ಬಿಜೆಪಿಯ ಅಪಪ್ರಚಾರದ ನಡುವೆಯೂ ಅಭಿವೃದ್ಧಿ ಹಾಗೂ ಗ್ಯಾರಂಟಿಗಳು ದಾವಣಗೆರೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಲಿದೆ: ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು ಹಾಗೂ ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿಯವರು ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ನೆರವಿಗೆ ಬಂದಿವೆ . ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು
ಮದುವೆ ಮಾಡಿಸಿಲ್ಲವೆಂದು ಹಾಸನದಲ್ಲಿ ತಾಯಿಯ ಕೊಲೆಗೈದ ಮಗ
ನಲ್ವತ್ತು ವರ್ಷ ಆಗಿದ್ದರೂ ಮದುವೆ ಮಾಡಿಸಿಲ್ಲವೆಂದು ಮಗನೊಬ್ಬ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್ (40) ತಾಯಿಯನ್ನು ಕೊಲೆ ಮಾಡಿದ ಮಗ. ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್
ಮತ್ತೊಂದು ಮದುವೆಯಾದ ಪತಿ: ಮಕ್ಕಳ ಕೊಂದು ಸುಸೈಡ್ ಮಾಡಿಕೊಂಡ ಪತ್ನಿ
ಪತಿ ಮತ್ತೊಂದು ಮದುವೆಯಾದ ಕಾರಣಕ್ಕೆ ನೊಂದ ಮಹಿಳೆ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಎಸ್ ಬಾನೋತ್ ಶ್ರಾವಂತಿ (29) ಮತ್ತು ಮಕ್ಕಳಾದ ಕಾರ್ತಿಕ್ (12) ಮತ್ತು ಕೌಶಿಕ್ (10) ಎಂದು ಗುರುತಿಸಲಾಗಿದೆ. ದೀರ್ಘಕಾಲದ ಕೌಟುಂಬಿಕ ಕಲಹವೇ ಈ
ಯುದ್ಧ ಶೀಘ್ರ ಕೊನೆ ಎಂದ ಟ್ರಂಪ್, ಇರಾನ್ ವಿರುದ್ಧ ದಾಳಿ ನಿಲ್ಲಿಸಲ್ಲವೆಂದ ಇಸ್ರೇಲ್
ಇರಾನ್ ಜೊತೆಗಿನ ಯುದ್ಧವು ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದು, ಅಮೆರಿಕ ಯುದ್ಧ ನಿಲ್ಲಿಸಿದರೂ ನಾವು ಇರಾನ್ ವಿರುದ್ಧದ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಇರಾನ್
ಶೆಲ್ ಬಂಕ್‌ಗಳಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದು, ಬುಧವಾರ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ. ಪ್ರೀಮಿಯಂ ಹಾಗೂ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದ್ದು, ಸಾಮಾನ್ಯ ಪೆಟ್ರೋಲ್ ದರ 106 ರೂ.ನಿಂದ
ಇಂದು ರಾತ್ರಿ ಬೆಂಗಳೂರು ಕರಗ ಉತ್ಸವ
ಇಂದು (ಬುಧವಾರ) ರಾತ್ರಿ 12ಕ್ಕೆ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಜಿಬಿಎ, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಜೊತೆಗೆ ಕರಗ ಉತ್ಸವ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿಎಂ, ಡಿಸಿಎಂ ಕರಗದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು,
ಬೆಂಗಳೂರು: ಇಂದಿನಿಂದ ನೀರಿನ ದರ, ಟೋಲ್ ದರ ಹೆಚ್ಚಳ
ಬೆಂಗಳೂರು ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3 ರಷ್ಟು ಹೆಚ್ಚಿಸಲಿದೆ. ಪ್ರತಿ ವರ್ಷದಂತೆ ಆರ್ಥಿಕ ಸಮತೋಲನಸರಿದೂಗಿಸಲು ಶೇ.3ರಷ್ಟು ನೀರಿನ ಶುಲ್ಕ ಹೆಚ್ಚಿಸಿದೆ. ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ 20 ರಿಂದ 30 ರೂ. ಹೆಚ್ಚುವರಿ ನೀರಿನ
ಜನಗಣತಿ ಆಶಯ ಜನತೆಗೂ ತಿಳಿಯಲಿ
ಜನಗಣತಿಗೆ ಸರ್ಕಾರಗಳಿಂದು ಸಮೂಹ ಮಾಧ್ಯಮ ಮತ್ತು ಸಮೂಹ ಸಾರಿಗೆಯಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವ ಅಗತ್ಯವಿದೆ. ರಾಜ್ಯದ ಭವಿಷ್ಯಕ್ಕೆ ಬುನಾದಿ ಆಗಿರುವ ಈ ಪ್ರಕ್ರಿಯೆಗೆ ಆಧುನಿಕ ತಂತ್ರಜ್ಞಾನದ ಬಳಕೆಯೂ ಅಗತ್ಯ. ಕರ್ನಾಟಕವೂ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಜನಗಣತಿ ಬುಧವಾರದಿಂದ
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಅಂತರದ ಗೆಲುವು: ಡಿಕೆ ಶಿವಕುಮಾರ್
“ದಿವಂಗತ ಶಾಮನೂರು ಶಿವಶಂಕರಪ್ಪನವರು ಮಾಡಿರುವ ಸೇವೆ, ಕೊಟ್ಟಿರುವ ಕೊಡುಗೆಗಳನ್ನು ಈ ಭಾಗದ ಜನ ಸ್ಮರಿಸುತ್ತಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರು ದೊಡ್ಡ ಅಂತರದ ಗೆಲುವು ಸಾಧಿಸಲಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ
ಹರ್ಮುಜ್ ಬಿಟ್ಟಾಕಿ ಯುದ್ಧ ಕೊನೆಗೊಳಿಸಲು ಮುಂದಾದ ಟ್ರಂಪ್ ?
ಹರ್ಮುಜ್ ಜಲಸಂಧಿ ಬಹುತೇಕ ಮುಚ್ಚಿದ್ದರೂ ಇರಾನ್ ವಿರುದ್ಧ ಯುದ್ಧ ಕೊನೆಗೊಳಿಸಲು ತಾವು ಸಿದ್ಧರಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಾಯಕರಿಗೆ ತಿಳಿಸಿದ್ದಾಗಿ ಅಮೆರಿಕದ ಅಧಿಕಾರಿಗಳು ದೃಢೀಕರಿಸಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯಲ್ಲಿ ತಿಳಿಸಿದೆ. ಇಸ್ರೇಲ್ ಜೊತೆ ಸೇರಿ ಇರಾನ್




