ಕೆಆರ್‌ಎಸ್ ನೀರಿನ ಮಟ್ಟ 90 ಅಡಿಗೆ ಕುಸಿತ: ಬೆಂಗಳೂರಿಗೂ ಆತಂಕ
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟವು 90 ಅಡಿಗೆ ಕುಸಿದಿದ್ದು, ಬೆಂಗಳೂರು ನಗರ ಸೇರಿದಂತೆ ಹಳೆ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಈಗ 90 ಅಡಿ ನೀರು ಸಂಗ್ರಹವಿದೆ. ಒಟು 16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ಏಳು ಟಿಎಂಸಿ ಇದ್ದು ಒಂಬತ್ತು ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಲಭ್ಯವಿರುವ ಒಂಬತ್ತು
ಯಾದಗಿರಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ಬಾಲಕಿ ಸಾವು
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಕುಸಿದು ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತುಮಕೂರು ಗ್ರಾಮದ ಸಿದ್ದಪ್ಪ ಎಂಬವರ ಮನೆಯ ಗೋಡೆ ನಿರಂತರ ಮಳೆಗೆ ಕುಸಿದಿದೆ .ಈ ವೇಳೆ ಮನೆಯ
ಕೊಪ್ಪಳದಲ್ಲಿ ವೈಭವದ ಹುಲಿಗೆಮ್ಮ ದೇವಿ ರಥೋತ್ಸವ
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹುಲಿಗೆಮ್ಮ ದೇವಿ ರಥೋತ್ಸವವವು ಮೇ 11ರಂದು ಸಡಗರ, ಸಂಭ್ರಮದಿಂದ ನೆರವೇರಿತು. ಕೊಪ್ಪಳ ತಾಲೂಕಿನ ಸುಕ್ಷೇತ್ರ ಹುಲಿಗಿ ಗ್ರಾಮದಲ್ಲಿ ಗೋಧೂಳಿ ಸಮಯ ಸಂಜೆ ಸರಿಯಾಗಿ 5.30ಕ್ಕೆ ಆರಂಭಗೊಂಡ ರಥೋತ್ಸವದ ಚಾಲನಾ ಸಮಾರಂಭಕ್ಕೆ ಕೊಪ್ಪಳ ಸೇರಿದಂತೆ ಗಡಿ ಜಿಲ್ಲೆ ವಿಜಯನಗರ,
ಕೇಂದ್ರ ಸಚಿವರು, ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಬಳಸಲಿ, ಬಿಜೆಪಿಯಿಂದ ತ್ಯಾಗ ಶುರುವಾಗಲಿ
“ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಿರುವ ಪ್ರಧಾನ ಮಂತ್ರಿಗಳು, ಇವುಗಳ ಬೆಲೆ ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಸರ್ಕಾರಿ ನಿವಾಸ ಕುಮಾರಪಾರ್ಕ್
ಅಮ್ಲಾಪುರ ಮದರಸಾದಲ್ಲಿ ಹೊರ ರಾಜ್ಯದ ಮಕ್ಕಳಿಗೆ ಹಿಂಸೆ
ತುಮಕೂರು ನಗರ ಹೊರವಲಯದ ಅಮ್ಲಾಪುರದ ಮದರಸಾದಲ್ಲಿ ವ್ಯಾಸಂಗಕ್ಕೆ ಬಂದಿದ್ದ ಹೊರ ರಾಜ್ಯದ ೨೪ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ದೈಹಿಕ ಹಿಂಸೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ರೈಲ್ವೆ ಮಕ್ಕಳ ಸಹಾಯವಾಣಿ ಮೇಲ್ವೀಚಾರಕ ನಾಗಭೂಷಣ್ ಗ್ರಾಮಾಂತರ ಠಾಣೆಗೆ ಮೇ ೧೦ರಂದು ನೀಡಿದ
ಬೆಂಗಳೂರಿನಲ್ಲಿ ಮೇ 16ರಿಂದ ಬೃಹತ್ ಇ- ಖಾತಾ ಮೇಳ
ಬೆಂಗಳೂರಿನ ನಾಗರಿಕರಿಗೆ ಜಿಬಿಎ ಇ-ಖಾತಾ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ಮೇ 16ರಿಂದ ಬೃಹತ್ ಇ- ಖಾತಾ ಮೇಳ ನಡೆಸಲಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಇ-ಖಾತಾ ಮೇಳ ನಡೆಯಲಿದ್ದು, 25 ಲಕ್ಷ ಖಾತಾಗಳನ್ನ ಇ-ಖಾತಾ
ಸಂಪುಟ ಬದಲಾವಣೆ: ಹೈಕಮಾಂಡ್ ಉತ್ತರ ನೀಡಬೇಕಿದೆ ಎಂದ ಶಾಸಕ ಕೋನರಡ್ಡಿ
ಮೇ 15 ರ ನಂತರ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಹೈಕಮಾಂಡ್ ಹೇಳಬೇಕಿದೆ. ಕೇರಳ ಮತ್ತು ತಮಿಳುನಾಡಿನ ಸ್ಥಿತಿಗತಿ ನೋಡಿ ಹೈಕಮಾಂಡ್ ಸಿಎಂ ಅವರನ್ನು ಕರೆಯಬೇಕು. ಕರೆದು ಅವರ ಜೊತೆ ಹೈಕಮಾಂಡ್ ಮಾತಾಡಬೇಕು ಎಂದು ನವಲಗುಂದ ಶಾಸಕ ಎಚ್.ಕೋನರೆಡ್ಡಿ ಹೇಳಿದರು ಸಿಎಂ
ಶೃಂಗೇರಿ ಮರು ಮತ ಎಣಿಕೆ ರದ್ದುಗೊಳಿಸಿದ ಸುಪ್ರೀಂ: ಕಾಂಗ್ರೆಸ್‌ನ ರಾಜೇಗೌಡ ಶಾಸಕರಾಗಿ ಮುಂದುವರಿಕೆ
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ. ಹೈಕೋರ್ಟ್ ಸೂಚನೆಯಂತೆ ಇತ್ತೀಚೆಗೆ ನಡೆದಿದ್ದ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿದ್ದರು. ಈಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.
ಗೆಲುವಿನ ಅಂತರ: ಹೊಸದಾಗಿ ಅರ್ಜಿ ಸಲ್ಲಿಸಲು ಮಮತಾ ಬ್ಯಾನರ್ಜಿಗೆ ಸುಪ್ರೀಂ ಸೂಚನೆ
ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ಗೆಲುವಿನ ಅಂತರವು ಡಿಲಿಟ್ ಮಾಡಲಾಗಿರುವ ಮತಗಳಿಗಿಂತ ಕಡಿಮೆಯಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ
ನಾಗಮಂಗಲ ಕೆರೆಯಲ್ಲಿ ಈಜಲು ಹೋಗಿ ಯುವಕರಿಬ್ಬರ ಸಾವು
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಯರಗನಹಳ್ಳಿ ಬಳಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಪ್ರಕಾಶ್ ಗೌಡ (24) ಮತ್ತು ಯಶಸ್ (23) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಯರಗನಹಳ್ಳಿ ಕೆರೆಯಲ್ಲಿ ಈಜಲು ಹೋದಾಗ ಈ ದುರಂತ




