ಬೆಳಗಾವಿ ಅಧಿಕಾರಿಯ ಬೆಡ್‌ರೂಂ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಬೆದರಿಕೆ: ನಕಲಿ ಪತ್ರಕರ್ತರು ಅರೆಸ್ಟ್
ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು. ಬೆಳಗಾವಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಮಹಿಳಾ ಅಧಿಕಾರಿಯ ಬೆಡ್‌ರೂಂನ ಖಾಸಗಿ
ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ: ಡಿಕೆ ಶಿವಕುಮಾರ್
ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
“ಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಪೂರ್ಣ”
“ಮುಂದಿನ ಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಡಿಎ ಅಧಿಕಾರಿಗಳ ಜತೆ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಉತ್ತರ ಹಾಗೂ ದಕ್ಷಿಣ) ಬಗ್ಗೆ ಪರಿಶೀಲನೆ ಸಭೆ ನಡೆಸಿದೆ. ಭೂಮಿ ಮಾಲೀಕರಿಗೆ
ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಆದೇಶ
ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿರುವ ಬೆನ್ನಲ್ಲೇ ಚುನಾವಣೆ ನಡೆಯುವವರೆಗೂ ಆಡಳಿತಾಧಿಕಾರಿಗಳ ನೇಮಕಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ 2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ಧತೆಗೆ ನಿರ್ದೇಶನ
ಸುಪ್ರೀಂ ಮುಂದೆ ಮಮತಾ ಪಾರ್ಟಿ ಇನ್ ಪರ್ಸನ್…
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಈಗ ಸುಪ್ರೀಂಕೋರ್ಟಿನಲ್ಲಿ ತಾವೇ ಖುದ್ದು ಹಾಜರಾಗಿ ವಾದ ಮಂಡಿಸುತ್ತಿರುವುದರಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ತನ್ನ ಸಾಚಾತನ ಮತ್ತು ನೈಜತೆಯನ್ನು ಸಾಬೀತು ಪಡಿಸುವ ಸಮಯ ಹಾಗೂ ಅಗ್ನಿಪರೀಕ್ಷೆ ಒದಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ
ಕೆವೈ ನಂಜೇಗೌಡರೇ ಮಾಲೂರು ಶಾಸಕ: ಸುಪ್ರೀಂಕೋರ್ಟ್
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರಿಗೆ ಹೆಚ್ಚು ಮತಗಳು ಬಂದಿವೆ. ನಂಜೇಗೌಡಗೆ 50,957 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥಗೌಡಗೆ 50,707 ಮತಗಳು ಬಂದಿವೆ. ಹೀಗಾಗಿ ನಂಜೇಗೌಡ ಅವರೇ ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಾರೆ
ಉಡುಪಿಯ ಯುವಕ ಅಬುಧಾಬಿಯಲ್ಲಿ ಖರೀದಿಸಿದ ಟಿಕೆಟ್‌ಗೆ ಬಂತು 49 ಕೋಟಿ ರೂ.
ಉಡುಪಿಯ ಯುವಕನೊಬ್ಬ ಸ್ನೇಹಿತನೊಂದಿಗೆ ಸೇರಿ ಖರೀದಿಸಿದ ಅಬುಧಾಬಿಯ ಲಕ್ಕಿ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಲಭಿಸಿದೆ. ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಬಹುಮಾನ ವಿಜೇತರಾಗಿದ್ದು, 20 ಮಿಲಿಯನ್ ದಿರಮ್ ಬಹುಮಾನ ಸಿಕ್ಕಿದೆ. ಅಬುಧಾಬಿಯಲ್ಲಿ ಬಿಗ್ ಟಿಕೆಟ್
ಬೆಳೆದ ಮೂಲಂಗಿಯನ್ನೇ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾದ ತುಮಕೂರು ರೈತ
ತುಮಕೂರಿನಲ್ಲಿ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಅಲೆದಾಡಿಸುತ್ತಿರುವುದರಿಂದ ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ಘಟನೆ ನಡೆದಿದೆ. ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ತಾಲೂಕು ಕಚೇರಿ
ಬೆಂಗಳೂರಿನಲ್ಲಿ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ಆಗಾಗ ಹುಸಿ ಬಾಂಬ್ ಕರೆಗಳು ಸದ್ದು ಮಾಡುತ್ತಿದ್ದು, ಹಲಸೂರು ಬಳಿ ಇರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಜನವರಿ 30ರಂದು ಬಂದಿದ್ದ ಬೆದರಿಕೆ ಮೇಲ್ ಬಂದಿದ್ದು, 5 ಆರ್‌ಡಿಎಕ್ಸ್ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ
ಮಹಿಳೆಯ ಅಪಹರಣ: ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್, ಹೆಚ್.ಡಿ ರೇವಣ್ಣಗೆ ಸಂಕಷ್ಟ
ಕೆ.ಆರ್. ನಗರ ಮಹಿಳೆಯ ಅಪಹರಣ ಪ್ರಕರಣ ರದ್ದು ಕೋರಿ ಶಾಸಕ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಹಿಂದೆ ವಿಚಾರಣಾ ನ್ಯಾಯಾಲಯವು ರೇವಣ್ಣ ವಿರುದ್ಧ ದೋಷಾರೋಪಣೆ ಹೊರಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು, ಆ ತಡೆಯಾಜ್ಞೆಯನ್ನು ತೆರವು




