Menu

ಸರ್ಕಾರಕ್ಕೆ ಜಿಬಿಎ ಚುನಾವಣೆಯ ಸವಾಲು

ಬೆಂಗಳೂರಿನ ಎಂಟೂ ದಿಕ್ಕುಗಳಿಂದು ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಲಕ್ಷಾಂತರ ಮಂದಿ ಹೊರ ರಾಜ್ಯದವರು ಹೊರ ಬೆಂಗಳೂರಿನಲ್ಲಿ ಹಲವು ಹತ್ತು ವರ್ಷವಳಿಂದಲೂ ಠಿಕಾಣಿ ಹಾಕಿದ್ದಾರೆ. ಹೀಗೆ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹಾಕಿದವರೆಲ್ಲರೂ ಇಲ್ಲಿನ ಮತದಾರರಾಗಿಲ್ಲ.

ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಚುನಾವಣೆ- ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲು. ಕಳೆದ ಮೂರು ವರ್ಷಗಳಿಂದಲೂ ಬೃಹತ್ ಮಹಾನಗರಪಾಲಿಕೆ ಆಗಿದ್ದ ಬೆಂಗಳೂರಿಗೆ ಚುನಾಯಿತ ಮಂಡಳಿ ಇಲ್ಲ ! ಒಂದೊಂದು ಬಾರಿಯೂ ಒಂದೊಂದು ಸಮಸ್ಯೆ. ಈಗಲೂ ಅಂತಹ ಸಮಸ್ಯೆಗಳಿಂದ ಜಿಬಿಎ ಪಾರಾಗಿಲ್ಲ.

ಬೆಳೆಯುವ ಬೆಂಗಳೂರಿಗೆ ಯಾವ ಸರ್ಕಾರವೂ ಲಗಾಮು ಹಾಕಲು ಆಗುವುದಿಲ್ಲ. ಇದು ಅಸಾಧ್ಯ. ಈ ಕಾರಣದಿಂದಲೇ ಕಳೆದ ಮೂರು ದಶಕಗಳ ಅವಧಿಯಲ್ಲಿ ಹೊರ ಬೆಂಗಳೂರಿನಲ್ಲಿ ಅನಧಿಕೃತ ಬಡಾವಣೆಗಳು ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿರುವುದು. ಇವುಗಳ ಸಕ್ರಮೀಕರಣ ಮತ್ತು ಕಂದಾಯ ಭೂಮಿಯಲ್ಲಿ ನಿರ್ಮಿತ ಕಟ್ಟಡಗಳಿಗೆ ಖಾತಾ ಇವೆಲ್ಲವೂ ಜಿಬಿಎ ಚುನಾವಣೆಗೆ ಸಂಬಂಧಿಸಿದ್ದು. ಇವುಗಳ ಮಧ್ಯೆ ಬಿಬಿಎಂಪಿ ಈಗ ಗ್ರೇಟರ್ ಬೆಂಗಳೂರು ಆಗಿ ಪರಿವರ್ತಿತವಾಗಿರುವುದು. ಪರಿವರ್ತನೆ ಎಂದರೆ ಇದು ಕೇವಲ ಭೂಮಿ ಅಥವಾ ಚೆಕ್ಕು ಬಂದಿಗಳ ಬದಲಾವಣೆ ಅಲ್ಲ.

ಬೆಂಗಳೂರಿನ ಎಂಟೂ ದಿಕ್ಕುಗಳಿಂದು ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಲಕ್ಷಾಂತರ ಮಂದಿ ಹೊರ ರಾಜ್ಯದವರು ಹೊರ ಬೆಂಗಳೂರಿನಲ್ಲಿ ಹಲವು ಹತ್ತು ವರ್ಷವಳಿಂದಲೂ ಠಿಕಾಣಿ ಹಾಕಿದ್ದಾರೆ. ಹೀಗೆ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹಾಕಿದವರೆಲ್ಲರೂ ಇಲ್ಲಿನ ಮತದಾರರಾಗಿಲ್ಲ. ಅವರ ಮತ ಹಕ್ಕುಗಳ ಚಲಾವಣೆ ಮತ್ತು ಆಧಾರ್ ಇರುವುದು ತೆಲಂಗಾಣ ಮತ್ತು ಆಂಧ್ರದಲ್ಲಿ . ಎರಡೆರೆಡು ಗುರುತಿನ ಚೀಟಿ ಮತ್ತು ನಕಲಿ ಆಧಾರ್ ಮೂಲಕ ಬೆಂಗಳೂರಿನಲ್ಲಿ ಚಲಾವಣೆ ಆಗುತ್ತಿರುವ ಮತದಾರರ ಬಗ್ಗೆ ಸರ್ಕಾರಕ್ಕೆ ಮತ್ತು ಚುನಾವಣೆ ಆಯೋಗಕ್ಕೆ ನಿಖರವಾದ ಮಾಹಿತಿ ಇದೆ ಎಂಬುದು ಅನುಮಾನ. ಈ ಮತದಾರರೇ ಇಂದು ಕನ್ನಡದ ಅಸ್ಮಿತೆ ಮತ್ತು ಕನ್ನಡದ ನೆಲ, ಜಲ ಮತ್ತು ಭಾಷೆಗೆ ಅತಿದೊಡ್ಡ ಸಮಸ್ಯೆ ಮತ್ತು ಸವಾಲು ಆಗಿರುವುದು.

ಒಟ್ಟಿನಲ್ಲಿ ಈಗ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ ಮುಂದಿನ ಆಗಸ್ಟ್ ೩೧ ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲು ಸೂಚನೆ ದೊರೆತಿದೆ. ಈ ಚುನಾವಣೆ ಮುಂದಿನ ಜೂನ್ ತಿಂಗಳಿನಲ್ಲಿಯೇ ಪೂರ್ಣಗೊಂಡು ಚುನಾಯಿತ ಮಂಡಳಿ ರಚನೆ ಆಗಬೇಕಿತ್ತು. ಆದರೆ ಸರ್ಕಾರವೇ ಈ ಅವಧಿಯಲ್ಲಿ ಚುನಾವಣೆ ನಡೆಸಲು ಸಮಸ್ಯೆ ಇದೆ ಎಂಬುದನ್ನು ನ್ಯಾಯಪೀಠದ ಮುಂದೆ ಇಟ್ಟಿತ್ತು. ಇದಾದ ಬಳಿಕ ಈಗ ಆಗಸ್ಟ್ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸಲು ನ್ಯಾಯಪೀಠದ ಮುಂದೆ ಒಪ್ಪಿರುವುದು ಸರಿಯಷ್ಟೆ ಜಿಬಿಎ ರಚನೆಯಾದ ಬಳಿಕ ಬದಲಾಗಿರುವ ವಾರ್ಡುಗಳು ಮತ್ತು ಅವುಗಳ ಮೀಸಲು ನಿಗದಿ ಸರ್ಕಾರ ಮತ್ತು ಚುನಾವಣೆ ಆಯೋಗಕ್ಕೆ ತಾಂತ್ರಿಕವಾಗಿ ಸವಾಲನ್ನು ಒಡ್ಡುವ ವಿಷಯವಾಗಿದೆ. ಇದನ್ನು ಸರ್ಕಾರ ಮತ್ತು ಆಯೋಗವು ಸಕಾಲದಲ್ಲಿ ಸಮರ್ಪಕವಾಗಿ ನಿರ್ವಹಿಸಿದಲ್ಲಿ ಐತಿಹಾಸಿಕ ಜಿಬಿಎಗೆ ಚುನಾವಣೆಗಳನ್ನು ನಿರ್ವಹಿಸಲು ಸಾಧ್ಯವಾದೀತು ಮತ್ತು ಈ ಘನತೆ ಸಿದ್ದರಾಮಯ್ಯ- ಡಿಕೆಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಲಭಿಸೀತು.

Related Posts

Leave a Reply

Your email address will not be published. Required fields are marked *