Menu

ಪ್ರೀತಿಸಿ ಮದುವೆಯಾಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡಳು

ಮನೆಯವರು ಬೇಡವೆಂದರೂ ಕಾಡಿಸಿ ಪೀಡಿಸಿ ಇಷ್ಟಪಟ್ಟವನನ್ನೇ ಮದ್ವೆಯಾಗಿದ್ದ ಮಹಿಳೆ, ಈಗ ಗಂಡನನ್ನು ಬಿಟ್ಟು ಆತನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಬನ್ನಂಗಾಡಿಯಲ್ಲಿ ನಡೆದಿದೆ.

ಮದುವೆಯಾಗಿ ಎರಡು ವರ್ಷದ ಬಳಿಕ ತಂಗಿ ತಂಗಿ ಎಂದೇ ಕರೆಯುತ್ತಿದ್ದ ಗಂಡನ ಸ್ನೇಹಿತನ ಜತೆ ಹೋಗಿ ಮದುವೆಯಾಗಿದ್ದಾಳೆ. ಬನ್ನಂಗಾಡಿಯ ಸಾಗರ್ ಹಾಗೂ ಹರವು ಗ್ರಾಮದ ರಕ್ಷಿತಾ ಐದು ವರ್ಷದಿಂದ ಪ್ರೀತಿಸುತ್ತಿದ್ದವರು, ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಿಂದ ಪರಾರಿಯಾಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡಿದ್ದಾಳೆ.

ಸಾಗರ್ ವೃತ್ತಿಯಲ್ಲಿ ಆಟೋ ಚಾಲಕ. ಪಾಂಡವಪುರಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಅದೇ ಮಾರ್ಗದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಆಕೆ ಪ್ರೀತಿ ಎಂದು ಹಿಂದೆ ಬಿದ್ದಿದ್ದಳು‌. ಸ್ನೇಹ‌ ಕೊನೆಗೆ ಪ್ರೀತಿಯಾಗಿ ಮದುವೆಯಾಗಿದ್ದರು. ಆಕೆಯ ಮನೆಯವರು ಇಂತಹ ಮಗಳು ನಮಗೆ ಬೇಡ ಎಂದಿದ್ದರು.‌ ರಕ್ಷಿತಾಗೆ 18 ವರ್ಷ ತುಂಬುವ ವರೆಗೆ ಸಾಗರ್ ಆಕೆಯನ್ನು ಅಕ್ಕನ ಮನೆಯಲ್ಲಿ ಇರಿಸಿ 18 ವರ್ಷ ತುಂಬಿದ ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ದ.

ಬಳಿಕ ಸಾಗರ್‌ನ ಗೆಳೆಯ ಇಂದ್ರ ಎಂಬಾತನ ಜೊತೆ ಪೋನ್ ಕಾಲ್, ಮೆಸೇಜ್ ಮುಂದುವರಿದು ಪ್ರೀತಿ ಹಂತ ತಲುಪಿದೆ. ಆತ ಕೂಡ ಆಟೊ ಚಾಲಕ. ಆಗಾಗ ಸಾಗರ್‌ನ ಮನೆಗೆ ಬರುತ್ತಿದ್ದ. ಮನೆಯವರ ಮುಂದೆಲ್ಲ ಸಾಗರನ ಹೆಂಡತಿಯನ್ನು ತಂಗಿ ತಂಗಿ ಂದು ಕರೆಯುತ್ತಿದ್ದ. ಫೋನ್‌ನಲ್ಲಿ ಪ್ರೀತಿ ಪ್ರಣಯದ ಮಾತುಗಳನ್ನ ಆಕೆಯೊಂದಿಗೆ ಆಡುತ್ತಿದ್ದ. ಗಂಡ ಸಾಗರ್‌ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಕೆ ಮನೆಯಲ್ಲಿದ್ದ 22 ಗ್ರಾಂ ಒಡವೆ, 1 ಲಕ್ಷ ನಗದು ತೆಗೆದುಕೊಂಡು ಹೋಗಿದ್ದು ನನಗೆ ವಾಪಸ್‌ ಕೊಡಿಸಿ, ಆಕೆಯಿಂದ ಡಿವೋರ್ಸ್ ಕೂಡ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *