Menu

ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ರೈತ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

ಉದಯಕಾಲ ನ್ಯೂಸ್, ಮೈಸೂರು: ರಾಜ್ಯದಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಕಾಡಾನೆ ದಾಳಿಯಲ್ಲಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.ಮೃತರನ್ನು ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ ರೈತ ವೀರಭದ್ರೇಗೌಡ ಅಲಿಯಾಸ್ ಸಣ್ಣಪ್ಪ (60) ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಮತ್ತೋರ್ವ ರೈತ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ

ವೀರಭದ್ರೇಗೌಡ ಹಾಗೂ ಮಹೇಶ್ ಇಬ್ಬರಿಗೂ ಅನಾರೋಗ್ಯದ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ, ವೈದ್ಯರ ಬಳಿ ತೋರಿಸಿಕೊಳ್ಳಲು ಒಂದೇ ಬೈಕ್‌ನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಅವರು ಕಾಡಗೆರೆ-ದೊಡ್ಡಬರಗಿ ಗ್ರಾಮದ ನಡುವಿನ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ಬೈಕ್ ಮೇಲೆ ದಾಳಿ ನಡೆಸಿದೆ.

ಆನೆಯ ಅನಿರೀಕ್ಷಿತ ದಾಳಿಯಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಸವಾರರು ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಸಣ್ಣಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದಾಳಿಯ ಬಳಿಕ ಆನೆ ಸಮೀಪದ ಅರಣ್ಯದೊಳಗೆ ತೆರಳಿದೆ. ಗಾಯಾಳು ಮಹೇಶ್ ಅವರೊಡನೆ ಅರಚಿಕೊಂಡದ್ದನ್ನು ಕಂಡು ಅಕ್ಕಪೂಜೆಯ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಇTತರೆ ರೈತರು ದಾವಿಸಿ ಬಂದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚುತ್ತಿರುವ ಕಾಡಾನೆ ಹಾವಳಿ: ಸ್ಥಳೀಯರ ಆಕ್ರೋಶ

ಮೈಸೂರು, ಚಾಮರಾಜನಗರ ಹಾಗೂ ಕೊಡಗು ಸೇರಿದಂತೆ ಅರಣ್ಯ ಒಡಲಿನ ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ರೈತರು ಹಾಗೂ ಕೂಲಿ ಕಾರ್ಮಿಕರು ಜೀವ ಭಯದಲ್ಲೇ ಬದುಕುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಸಿಬ್ಬಂದಿಗಳು ಶಾಶ್ವತ ತಡೆಗೋಡೆ ಅಥವಾ ಕಂದಕಗಳನ್ನು ನಿರ್ಮಿಸುವ ಮೂಲಕ ಜನರ ಜೀವ ರಕ್ಷಿಸಬೇಕು ಎಂದು ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WildElephantAttack #MysoreNews #Saragur #FarmerDeath #ElephantMenace #KarnatakaForestDepartment #UdayakalaNews #AndolanaNews #WildlifeConflict

Related Posts

Leave a Reply

Your email address will not be published. Required fields are marked *