Menu

ಯಮುನಾ  ನೀರು ಕುಡಿದು ಬೂಟಾಟಿಕೆಗೆ ‘ನೀರು ಸುಸ್ವಚ್ಛ’ ಎಂದ ಬಿಜೆಪಿ ಸಂಸದ ಮನೋಜ್ ತಿವಾರಿ

ಉದಯಕಾಲ ನ್ಯೂಸ್‌, ನವದೆಹಲಿ: ದೆಹಲಿಯ ಜೀವನಾಡಿ ಹಾಗೂ ವರ್ಷಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ಯಮುನಾ ನದಿ ರಾಜಕೀಯ ವಲಯದಲ್ಲಿ ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮೂರ್ಖ ಸಂಸದ ನೇರವಾಗಿ ಯಮುನಾ ನದಿಗೆ ಇಳಿದು ಸ್ನಾನ ಮಾಡಿ, ನೀರನ್ನು ಕುಡಿದು “ನದಿಯ ನೀರು ಈಗ ಸಂಪೂರ್ಣ ಸ್ವಚ್ಛವಾಗಿದೆ” ಎಂದು ಜನರಿಗೆ ಕಣ್ಣಿಗೆ ಮಣ್ಣೆರಚುವ ಹೇಳಿಕೆ ನೀಡಿದ್ದಾರೆ. ವಾಸ್ತವದ ಸಂಗತಿಯೆಂದರೆ ದೆಹಲಿಯ ಜಮುನಾ ನದಿ ಮಲಿನಗೊಂಡು ಗಬ್ಬೆದ್ದು ನಾರುತ್ತಿದೆ.

ಸೋನಿಯಾ ವಿಹಾರ್ ಘಾಟ್‌ನಲ್ಲಿ ಸಂಸದ ಮನೋಜ್ ತಿವಾರಿ ತೀಟೆ ಸ್ನಾನ

ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ಬಿಜೆಪಿ ಸಂಸದ ಮನೋಜ್ ತಿವಾರಿ ತನ್ನ ತೀಟೆ ತೀರಿಸಿಕೊಳ್ಳಲು ದೆಹಲಿಯ ಸೋನಿಯಾ ವಿಹಾರ್ ಘಾಟ್‌ನಲ್ಲಿ ಯಮುನಾ ನದಿಗೆ ಇಳಿದು ಮಿಂದೆದ್ದರು. ಸರ್ಕಾರದ ಪರಿಣಾಮಕಾರಿ ಸ್ವಚ್ಛತಾ ಕಾರ್ಯಗಳಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಯಮುನಾ ನದಿಯ ಮಾಲಿನ್ಯದ ಮಟ್ಟ ಅರ್ಧದಷ್ಟು ಕಡಿಮೆಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ದೆಹಲಿ ನಾಗರಿಕರ ಆಕ್ರೋಶಕ್ಕೆ ಗುರಿಯಾಗದೆ.

ನದಿಯ ನೀರು ಮಲಿನಗೊಂಡಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ತಿವಾರಿ, ತಾನು ಸ್ವತಃ ಸೋನಿಯಾ ವಿಹಾರ್ ಘಾಟ್‌ನಲ್ಲಿ ನದಿಯ ನೀರನ್ನು ಧಾರ್ಮಿಕ ವಿಧಿಯಂತೆ ‘ಆಚಮನ’ (ಬಾಯಿಗೆ ನೀರನ್ನು ಸೇವಿಸುವುದು) ಮಾಡಿದ್ದೇನೆ. ನದಿಯ ನೀರು ಈಗ ಕುಡಿಯಲು ಮತ್ತು ಸ್ನಾನ ಮಾಡಲು ಯೋಗ್ಯವಾಗಿದೆ ಎಂದು ಸಾಬೀತುಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ದೆಹಲಿಯನ್ನು ದೀರ್ಘಕಾಲ ಆಳಿದ ಆಮ್ ಆದ್ಮಿ ಪಕ್ಷ (AAP) ಸಂಪೂರ್ಣವಾಗಿ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡ ಮನೋಜ್ ತಿವಾರಿ, ಪ್ರಸ್ತುತ ಬಿಜೆಪಿ ಸರ್ಕಾರ ಹಾಗೂ ಆಡಳಿತಾತ್ಮಕ ಯತ್ನಗಳಿಂದಲೇ ನದಿಗೆ ಮರುಜೀವ ಸಿಗುತ್ತಿದೆ ಎಂದು ಶ್ಲಾಘಿಸಿದರು. ಏನೇ ಆಗಲಿ ಈ ಅಡ್ನಾಡಿ ಬಿಜೆಪಿ ಸಂಸದ ಜನರಿಗೆ ಮಂಕುಬೂದಿ ಎರಚೋ ಕೆಲಸ ಮಾಡಿದ್ದಾನೆ. ಸಂಸದನ ಈ ವಿನೂತನ ಪ್ರತಿಭಟನೆ ಹಾಗೂ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

#YamunaRiver #ManojTiwari #DelhiNews #BJPMP #SoniaVihar #ChhathPuja #UdayakalaNews #YamunaCleanup

Related Posts

Leave a Reply

Your email address will not be published. Required fields are marked *