ನವಜಾತ ಶಿಶುವನ್ನು ಟಾಯ್ಲೆಟ್ನಲ್ಲಿ ಹತ್ಯೆಗೈದ ಅವಿವಾಹಿತ ಮಹಿಳೆ
ದೇವನಹಳ್ಳಿ ತಾಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವಿವಾಹಿತ ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಶೌಚಾಲಯದಲ್ಲೇ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ. ಫಾಕ್ಸ್ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಎಂಬಾಕೆಗೆ ಕೆಲಸದ ಅವಧಿಯಲ್ಲೇ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶೌಚಾಲಯಕ್ಕೆ ಹೋದಾಗ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಕೂಡಲೇ ಕತ್ತು ಕೊಯ್ದು ಶೌಚಾಲಯದಲ್ಲೇ ಎಸೆದಿದ್ದಾಳೆ. ನಂತರ ಏನೂ ತಿಳಿಯದವಳಂತೆ ಶೌಚಾಲಯದಿಂದ ಹೊರಬಂದಿದ್ದಳು. ಅದೇ
ಬೆಂಗಳೂರಿನಲ್ಲಿ 410 ಕೋಟಿ ರೂ. ಜಿಎಸ್ಟಿ ಹಗರಣ: ಕಿಂಗ್ಪಿನ್ ಅರೆಸ್ಟ್
ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್ಟಿ ಹಗರಣ ನಡೆದಿದ್ದು, ಅಮಾಯಕರ ಆಧಾರ್, ಪಾನ್ ಕಾರ್ಡ್ ಬಳಸಿ 102.೫ ಕೋಟಿ ತೆರಿಗೆ ಲೂಟಿ ಮಾಡಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಿಂಗ್ಪಿನ್ ಆಂಧ್ರದ ತೌಕೀರ್ ಎಂಬವನನ್ನು
ಬೆಂಗಳೂರಿನ ಮನೆಯಲ್ಲಿ ದಂಪತಿಯ ಮೃತದೇಹ ಪತ್ತೆ
ಬೆಂಗಳೂರಿನ ಆರ್.ಟಿ.ನಗರ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ. 35 ವರ್ಷದ ಡೇವಿಡ್ ಮತ್ತು 30 ವರ್ಷದ ಸುಮಿತ್ರಾ ಮೃತರು. ಇವರು 10 ವರ್ಷದ ಹಿಂದೆ ಮದುವೆಯಾಗಿದ್ದರು. ಆರ್.ಟಿ.ನಗರ ಪೊಲೀಸರು ಮತ್ತು ಸೊಕೊ ತಂಡ ಸ್ಥಳಕ್ಕೆ ಆಗಮಿಸಿದ್ದು,
ಚಿನ್ನ ಖರೀದಿಗೆ ಹೋದವನ ಎರಡು ಕೋಟಿ ರೂ. ದೋಚಿದ ಅಂಗಡಿ ಮಾಲೀಕ ಮತ್ತು ಮಹಿಳೆ
ಚಿನ್ನ ಖರೀದಿಗೆ ಹೋಗಿದ್ದವರಿಂದ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮತ್ತು ಮಹಿಳೆಯೊಬ್ಬರು ಎರಡು ಕೋಟಿ ರೂ. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ. ಸರ್ಜಾಪುರದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಮುಂದಾಗಿದ್ದರು. ಪುನೀತ್ ಸಂಬಂದಿ
ತಮಿಳುನಾಡು, ಪಶ್ಚಿಮಬಂಗಾಳ ವಿಧಾನಸಭೆಗಳಿಗೆ ಮತದಾನ ಇಂದು
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳು ಮತ್ತು ಪಶ್ಚಿಮ ಬಂಗಾಳದ 152 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ತಮಿಳುನಾಡಿನಲ್ಲಿ ಈ ಬಾರಿ ಡಿಎಂಕೆ, ಎಐಡಿಎಂಕೆ ನಡುವೆ ಹಾಗೂ ದಳಪತಿ ವಿಜಯ್ ನೇತೃತ್ವದ ಟಿವಿಕೆ ನಡುವೆ
ಪ್ರಧಾನಿಗೆ ಟೆರರಿಸ್ಟ್ ಎಂದ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಯಾಚಿಸಬೇಕು: ಆರ್ ಅಶೋಕ ಆಗ್ರಹ
ದೇಶದ ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ಷಮೆ ಯಾಚಿಸಬೇಕು. ಇವರು ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದಲ್ಲಿರಲು ಸೂಕ್ತರಲ್ಲ ಎಂದು ಪ್ರತಿಪಕ್ಷ ನಾಯಕ ಆರ್ಅಶೋಕ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅತಿ ಹೆಚ್ಚು ದಿನಗಳ
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್ಗೆ ಜಾಮೀನು
ನಟಿ ರನ್ಯಾ ರಾವ್ ಅವರಿಗೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಚಿನ್ನ ಕಳ್ಳಸಾಗಣೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ನಟಿ ರನ್ಯಾ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಪ್ರಕರಣದ ತನಿಖೆ
ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು
ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ತಾಯಿಯ ಮೃತದೇಹ ಪತ್ತೆಯಾಗಿದ್ದು, ಮಗನ ಮೃತದೇಹಕ್ಕಾಗಿ ಶೋಧ ಮುಂದುವರಿಸಲಾಗಿದೆ.27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್
ರಾಯಚೂರಿನಲ್ಲಿ ಸಿಡಿಲಿಗೆ ಮಹಿಳೆ, ತೆಂಗಿನ ಮರ ಬಲಿ
ರಾಯಚೂರು ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆ ಸಾರ್ವಜನಿಕರನ್ನು ಕಂಗೆಡಿಸಿದೆ. ಮಳೆಯ ಅಬ್ಬರದ ನಡುವೆ ಸಿಡಿಲಿನ ಹೊಡೆತಕ್ಕೆ ಲಿಂಗಸೂಗೂರು ತಾಲೂಕಿನಲ್ಲಿ ರೈತ ಮಹಿಳೆ ಬಲಿಯಾಗಿದ್ದಾರೆ. ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿಯ ಬಸವನ ಬಗಡಿ ದೊಡ್ಡಿಯಲ್ಲಿ ಈ ದುರಂತ ಸಂಭವಿಸಿದೆ. ಮಳೆ ಬರುತ್ತಿದ್ದ
ಪ್ರೀತಿಸಿ ಮದುವೆಯಾಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡಳು
ಮನೆಯವರು ಬೇಡವೆಂದರೂ ಕಾಡಿಸಿ ಪೀಡಿಸಿ ಇಷ್ಟಪಟ್ಟವನನ್ನೇ ಮದ್ವೆಯಾಗಿದ್ದ ಮಹಿಳೆ, ಈಗ ಗಂಡನನ್ನು ಬಿಟ್ಟು ಆತನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಬನ್ನಂಗಾಡಿಯಲ್ಲಿ ನಡೆದಿದೆ. ಮದುವೆಯಾಗಿ ಎರಡು ವರ್ಷದ ಬಳಿಕ ತಂಗಿ ತಂಗಿ ಎಂದೇ ಕರೆಯುತ್ತಿದ್ದ ಗಂಡನ ಸ್ನೇಹಿತನ




