Wednesday, October 07, 2026
Menu

ರಾಹುಕಾಲದಡಿ ರಾಹುಲ್ ಗಾಂಧಿ, ಪ್ರತಿಭಟನೆ ನಿರರ್ಥಕ: ಆರ್. ಅಶೋಕ್ ವಾಗ್ದಾಳಿ

ಉದಯಕಾಲ ನ್ಯೂಸ್‌, ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅದಕ್ಕಾಗಿಯೇ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಹೊರತು ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸೇವಾ ಸಂಕಲ್ಪ ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

ಪ್ರತಿಭಟನೆಗಳ ಬಗ್ಗೆ ಟೀಕೆ
ಚುನಾವಣಾ ಆಯೋಗದ ಮುಖ್ಯಸ್ಥರನ್ನು ತೆಗೆದುಹಾಕಲು ನಿರ್ದಿಷ್ಟ ನಿಯಮಗಳಿವೆ. ರಸ್ತೆಯಲ್ಲಿ ಕೂಗಾಡಿದಾಕ್ಷಣ ಯಾರೂ ಸ್ಥಾನದಿಂದ ಕೆಳಗೆ ಇಳಿಯಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಬಹುಮತ ಸಾಬೀತಾದರೆ ಮಾತ್ರ ಸರ್ಕಾರದ ವಿರುದ್ಧ ಕ್ರಮ ಸಾಧ್ಯವೇ ಹೊರತು, ರಸ್ತೆಯ ಚೀರಾಟದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಚುನಾವಣಾ ಆಯೋಗದ ಸ್ವಾಯತ್ತತೆ
ಚುನಾವಣಾ ಆಯೋಗವು ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲೇ ರಚನೆಯಾದ ಸ್ವತಂತ್ರ ಸಂಸ್ಥೆಯಾಗಿದೆ. ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗ ಸರಿಯಿರುತ್ತದೆ, ಸೋತಾಗ ತಪ್ಪಾಗುತ್ತದೆ ಎನ್ನುವುದು ರಾಹುಲ್ ಗಾಂಧಿಯ ದ್ವಂದ್ವ ನೀತಿಯಾಗಿದೆ ಎಂದು ಟೀಕಿಸಿದರು. ದಮ್ಮಿದ್ದರೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದರು.
ತೆಲಂಗಾಣ ಮತ್ತು ಕೇರಳದಲ್ಲಿ ಎಸ್‌ಐಆರ್ (SIR) ಆದ ಬಳಿಕವೇ ಚುನಾವಣೆ ನಡೆದಿದೆ. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಹಾಗಾಗಿ ಅಕ್ರಮ ಮಾಡುವಂತಿದ್ದರೆ ಬಿಜೆಪಿಯೇ ಅಲ್ಲಿ ಬಹುಮತ ಗಳಿಸುತ್ತಿತ್ತಲ್ಲವೇ ಎಂದು ಪ್ರಶ್ನಿಸಿದರು.

ಸಾಂವಿಧಾನಿಕ ಸಂಸ್ಥೆಗಳಿಗೆ ಅಗೌರವ
ಇಡಿ, ಸಿಬಿಐ, ಚುನಾವಣಾ ಆಯೋಗ ಎಲ್ಲವೂ ಬಿಜೆಪಿ ಏಜೆಂಟ್ ಎನ್ನುವ ರಾಹುಲ್ ಗಾಂಧಿ, ಕೆಪಿಎಸ್‌ಸಿ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನೂ ಪ್ರಶ್ನಿಸುತ್ತ ಬಂದಿದ್ದಾರೆ. ಇವರು ವಿಪಕ್ಷ ನಾಯಕನಾಗಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ತೆಲಂಗಾಣ ಮತ್ತು ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ‘ಗೋವಿಂದ’ ಗ್ಯಾರಂಟಿ ಎಂದು ಲೇವಡಿ ಮಾಡಿದರು.
#RAshok #RahulGandhi #Chitradurga #Udayakala #BJPKarnataka #Congress #ElectionCommission #PoliticalNews

Related Posts

Leave a Reply

Your email address will not be published. Required fields are marked *