Menu

ಪ್ರೀತಿಸಿದವನ ಮದುವೆಯಾಗಲು ಕುಟುಂಬ ವಿರೋಧ: ಕುಂದಗೋಳದಲ್ಲಿ ಯುವತಿ ಆತ್ಮಹತ್ಯೆ

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರೀತಿಸಿದವನ ಮದುವೆಯಾಗಲು ಕುಟುಂಬಸ್ಥರು ವಿರೋಧಿಸಿದ್ದಕ್ಕೆ ನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶ್ವೇತಾ ಕೊಟೆನ್ನವರ್ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಹಲವು ವರ್ಷಗಳಿಂದ ಹುಬ್ಬಳ್ಳಿ ತಾಲೂಕಿನ ಕೆರೆಸೂರ ಗ್ರಾಮದ ನಾಗರಾಜ್ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿ, ನಾಗರಾಜ್‌ನನ್ನು ಮದುವೆಯಾಗುವುದಾಗಿ ಹೇಳಿದ್ದಳು. ಇದಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಂದಗೋಳ ಪೊಲೀಸ್

ಅಂಜನಾದ್ರಿ ಹನುಮಗೆ ತಾಮ್ರ ಲೇಪಿತ 2.50 ಕೋಟಿ ರೂ.ಗಳ ಆಭರಣ, 28 ಗ್ರಾಂ ಮಾತ್ರ ಚಿನ್ನ: ಉದ್ಯಮಿಗೆ ಜಿಲ್ಲಾಡಳಿತ ನೋಟಿಸ್‌

ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ರೂ. ಮೌಲ್ಯದ್ದು ಎನ್ನಲಾದ ಆಭರಣದಲ್ಲಿ 28 ಗ್ರಾಂ ಮಾತ್ರ ಚಿನ್ನವಿದ್ದು, ತಾಮ್ರದ ಲೇಪನ ಮಾಡಲಾಗಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ಆಭರಣಗಳ ಖಚಿತತೆ

ನಾಗಮಲೆಯಲ್ಲಿ ಬಾಲಕನ ಕೊಂದ ಚಿರತೆ: ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ಪರಿಹಾರ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ದರ್ಶನ ಪಡೆಯಲೆಂದು ಪಾದಯಾತ್ರೆ ಮಾಡುತ್ತಿದ್ದ ಬಾಲಕನನ್ನು ನಾಗಮಲೆಯಲ್ಲಿ ಚಿರತೆ ಎಳೆದೊಯ್ದು ಕೊಂಡು ಹಾಕಿರುವ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಬಾಲಕನ ಕುಟುಂಬಕ್ಕೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ತಾಯಿ ಜೊತೆ ದರ್ಶನಕ್ಕೆ

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯಸರ್ಕಾರ ವಿಫಲ: ಆರ್‌ ಅಶೋಕ

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯ @INCKarnataka ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಕೆಲವು ದಿನಗಳ ಅಂತರದಲ್ಲಿ ಮೂರು ಚಿರತೆ ದಾಳಿಗಳು, ಎರಡು ಅಮಾಯಕ ಭಕ್ತರ ಸಾವು, ಇದು ಆಡಳಿತ ವೈಫಲ್ಯ ಅಲ್ಲವೇ? ಇದು ಸರ್ಕಾರದ ಘೋರ ನಿರ್ಲಕ್ಷ್ಯ ಅಲ್ಲವೇ ಎಂದು

ಕೊಲೆ ಪ್ರಕರಣದ ಹಿಂದೂ ಕೈದಿ ಜೊತೆ ಪ್ರೀತಿಯಾಗಿ ಮದುವೆಯಾದ ಮುಸ್ಲಿಂ ಜೈಲರ್‌

ಕೊಲೆ ಮಾಡಿದ್ದ ಜೈಲು ಸೇರಿದ್ದ ಅಪರಾಧಿ  ಮತ್ತು ಜೈಲು ಅಧಿಕಾರಿ ನಡುವೆ ಪ್ರೀತಿಯಾಗಿ ಶಿಕ್ಷೆ ಅವಧಿ ಮುಗಿದು ಹೊರ ಬಂದ ಹಿಂದೂ  ಅಪರಾಧಿ ಮುಸ್ಲಿಂ  ಮಹಿಳಾ ಜೈಲರ್‌ ಅನ್ನು ಮದುವೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಅಪರಾಧಿ ಸತ್ನಾ ಸೆಂಟ್ರಲ್ ಜೈಲಿನಲ್ಲಿ

ಯುವತಿ ವಿಚಾರಕ್ಕೆ ಕಿರುಕುಳ: ಆಡಿಯೊ ರೆಕಾರ್ಡ್‌ ಮಾಡಿಟ್ಟು ಹಾಸನ ಯುವಕ ಸುಸೈಡ್‌

ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಬಳಿ ನಡೆದಿದೆ. ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕ. ಗ್ರಾಮದ ಶಂಕರ, ದರ್ಶನ್,

ನಾಗಮಲೆಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿ

ನಾಗಮಲೆಯಲ್ಲಿ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಂಗಳೂರು ಕಾಮಾಕ್ಷಿಪಾಳ್ಯ ವೃಷಭಾವತಿ ನಗರದ ಹರ್ಷಿತ್ ಗೌಡ ನಾಗಮಲೆಯಲ್ಲಿ ಚಿರತೆ ದಾಳಿಗೆ ಬಲಿಯಾದ ಬಾಲಕ. ನನ್ನ ಸೊಸೆ ಪವಿತ್ರ ತನ್ನ ಇಬ್ಬರು

ಸಚಿವ ಸುಧಾಕರ್‌ ಅಗಲಿಕೆ ನೋವು ತಂದಿದೆ, ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಸಿಎಂ-ಡಿಸಿಎಂ ಸಂತಾಪ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಸುಧಾಕರ್ ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಸದಾಶಿವ ನಗರದಲ್ಲಿರುವ ಸಚಿವ ಸುಧಾಕರ್ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು. ಸುಧಾಕರ್ ಮೂಲತಃ ಚಳ್ಳಕರೆಯವರು. 2008ರಿಂದ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಪಲ್ಟಿಯಾಗಿ ತಂದೆ, ಮಗ ಸಾವು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಂಡ್ಯ ಕೋಣನಹಳ್ಳಿ ಬಳಿಯ ಸೇತುವೆಯ ಮೇಲೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿರಣ್(40) ಮತ್ತು ಮಗ

ಬೀದರ್‌ನಲ್ಲಿ ಮನೆಯೊಳಗೆ ತೊಟ್ಟಿಲಲ್ಲಿದ್ದ ಮಗುವನ್ನು ಕಚ್ಚಿ ಸಾಯಿಸಿದ ಬೀದಿ ನಾಯಿ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದಾಬಲಗುಂಡಿ ಗ್ರಾಮದಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿದ್ದರಿಂದ ನಾಲ್ಕು ತಿಂಗಳ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಮನೆಯೊಳಗೆ ಮಗು ಮಲಗಿದ್ದ ವೇಳೆ ಪೋಷಕರು ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದಾಗ ಬೀದಿ ನಾಯಿ ನುಗ್ಗಿ ತೊಟ್ಟಿಲಿನಲ್ಲಿ ಮಲಗಿದ್ದ