Menu

ಕಾಂಗ್ರೆಸ್‌ನಿಂದ ಬಾಂಗ್ಲಾ ದೇಶಿಗಳನ್ನು ಮತದಾರ ಪಟ್ಟಿಗೆ ಸೇರಿಸುವ ಷಡ್ಯಂತ್ರ: ಆರ್‌ ಅಶೋಕ 

ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದಾಗಿ ಬಿಎಲ್‌ಒಗಳು ಬೀದಿಗಳಲ್ಲಿ ಎಸ್‌ಐಆರ್‌ ಅರ್ಜಿಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಎಸ್‌ಐಆರ್‌ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶ ಕೂಡ ಹೌದು. ಆದರೆ ಕಾಂಗ್ರೆಸ್‌ ಸರ್ಕಾರ ಬಾಂಗ್ಲಾ ಜನರ ಪಾಲಿಗೆ ಸ್ವರ್ಗವಾಗಿದೆ. ಈ ಮೊದಲು ಕೋಗಿಲು

ಮಳೆ ಕೊರತೆಯಿಂದ ವಿದ್ಯುತ್‌ ವ್ಯತ್ಯಯ, ಮುಂಜಾಗ್ರತಾ ಕ್ರಮಕ್ಕೆ ಸಿಎಂ ಸೂಚನೆ 

ಎಲ್ ನಿನೊ ಪರಿಣಾಮದಿಂದಾಗಿ ಜಲ ವಿದ್ಯುತ್‌ ಉತ್ಪಾದನೆ ಕುಸಿಯುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ವಿಶೇಷ ತುರ್ತು ಕಾರ್ಯಯೋಜನೆ ರೂಪಿಸುವ ಜೊತೆಗೆ ಸಂಗ್ರಹ ಮತ್ತು ಇತರ ಮೂಲಗಳ ಉತ್ಪಾದನೆಗೆ ತುರ್ತು ಗಮನ ಹರಿಸಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಸೂಚನೆ ನೀಡಿದರು. ಇಂಧನ ಇಲಾಖೆಯ

ಕೃಷ್ಣಾ ನದಿಗೆ ಉರುಳಿದ್ದ ಟಿಪ್ಪರ್‌ ಒಳಗೆ ಚಾಲಕನ ಶವ ಪತ್ತೆ

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜ್ಯದ ಅತಿ ಉದ್ದದ ಕೊರ್ತಿ–ಕೋಲ್ಹಾರ ಸೇತುವೆ ಮೇಲೆ ಮೂರು ದಿನಗಳ ಹಿಂದೆ  ಟಿಪ್ಪರ್ ಮತ್ತು ಕಾರು ಡಿಕ್ಕಿಯಾಗಿ  ನಿಯಂತ್ರಣ ತಪ್ಪಿದ ಟಿಪ್ಪರ್  ಕೃಷ್ಣಾ ನದಿಗೆ ಬಿದ್ದಿತ್ತು.  ಆ ಟಿಪ್ಪರ್‌ ಅನ್ನು ಕ್ರೇನ್‌  ಮೂಲಕ ಮೇಲಕ್ಕೆ ಎತ್ತಲಾಗಿದ್ದು, ಒಳಭಾಗದಲ್ಲಿ

ಸುಪ್ರೀಂಕೋರ್ಟ್‌ಗೆ ಎಐ ಸವಾಲು

ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ ಐದೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಆಗುವುದೆಂದಾಗ ಎಐನಿಂದ ಭಾರತೀಯ ನೈಜ ನ್ಯಾಯಾಂಗ ಕಾರ್ಯ ನಿರ್ವಹಣೆಗೆ ಎದುರಾದ ಅಡ್ಡಿ ಮತ್ತು ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವುದು ಪರಿಣಿತರಿಗೆ ಅಸಾಧ್ಯವೇನೂ ಅಲ್ಲ. ಕೃತಕ ಬುದ್ದಿಮತ್ತೆ ಭಾರತೀಯ ನ್ಯಾಯಾಂಗದ ಮೇಲೆ ಗಂಭೀರ

ನಟ ದರ್ಶನ್‌ ಜಾಮೀನು ಆದೇಶ ಮರುಪರಿಶೀಲನೆ ಅರ್ಜಿ ವಜಾಗೊಳಿಸಿದ ಸುಪ್ರೀಂ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಮೇ 15 ರಂದು ಒಂದು ವರ್ಷದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಸುಪ್ರೀಂ ಕೋರ್ಟ್ ನೀಡಿದ್ದ ಅದೇಶ ಮರು ಪರಿಶೀಲನೆ ಮಾಡುವಂತೆ ಕೋರಿ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಜೈಲಿನಲ್ಲಿರುವ ದರ್ಶನ್‌ ಇನ್ನೂ

ಅಕ್ರಮ ಆಸ್ತಿ ಕೇಸ್‌ ರದ್ದು ಕೋರಿ ಕೆಎಸ್‌ ಈಶ್ವರಪ್ಪ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾ

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ಈಶ್ವರಪ್ಪ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅರ್ಜಿ ಸಲ್ಲಿಸಿದ್ದು, ಲೋಕಾಯುಕ್ತ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಗೆ ಮನವಿ

ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ನೋಂದಣಿ ಸಮಸ್ಯೆ ದೊಡ್ಡದಾಗಿದೆ: ಎಂಎಲ್ಸಿ ರವಿಕುಮಾರ್ ಕಿಡಿ

ರಾಜ್ಯದಲ್ಲಿ ರೈತರ ಸಮಸ್ಯೆಗಿಂತ ಆರ್‌ಎಸ್‌ಎಸ್ ರಿಜಿಸ್ಟ್ರೆಷನ್ ಸಮಸ್ಯೆ ದೊಡ್ಡದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ರೆಜಿಸ್ಟ್ರೆಷನ್ ದೇಶದಲ್ಲಿ ನಂ 1 ಸಮಸ್ಯೆ ಆಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಬರಗಾಲ ಆವರಿಸಿದೆ,

ಪೆರೇಸಂದ್ರ ಕ್ವಾರಿಯಲ್ಲಿ ಡ್ರಿಲ್ಲಿಂಗ್ ವೇಳೆ ಸ್ಫೋಟಕ್ಕೆ ಕಾರ್ಮಿಕ ಬಲಿ

ಚಿಕ್ಕಬಳ್ಳಾಪುರದ ಪೆರೇಸಂದ್ರ ಸಮೀಪದ ಹಿರೇನಗವಳ್ಳಿ ಬೆಟ್ಟದಲ್ಲಿರುವ ಎಕೋ ಸ್ಯಾಂಡ್ ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಧರ್ಮಾವರಂನ 35 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ವಾರಿಯಲ್ಲಿ ಡ್ರಿಲ್ಲಿಂಗ್ ಕಾರ್ಯ ನಡೆಯುತ್ತಿದ್ದ ವೇಳೆ

ಹೈದರಾಬಾದ್‌, ಕರ್ನಾಟಕಗಳಲ್ಲಿ ತೆಲಂಗಾಣ ಅಧಿಕಾರಿಯ ಭಾರಿ ಅಕ್ರಮ ಆಸ್ತಿ ಪತ್ತೆ ಮಾಡಿದ ಎಸಿಬಿ

ತೆಲಂಗಾಣದ ಭ್ರಷ್ಟ ಅಧಿಕಾರಿಯೊಬ್ಬರ ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಯಲಿಗೆಳೆದಿದೆ. ಹೈದರಾಬಾದ್‌ ಮತ್ತು ಕರ್ನಾಟಕಗಳಲ್ಲಿ 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟು ಅಕ್ರಮ ಆಸ್ತಿಯ ನಿಜವಾದ

ಡಿಸ್ಟ್ರಿಕ್ಟ್ 25 ಫೇಸ್ 3 ಯೋಜನೆಗೆ ₹1,900 ಕೋಟಿ ರೂ. ಹೂಡಿಕೆ ಘೋಷಿಸಿದ ನಂಬಿಯಾರ್ ಬಿಲ್ಡರ್ಸ್

ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾದ ನಂಬಿಯಾರ್ ಬಿಲ್ಡರ್ಸ್, ಸರ್ಜಾಪುರ ರಸ್ತೆಯಲ್ಲಿ ತನ್ನ ಐಷಾರಾಮಿ ಸಂಯೋಜಿತ ಟೌನ್‌ ಶಿಪ್ ಯೋಜನೆಯಾದ ಡಿಸ್ಟ್ರಿಕ್ಟ್ 25ರ ಮೂರನೇ ಹಂತವನ್ನು ಅನಾವರಣಗೊಳಿಸಿದೆ. ಯೋಜನೆಯ  ಮೊದಲ ಎರಡು ಹಂತಗಳಲ್ಲಿ ಈಗಾಗಲೇ 1,600 ಕ್ಕೂ ಹೆಚ್ಚು ಕುಟುಂಬಗಳು