Menu

ದೊಡ್ಡಬಳ್ಳಾಪುರದಲ್ಲಿ ಲಘು ಭೂಕಂಪ: ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲು, ಜನ ಆತಂಕಪಡುವಂತಿಲ್ಲ ಎಂದ KSNDMC

ಉದಯಕಾಲ ನ್ಯೂಸ್, ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.0 ಎಂದು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಅಧಿಕೃತವಾಗಿ ತಿಳಿಸಿದೆ.

ಅಕ್ಟೋಬರ್ 23ರಂದು ಬೆಳಗ್ಗೆ 9:01 ನಿಮಿಷಕ್ಕೆ ಈ ಭೂಕಂಪನ ಸಂಭವಿಸಿದೆ. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದಿಂದ ಉತ್ತರಕ್ಕೆ ಸುಮಾರು 0.5 ಕಿ.ಮೀ ದೂರದಲ್ಲಿ ಹಾಗೂ ಭೂಮಿಯ ಆಳದಲ್ಲಿ 10 ಕಿ.ಮೀ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದ್ದು, ಇದು ತೀರಾ ಕಡಿಮೆ ತೀವ್ರತೆಯ ಲಘು ಭೂಕಂಪನವಾಗಿದೆ.ಕೇಂದ್ರಬಿಂದುವಿನಿಂದ ಸುಮಾರು 20 ರಿಂದ 30 ಕಿ.ಮೀ ಸುತ್ತಳತೆ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿರಬಹುದು. ಭೂಕಂಪನದ ತೀವ್ರತೆ ಅಲ್ಪವಾಗಿದ್ದು, ಸ್ಥಳೀಯ ಸಾರ್ವಜನಿಕರಿಗೆ ಅಥವಾ ಯಾವುದೇ ಆಸ್ತಿಪಾಸ್ತಿಗೆ ಯಾವುದೇ ಹಾನಿ ಉಂಟಾಗಿಲ್ಲ.

ಆತಂಕಪಡದಂತೆ ಅಧಿಕಾರಿಗಳ ಮನವಿ

ಈ ಪ್ರದೇಶವು ಸೆಸ್ಮಿಕ್ ಝೋನ್ II (Seismic Zone II) ವ್ಯಾಪ್ತಿಗೆ ಬರಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ಅಂಜಿಕೆ ಅಥವಾ ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
#Doddaballapura #Earthquake #KSNDMC #KarnatakaNews #UdayakalaNews #MildTremor #BangaloreRural #Tubagere

Related Posts

Leave a Reply

Your email address will not be published. Required fields are marked *