್ರೆಕ್ಕಿಂಗ್‌ಗೆ ಹೋಗಿದ್ದ
ತುಮಕೂರಿನಲ್ಲಿ ಲಾರಿಗೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರು ಬಲಿ
ತುಮಕೂರಿನ ಸೋರೆಕುಂಟೆ ಬಳಿ ಲಾರಿಗೆ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲೊ ಒಬ್ಬರನ್ನು ಷಣ್ಮುಗ (50) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಟ್ರ್ಯಾಕ್ಟರ್‌ಗಳನ್ನು ತುಂಬಿಸಿಕೊಂಡು
ನಾಪೋಕ್ಲುವಿನ ತೋಟಗಳಲ್ಲಿ ಅಲೆದಾಡುತ್ತಿದ್ದ ಕಾಡಾನೆ ಸಾವು
ಕೊಡಗಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ಕಾಡಾನೆಯೊಂದು ಮೃತಪಟ್ಟಿದೆ. ಕಳೆದ ಎರಡು ದಿನಗಳಿಂದ ಕೈಕಾಡು ಗ್ರಾಮ ವ್ಯಾಪ್ತಿಯ ಗದ್ದೆ, ತೋಟಗಳಲ್ಲಿ ಅಲೆದಾಡುತ್ತಿದ್ದ ಗಂಡು ಕಾಡಾನೆಯೊಂದು ಭಾನುವಾರ ಸಂಜೆ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ಕಾಣಿಸಿಕೊಂಡಿದೆ. ಸೋಮವಾರ ಬೆಳಿಗ್ಗೆಯೂ
ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯ ಸಾವು
ವೃದ್ಧ ದಂಪತಿಯಲ್ಲಿ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯೂ ಅಸು ನೀಗಿರುವ ಘಟನೆ ದಾವಣಗೆರೆಯ ಹದಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಜ್ಜಿ ಹಾಗೂ ಪತಿ ಮಲ್ಲಜ್ಜ (75) ಮೃತಪಟ್ಟ ದಂಪತಿ. ಸಿದ್ದಜ್ಜಿ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಚಿಕಿತ್ಸೆ
ಶಾಂತಲಾ ಡ್ರಾಪ್ ಸರ್ಚ್ ಮಾಡಿದ್ದ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ
ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ನಾಪತ್ತೆಯಾಗಿರುವ ಬೆಂಗಳೂರಿನ ಕಾಡುಗೋಡಿಯ ಟೆಕ್ಕಿ, ಮಧ್ಯಪ್ರದೇಶದ ಇಂದೋರ್‌ನ ಅದ್ವೈತ್ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ನಾಪತ್ತೆಯಾದ ಮೂರನೇ ದಿನವೂ ಅದ್ವೈತ್ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆಯ ವೇಳೆ ಇದು ಪೂರ್ವನಿಯೋಜಿತ
ಐವತ್ತು ದಿನದ ಗಂಡು ಮಗುವನ್ನು ಕೊಂದ ತಾಯಿ, ಅಜ್ಜಿ, ಅಜ್ಜ, ಮಾವ ಅರೆಸ್ಟ್
ಐವತ್ತು ದಿನದ ಹಿಂದೆ ಜನಿಸಿದ್ದ ಗಂಡು ಮಗುವನ್ನು ತಾಯಿ, ಅಜ್ಜ, ಅಜ್ಜಿ , ಸೋದರಮಾವ ಸೇರಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಘಟನೆ ಬೀದರ್‌ನ ಔರಾದ್‌ನಲ್ಲಿರುವ ವಡಗಾಂವ್ ಗ್ರಾಮದಲ್ಲಿ ನಡೆದಿದೆ. ತನ್ನ ಪತ್ನಿ ವಾಣಿಶ್ರೀ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದು,
ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಚಾಕ್ಲೆಟ್ ಮಾರುತ್ತಿದ್ದಾತ ಬೆಳಗಾವಿಯಲ್ಲಿ ಅರೆಸ್ಟ್
ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಚಾಕ್ಲೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಬಳಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಭೋಲು ಪ್ರಜಾಪತಿ ಎಂಬಾತ ಸ್ನ್ಯಾಕ್ಸ್ ಪ್ಯಾಕೆಟ್‌ಗಳಲ್ಲಿ ಗಾಂಜಾ ತುಂಬಿಸಿ ಚಾಕ್ಲೆಟ್ ರೂಪದಲ್ಲಿ ಮಾರಾಟ ಮಾಡುತ್ತಿದ್ದ
ಮೂಡಿಗೆರೆಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಯುವಕರ ಸಾವು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುಕಿರಣ್ (28), ಮೋಹನ್ (30), ಜ್ಞಾನೇಶ್ (28) ಮೃತಪಟ್ಟ ಯುವಕರು,
ಹಂಪಿಯಲ್ಲಿ ಹೋಂ ಸ್ಟೇ: 54 ಅಧಿಕಾರಿಗಳ ವಿರುದ್ಧ ಲೋಕಾಯಕ್ತ ದೂರು ದಾಖಲು
ಹಂಪಿ ಸಂರಕ್ಷಿತ ಪ್ರದೇಶಗಳ್ಲಲಿ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಿರುವ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಹಂಪಿ ವಿಶ್ವಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದ್ದು, ಅಲ್ಲಿ ನಿಯಮಗಳ ಉಲ್ಲಂಘನೆ ವಿಚಾರವನ್ನು ನ್ಯಾಯಮೂರ್ತಿ




